ಮೃತಪಟ್ಟ ವ್ಯಕ್ತಿಯ ಪ್ಯಾನ್ ಕಾರ್ಡ್ ಅನ್ನ ಏನು ಮಾಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಸರ್ಕಾರದಿಂದ ಹೊಸ ರೂಲ್ಸ್ ಜಾರಿ. ನಮ್ಮ ದೇಶದ ಪ್ರಜೆ ಎಂದ ಮೇಲೆ ಅವನ ಗುರುತಿನ ಚೀಟಿಯಲ್ಲಿ ಪ್ಯಾನ್ ಕಾರ್ಡು ಅತಿ ಅವಶ್ಯಕವಾಗಿದೆ. ಯಾವುದೇ ಸರ್ಕಾರಿ ಕೆಲಸಗಳಿಗಾಗಲಿ ಅರ್ಜಿ ಹಾಕುವುದಕ್ಕಾಗಲಿ ಯಾವುದೇ ನಮ್ಮ ಐಡೆಂಟಿಟಿಯನ್ನ ಗುರುತಿಸಲಿಕ್ಕೆ ಪ್ಯಾನ್ ಕಾರ್ಡು ಬಹಳ ಮುಖ್ಯ.ನಮ್ಮ ದೇಶದ ಪ್ರಜೆಯಿಂದ ಮೇಲೆ ಹುಟ್ಟಿದ ಮಗುವಿನಿಂದಲೂ ಹಿಡಿದು ಪ್ಯಾನ್ ಕಾರ್ಡ್ ಅತಿ ಅವಶ್ಯಕವಾಗಿದೆ.
ನಮ್ಮ ಗುರುತನ್ನ ಹಚ್ಚಲಿಕ್ಕೆ ಅಂದರೆ ಈ ದೇಶದ ಪ್ರಜೆ ಅಂತ ತಿಳಿಯಲಿಕ್ಕೆ ಇರುವ ಒಂದೇ ಒಂದು ಗುರುತು ಎಂದರೆ ಪ್ಯಾನ್ ಕಾರ್ಡು ಮತ್ತು ಆಧಾರ ಕಾರ್ಡು. ಅದಕ್ಕೆ ಸರ್ಕಾರ ಪ್ಯಾನ್ ಕಾರ್ಡ್ ಅನ್ನ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲು ತಿಳಿಸಿತ್ತು ಈಗ ಅದರ ಅವಧಿಯು ಕೂಡ ಮುಗಿದು ಹೋಗಿದೆ. ಆದರೆ ಈಗ ಸರ್ಕಾರ ಒಂದು ಹೊಸ ನಿಯಮವನ್ನ ಹೊರಡಿಸಿದೆ. ಆಧಾರ ಕಾರ್ಡ ಜೊತೆಗೆ ಪ್ಯಾನ್ ಕಾರ್ಡ್ ನ ಲಿಂಕ್ ಮಾಡಬೇಕು ಎನ್ನುವ ಅವಧಿಯನ್ನು ಮುಂದೂಡಲಾಗಿದೆ.
ಇನ್ನು ಸ್ವಲ್ಪ ಕಾಲಾವಕಾಶವನ್ನು ಜನತೆಗೆ ಕೊಟ್ಟು ಆಧಾರ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನ ಲಿಂಕ್ ಮಾಡಲೇಬೇಕು ಎನ್ನುವ ಸೂಚನೆಯನ್ನು ಹೊರಡಿಸಿದೆ. ಕೊನೆ ಪಕ್ಷ ಲಿಂಕ್ ಮಾಡದೆ ಹೋದಲ್ಲಿ ಪ್ಯಾನ್ ಕಾರ್ಡ್ ಅಲ್ಲ ರದ್ದು ಮಾಡಲಾಗುವುದು. ನೋಡಿ ಎಲ್ಲ ಕೆಲಸಗಳಿಗೆ ಸಂಬಂಧಿಸಿದ ಈ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಒಂಥರಾ ಜೋಡಿ ಇದ್ದ ಹಾಗೆ. ನೀವು ಯಾವುದೇ ಕೆಲಸಕ್ಕೆ ಹೋಗಿ ಬ್ಯಾಂಕ್ ಖಾತೆ ತೆರೆಯಲು ಅಥವಾ ಇನ್ನಿತರ ಯಾವುದೇ ಸರ್ಕಾರಿ ಕೆಲಸಕ್ಕೆ ಹೋಗಿ ಅರ್ಜಿ ಹಾಕಲಿಕ್ಕೆ ಯಾವುದೇ ಕೆಲಸಕ್ಕೆ ಹೋದರು ನಿಮಗೆ ಪ್ಯಾನ್ ಕಾರ್ಡ್ ಹಾಗೂ ಆಧಾರ ಕಾರ್ಡನ್ನು ಕೇಳೇ ಕೇಳ್ತಾರೆ. ಹಾಗಾಗಿ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅಲ್ಲ ಲಿಂಕ್ ಮಾಡಲೇಬೇಕು ಇಲ್ಲ ಅಂದ್ರೆ ಹಣಕಾಸಿನ ವ್ಯವಹಾರಕ್ಕೆ ಹಣಕಾಸಿನ ಸಂಬಂಧಿಸಿದ ವ್ಯವಹಾರಕ್ಕೆ ತೊಂದರೆ ಆಗುತ್ತದೆ ಅಂತ ಸರಕಾರ ಅವಧಿಯನ್ನ ಸ್ವಲ್ಪ ಮುಂದೂಡಿದೆ. ಅವರಿಗೆ ಅಂದರೆ ಜನಗಳಿಗೆ ಇನ್ನೂ ಹೆಚ್ಚಿನ ಕಾಲಾವಕಾಶವನ್ನು ಕೊಟ್ಟಿದೆ. ಕೊನೆ ಪಕ್ಷ ಆಧಾರ ಕಾರ್ಡ್ ಜೊತೆ ಪಾನ್ ಕಾರ್ಡು ಲಿಂಕ್ ಆಗದೆ ಇದ್ದಲ್ಲಿ ಆ ಪ್ಯಾನ್ ಕಾರ್ಡ್ ನ ರದ್ದು ಮಾಡಲಾಗುವುದು ಎಂಬ ಆದೇಶವನ್ನು ಹೊರಡಿಸಿದೆ.
ನೋಡಿ ಒಂದು ವ್ಯಕ್ತಿಯ ಪ್ಯಾನ್ ಕಾರ್ಡ್ ತಗೊಂಡು ನಾವು ಅವನ ಹಣಕಾಸಿನ ವಿಚಾರಗಳನ್ನೆಲ್ಲ ತಿಳಿದುಕೊಳ್ಳಬಹುದು. ಈ ಯುಗದಲ್ಲಿ ಇದರ ಬಗ್ಗೆ ತುಂಬಾ ಕ್ರೈಂ ನಡಿತಾ ಇದೆ. ಆದ್ದರಿಂದ ಸರ್ಕಾರವು ಒಂದು ಆದೇಶವನ್ನು ಹೊರಡಿಸಿದೆ ಒಬ್ಬ ವ್ಯಕ್ತಿ ಸತ್ತು ಹೋದ ನಂತರ ಅವನ ಪ್ಯಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆಗೆ ಅವನ ಪ್ಯಾನ್ ಕಾರ್ಡನ್ನ ಒಪ್ಪಿಸತಕ್ಕದ್ದು ಎನ್ನುವಂತದ್ದು.ಮೃತ ಪಟ್ಟ ವ್ಯಕ್ತಿಯ ಎಲ್ಲ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ನೀವು ಕೊಟ್ಟು ಬರಬೇಕು. ಇದು ತುಂಬಾ ಸೇಫ್ ಅಂತ ಯೋಚಿಸುತ್ತಿದೆ ಸರ್ಕಾರ.