WhatsApp Group Join Now

ನಾವು ಎಳ್ಳೆಣ್ಣೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ ಆದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳು ತಿಳಿದಿರುವುದಿಲ್ಲ ಮತ್ತು ಎಳ್ಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನುವುದು ನಮಗೆ ತಿಳಿದಿರುವುದಿಲ್ಲ. ಅದನ್ನು ಹೇಗೆ ಬಳಸಬೇಕು ಅನ್ನುವುದು ಇಲ್ಲಿದೆ ನೋಡಿ.

ಆಯುರ್ವೇದದಲ್ಲಿ ಎಳ್ಳೆಣ್ಣೆಯನ್ನು ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದರಿಂದ ನಮ್ಮ ದೇಹದ ಸರ್ವ ನೋವುಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ರಕ್ತದೊತ್ತಡ ನಿಯಂತ್ರಿಸುತ್ತದೆ: ಎಳ್ಳೆಣ್ಣೆಯನ್ನು ನಾವು ಅಡುಗೆಯಲ್ಲಿ ಬಳಸುವದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ತ್ವಚೆಯ ಸೌಂದರ್ಯ ಹೆಚ್ಚಿಸುತ್ತದೆ: ಚಳಿಗಾಲದ ತ್ವಚೆಯ ಸಮಸ್ಯೆ ಹಾಗೂ ಕೂದಲಿನ ಸಮಸ್ಯೆ ನಿವಾರಿಸಲು ಎಳ್ಳೆಣ್ಣೆಯಿಂದ ಕೂದಲು ಮತ್ತು ತ್ವಚೆಯ ಮೇಲೆ ಮಸಾಜ್ ಮಾಡಿದರೆ ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೂ ಚಳಿಗಾಲದಲ್ಲಿ ಆರೋಗ್ಯವನ್ನು ಬೆಚ್ಚಗಿರಿಸಲು ಎಳ್ಳೆಣ್ಣೆ ಮಸಾಜ್ ಅತ್ಯುತ್ತಮವಾಗಿದೆ.

ಮೂಳೆಗಳ ಮತ್ತು ಕೀಲುಗಳ ಆರೋಗ್ಯಕ್ಕೆ ಉತ್ತಮ: ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ದೈಹಿಕ ಒತ್ತಡ ನಿವಾರಣೆಯಾಗುತ್ತದೆ. ಜೊತೆಗೆ ಸ್ನಾಯುಗಳು, ಮೂಳೆಗಳು, ಕೀಲುಗಳು ಮತ್ತು ಚರ್ಮ ಶಕ್ತಿಯನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯಕರವಾಗಿರುತ್ತದೆ.

ಇದಷ್ಟೇ ಅಲ್ಲದೆ ಶರೀರದಲ್ಲಿ ತುರಿಕೆ, ಉರಿ ಏನಾದರು ಉಂಟಾದರೆ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು ಮತ್ತು ಮುಖವು ಕಾಂತಿಯುತವಾಗಿ ಹೊಳೆಯಬೇಕು ಎಂದರೆ ಮುಖಕ್ಕೆ ಎಳ್ಳೆಣ್ಣೆ ಮಸಾಜ್ ಮಾಡಬಹುದಾಗಿದೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *