WhatsApp Group Join Now

ಅಂಜೂರದ ಹಣ್ಣು ನೋಡೋಕೆ ಹಳ್ಳಿ ಕಡೆ ಇರುವಂತ ಅತ್ತಿ ಹಣ್ಣಿನ ರೀತಿಯಲ್ಲೇ ಇರುತ್ತದೆ. ಆದರೆ ಈ ಎರಡು ಕೂಡ ಬೇರೆ ಬೇರೆ, ಈ ಅಂಜೂರದ ಹಣ್ಣನ್ನು ತಿನ್ನೋದ್ರಿಂದ ದೇಹಕ್ಕೆ ಹಲವಾರು ಆರೋಗ್ಯಕಾರಿ ಲಾಭಗಳು ದೊರೆಯುತ್ತವೆ. ಹಾಗಾದರೆ ಈ ಹಣ್ಣಿನ ಸೇವೆನೆಯಿಂದ ಸಿಗುವ ಲಾಭಗಳೇನು ಗೊತ್ತಾ..!

ಮಲಬದ್ಧತೆ ನಿವಾರಿಸುತ್ತದೆ: ಅಂಜೂರ ಹಣ್ಣಿನಲ್ಲಿ ನಾರಿನಂಶ ಅಧಿಕ ಪ್ರಮಾಣದಲ್ಲಿ ಇದೆ. ಈ ನಾರಿನಂಶ ನಮ್ಮ ದೇಹದಲ್ಲಿ ತಿಂದ ಆಹಾರವನ್ನು ಜೀರ್ಣಿಸಲು ಸಹಕಾರಿಯಾಗುವುದರ ಮೂಲಕ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.

ಮೂಲವ್ಯಾಧಿಯನ್ನು ಗುಣಪಡಿಸುತ್ತದೆ: ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಈ ಸಮಸ್ಯೆ ನಿವಾರಣೆಯಾಗುವುದು.

ಈ ಅಂಜೂರದ ಹಣ್ಣಿನಲ್ಲಿ ಹೇರಳವಾದ ಖನಿಜಾಂಶಗಳು ಹಾಗೂ ವಿಟಮಿನ್‌ಗಳಿವೆ. ಆದ್ದರಿಂದ ಈ ಹಣ್ಣನ್ನುತಿನ್ನುವುದು ಒಳ್ಳೆಯದು. ಇದರಲ್ಲಿರುವ ವಿಟಮಿನ್‌ ಎ, ವಿಟಮಿನ್‌ ಬಿ1, ವಿಟಮಿನ್‌ ಬಿ2, ಕ್ಯಾಲ್ಸಿಯಂ, ಕಬ್ಬಿಣದಂಶ, ರಂಜಕದ ಅಂಶ, ಸೋಡಿಯಂ,ಕ್ಲೋರೀನ್‌ಗಳಿರುತ್ತವೆ. ಇವು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಬಲ್ಲದು.

ಅಂಜೂರದ ಹಣ್ಣು ಹೇಗೆ ಕೆಲಸ ಮಾಡುತ್ತದೆ ಗೊತ್ತಾ? ದೇಹದ ರಕ್ತದಲ್ಲಿರುವ ಟ್ರಿಗ್ಲಸೆರೈಡ್‌ ಅಂಶವನ್ನು ಕಡಿಮೆ ಮಾಡುತ್ತದೆ. ಈ ಅಂಶವು ಹೆಚ್ಚಾದರೆ ತೂಕ ಹಾಗೂ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ತಿಂದರೆ ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತದೆ.

ಈ ಅಂಜೂರ ತಿನ್ನುವುದು ಒಳಿತು. ಇದರಿಂದ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆಯನ್ನು ತಡೆಗಟ್ಟಬಹುದು. ಲೈಂಗಿಕ ಹಾರ್ಮೋನ್‌ಗಳು ಹೆಚ್ಚಾಗುವಂತೆ ಮಾಡಿ ಲೈಂಗಿಕ ನಿಶ್ಯಕ್ತಿಯನ್ನು ಹೋಗಲಾಡಿಸಿ. ಲೈಂಗಿಕ ಕ್ರಿಯೆಗೆ ಸಹಕಾರಿಯಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳ ಬಲಗೊಳ್ಳುತ್ತವೆ.

WhatsApp Group Join Now

Leave a Reply

Your email address will not be published. Required fields are marked *