ಮೆಂತೆ ಬೀಜಗಳನ್ನು ಅನೇಕ ಭಾರತೀಯ ತಯಾರಿಕೆಗಳಲ್ಲಿ ಮಸಾಲೆ ಆಗಿ ಬಳಸಲಾಗುತ್ತದೆ. ಮೆಂತೆ ಕಹಿಯಾಗಿದ್ದರು ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಮೆಂತೆ ಬೀಜ ಮೊಳಕೆ ಹೊಡೆದರೆ ಅದರ ಕಹಿ ಮಾಯವಾಗುತ್ತದೆ ಸುಲಭವಾಗಿ ಜೀರ್ಣವಾಗುತ್ತವೆ. ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇವೆ. ಇದು ದೇಹದ ಆರೋಗ್ಯವನ್ನು ಕಾಪಾಡುವ ಜತೆಗೆ ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು.ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಚಯಾಪಚಯಕ್ಕೆ ಇದು ತುಂಬಾ ಒಳ್ಳೆಯದು.
ಮೆಂತ್ಯೆಕಾಳಿನ ನೀರಿನಿಂದ ಅದ್ಭುತ ಲಾಭಗಳು ಇವೆ. ಇದನ್ನು ನೀವು ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು.ಅಲ್ಲದೆ ಅದರ ಯೋಜನಗಳು ಸಹ ಹೆಚ್ಚಾಗುತ್ತವೆ. ಮೆಂತೆ ಬೀಜದ ಹೆಚ್ಚಿನ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಲು ಅದನ್ನು ಮೊಳಕೆ ಬರಿಸಬೇಕು. ಅಂದರೆ ಮದುವೆಗಳು ಮೊಳಕೆ ಬಂದ ಮೆಂತೆಕಾಳುಗಳನ್ನು ಸೇವನೆ ಮಾಡುವುದರಿಂದ ಯಾವೆಲ್ಲ ಆರೋಗ್ಯಕರ ಪ್ರಯೋಜನಗಳು ಪಡೆಯಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ಈಗಿನ ಕಾಲದಲ್ಲಿ ಪ್ರತಿಯೊಬ್ಬರಲ್ಲೂ ಮಧುಮೇಹದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಾವು ಸೇವಿಸುವ ಆಹಾರ ಪದಾರ್ಥಗಳು ಮತ್ತು ಜೀವನಶೈಲಿ ಹಾಗೂ ಅನುವಂಶಿಕ ಕಾರಣದಿಂದಲೂ ಮಧುಮೇಹ ಸಮಸ್ಯೆ ಕಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮಗೆ ಮಧುಮೇಹದ ಸಮಸ್ಯೆ ಇದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನೀವು ನಿಮ್ಮ ಆಹಾರದಲ್ಲಿ ಮೆಂತೆ ಬೀಜಗಳನ್ನು ಸೇವಿಸಿರುವುದರಿಂದ ಮಧುಮೇಹವನ್ನು ಕಂಟ್ರೋಲ್ ನಲ್ಲಿ ಇಡಬಹುದು.
ಇನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಅಥವಾ ತಿನ್ನುವ ಆಹಾರದಲ್ಲಿ ಏರುಪೇರು ಆಗಿ ಅನಾರೋಗ್ಯಕ್ಕೆ ಒಳಗಾಗಿದ್ದರೆ ಮೆಂತೆ ಬೀಜಗಳು ನಿಮಗೆ ಪ್ರಯೋಜನಕಾರಿ ಆಗಬಲ್ಲದು. ಮೆಂತೆ ಬೀಜಗಳು ಅಂತಹ ಉತ್ಕರ್ಷಕ ಗುಣಗಳ ಯೋಜನೆಗಳನ್ನು ಹೊಂದಿವೆ. ಕಫ ಹೆಚ್ಚಾಗಿ ಇರುವಂತಹ ಜನರ ದೇಹದಲ್ಲಿ ಉಷ್ಣತೆಯು ಕಡಿಮೆ ಇರುವುದು ಎಂದು ಆಯುರ್ವೇದವು ಹೇಳುತ್ತದೆ.ಕಫ ಇರುವ ವ್ಯಕ್ತಿಗಳಲ್ಲಿ ಪ್ರತಿರೋಧಕ ಶಕ್ತಿಯು ಕಡಿಮೆ ಇರುವುದು ಮತ್ತು ಇದರಿಂದ ಶೀತ, ಕೆಮ್ಮು ಮತ್ತು ಜ್ವರ ಬರುವುದು.
ಮೆಂತ್ಯೆ ನೀರು ಕುಡಿದರೆ ಅದು ದೇಹಕ್ಕೆ ಉಷ್ಣತೆ ನೀಡುವುದು ಹಾಗೂ ದೇಹದ ಪ್ರತಿರೋಧಕ ಶಕ್ತಿ ಕೂಡ ವೃದ್ಧಿಸುವುದು.ಇದರಿಂದ ನಿಮ್ಮ ರೋಗನಿರೋಧಕ ಶಕ್ತಿಯುತ್ತಮವಾಗಿರುತ್ತದೆ ಮೆಂತೆ ಬೀಜಗಳು ಮೊಳಕೆ ಹೊಡೆದ ನಂತರ ಮೃದುವಾಗುತ್ತದೆ. ಜೊತೆಗೆ ಅದರ ಕಹಿಮೆ ಆಗುತ್ತದೆ. ಅವುಗಳನ್ನು ಜೀರ್ಣಿಸಿಕೊಳ್ಳಲು ತುಂಬಾ ಸುಲಭವಾಗಿದೆ.