ಮೂಲವ್ಯಾಧಿಯಿಂದ ನರಳುವವರಿಗೆ ಲೋಳೆರಸ ಅತ್ಯುತ್ತಮವಾದ ಔಷದ ಎಂದರೆ ಖಂಡಿತ ತಪ್ಪಾಗಲಾರದು. ಲೋಳೆರಸವು ಮೂಲವ್ಯಾಧಿಯ ಬಾಹ್ಯ ಮತ್ತು ಆಂತರಿಕ ನೋವನ್ನು ಕಡಿಮೆ ಮಾಡುತ್ತದೆ.
ಲೋಳೆರಸದ ಎಲೆಯನ್ನು ಕತ್ತರಿಸಿ ಅದರಿಂದ ಲೋಳೆಯನ್ನ ತೆಗೆದು ಪ್ರತಿದಿನ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರ ರಸ ಕಹಿ ಇರುವುದರಿಂದ ಕುಡಿಯಲು ಸ್ವಲ್ಪ ಕಷ್ಟ. ಹಾಗಿರುವಾಗ ಆ ರಸವನ್ನು ಊತ ಬಂದಿರುವ ಜಾಗಕ್ಕೆ ಹಚ್ಚಿ ನಿಧಾನವಾಗಿ ಹತ್ತು ನಿಮಿಷ ಮಸಾಜ್ ಮಾಡಿದರೆ ಸಾಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮೂಲವ್ಯಾಧಿ ಗುಣಮುಖವಾಗುತ್ತದೆ.
ಐಸ್‌ನ ಚಿಕ್ಕ ಚಿಕ್ಕ ತಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ನೋವಿರುವ ಜಾಗದ ಮೇಲೆ ಇಟ್ಟು ನಿಧಾನವಾಗಿ ಮಸಾಜ್ ಮಾಡಿದರೆ ರಕ್ತನಾಳಗಳು ಸಂಚಲನಗೊಂಡು ಉರಿಯೂತ ಮತ್ತು ನೋವು ಬೇಗನೆ ಕಡಿಮೆಯಾಗುತ್ತದೆ.
ಲೋಳೆರಸದ ಲೋಳೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಲೋಳೆರಸ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಬಹಳ ಸಹಾಯಕ. ಇದರಿಂದ ತ್ವಚೆಯ ಮೇಲಿನ ಕಲೆಗಳನ್ನ ನಿವಾರಿಸಬಹುದು.