ನಮಸ್ತೆ ನಮ್ಮ ಆತ್ಮೀಯ ಓದುಗರೇ, ನಾವು ಇಲ್ಲಿಯವರೆಗೂ ಮೆಂತ್ಯದ ಉಪಯೋಗವನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ತುಂಬಾ ತಿಳಿದಿದ್ದೇವೆ, ಆದರೆ ಇಂದಿನ ಲೇಖನದಲ್ಲಿ ಮೆಂತ್ಯದ ಸೊಪ್ಪು, ಕಾಳುಗಳು ಹೇಗೆ ನಮ್ಮ ದೇಹದ ಮತ್ತು ಮುಖದ ಸೌಂದರ್ಯಕ್ಕೇ ಸಹಕಾರಿಯಾಗಿದೆ ತಿಳಿಯೋಣ. ಮೆಂತ್ಯ ಕಹಿ ಇದ್ದರೂ ಆರೋಗ್ಯಕ್ಕೆ ಸಿಹಿ. ಇದು ಬರೀ ಮಧುಮೇಹ ಇದ್ದವರು ಮಾತ್ರ ಬಳಸುವುದು ಎಂಬ ತಪ್ಪು ಕಲ್ಪನೆ ಎಲ್ಲರಲ್ಲೂ ಸಾಮಾನ್ಯವಾಗಿ ಬೆಳೆದಿದೆ. ಇಂದಿನ ಲೇಖನ ಅದನ್ನು ಸುಳ್ಳು ಮಾಡಿ ಅದರ ಇನ್ನೂ ಆರೋಗ್ಯಕರ ಗುಣಗಳು, ಲಾಭಗಳನ್ನು ತಿಳಿಸಿಕೊಡಲಿದೆ. 1. ಒಂದು ಟೀ ಚಮಚ ಮೆಂತ್ಯವನ್ನು ಗಟ್ಟಿ ಮೊಸರಿನಲ್ಲಿ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಅಥವಾ ರಕ್ತಬೇಧಿ ಕಡಿಮೆಯಾಗುವುದು ಮತ್ತು ದಾಳಿಂಬೆ ಹಣ್ಣಿನಿಂದ ಬೀಜವನ್ನು ಸುಲಿದುಕೊಂದು ನಂತರ ಉಳಿಯುವ ದಿಂಡಿನಿಂದ ಕಷಾಯ ತಯಾರಿಸಿ ಈ ಕಷಾಯವನ್ನು ಮೆಂತ್ಯದ ಕಶಾಯದೊಂದಿಗೆ ಸೇರಿಸಿ ಜೇನುತುಪ್ಪದೊಂದಿಗೆ ಕುಡಿದರೆ ಆಮಶಂಕೆ ನಿವಾರಣೆ ಆಗುತ್ತದೆ.
2. ಮೆಂತ್ಯವನ್ನು ಹುರಿದು ಕುಟ್ಟಿ ಪುಡಿ ಮಾಡಿ ಒಂದು ಟೀ ಚಮಚದಷ್ಟು ಪುಡಿಯನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಎರೆಡು ಸಲದಂತೆ ಕುಡಿದರೆ ಆಮಶಂಕೆ ಶಂತವಾಗುವುದು. 3. ಮೆಂತ್ಯ, ದೊಡ್ಡಪತ್ರೆ, ಹಾಗಲಕಾಯಿ, ಅರಿಶಿನ, ಸೇಬೇಚಿಗುರು, ಕೊತ್ತಂಬರಿ ಬೀಜ ಇವುಗಳನ್ನು ಸಮವಾಗಿ ತೆಗೆದುಕೊಂಡ ಮೊಸರಿನಲ್ಲಿ ನುಣ್ಣಗೆ ಅರೆದು ಮೈಗೆ ತಿಕ್ಕಿ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸುಮಾರಾಗಿ ಬಿಸಿಯಾಗಿರುವ ನೀರಿನಲ್ಲಿ ಸ್ನಾನ ಮಾಡಿದರೆ ಪಿತ್ತದ ಗಂಧೆಗಳು ವಾಸಿಯಾಗುವುದು. ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು ಸಕ್ಕರೆ ಕೂಡಿಸಿ ಕುಡಿಯುವುದರಿಂದ ಸ್ತನದ ಹಾಲಿನ ಉತ್ಪತ್ತಿ ಅಧಿಕವಾಗುತ್ತದೆ. 4. ಓಮು ಮತ್ತು ಮೆಂತ್ಯದ ಕಷಾಯವನ್ನು ದಿನಕ್ಕೆ ನಾಲ್ಕು ಬಾರಿ ಕುಡಿಯುವುದರಿಂದ ಕಫದ ತೊಂದರೆ ದೂರವಾಗುತ್ತದೆ. 5. ಒಂದು ಕಪ್ಪು ಮೆಂತ್ಯದ ಕಷಾಯ ತಯಾರಿಸಿ ಅದಕ್ಕೆ ಒಂದು ಚಹಾ ಚಮಚ ಹಸಿಯ ಶುಂಠಿ ಕಷಾಯ ಸೇರ್ಸಿ ಜೇನುತುಪ್ಪ ದೊಂದಿಗೆ ಕುಡಿದರೆ ಕಫದ ದೋಷ ನಿವಾರಣೆಯಾಗುವುದು. 6. ಮೆಂತ್ಯದ ಸೊಪ್ಪಿನ ಪಲ್ಯ ಮಾಡಿಕೊಂಡು ಮೆಂತ್ಯದ ದೋಸೆಯೊಂದಿಗೆ ತಿನ್ನುವುದರಿಂದ ಮೈ ಕೈ ನೋವು ಪರಿಹಾರವಾಗುವುದು.
7. ತೆಂಗಿನ ಹಾಲಿನಲ್ಲಿ ಮೆಂತ್ಯವನ್ನು ಅರೆದು ತಲೆಗೆ ಹಚ್ಚಿಕೊಂಡು ಒಂದೆರೆಡು ಗಂಟೆಯ ನಂತರ ಉಗುಗು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರೆ ಬೇಗನೆ ನೆರೆ ಕೂದಲು ಬರುವುದಿಲ್ಲ. ಕೂದಲು ಸೊಂಪಾಗಿ ಬೆಳೆಯುವುದು. 8. ಮೆಂತ್ಯದ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ 24 ಗಂಟೆಗಳ ಕಾಲ ನೆನೆಹಾಕಿ, ನಂತರ ಆ ಎಣ್ಣೆಯನ್ನು ತಲೆಗೆ ಹಚ್ಚುತ್ತಿದ್ದರೆ, ತಣ್ಣೀರಿನಿಂದ ಸ್ನಾನ ಮಾಡುತ್ತಿದ್ದಾರೆ ಬಾಲ ನೆರೆ ಬರುವುದಿಲ್ಲ. 9. ಮೆಂತ್ಯವನ್ನು ಚೆನ್ನಾಗಿ ನೀರಿನಲ್ಲಿ ಅರೆದು ಕುಡಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿ, ಮಾರನೆಯ ದಿನ ಬೆಳಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಅನೇಕ ದಿನಗಳು ಬಿಟ್ಟು ಪುನಃ ಪುನಃ ಇದೇ ರೀತಿ ಅನುಸರಿಸುತ್ತಾ ಬಂದರೆ ಮುಖದ ಚರ್ಮ ಸುಕ್ಕುಗಟ್ಟುವುದಿಲ್ಲಾ. 10. ಹೆಸರುಕಾಳು 250ಗ್ರಾಂ, ಮೆಂತ್ಯ 100ಗ್ರಾಂ, ಗಸಗಸೆ 50ಗ್ರಾಂ, ಅರಿಶಿನ ಕೊಂಬು 50ಗ್ರಾಂ ಇವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಬೆರೆಸಿಕೊಳ್ಳಿ. ಇದೊಂದು ರೀತಿಯ ಸ್ನಾನ ಚೂರ್ಣವಾಗುತ್ತದೆ. ಸೀಗೆಕಾಯಿ ಮತ್ತು ಸೋಪು ಉಪಯೋಗಿಸುವ ಬದಲು ಇದರಿಂದ ಮೈ ಕೈ ಉಜ್ಜಿಕೊಳ್ಳುತ್ತಿದ್ದರೆ ಚರ್ಮದ ಆರೋಗ್ಯ ರಕ್ಷಣೆಯಾಗುತ್ತದೆ. 11. ನೀರಿನಲ್ಲಿ ಮೆಂತ್ಯವನ್ನು ನೆನೆಹಾಕಿ ನಂತರ ಅರೆದು ಅಂಗೈ ಅಂಗಾಲುಗಲಿಗೆ ಹಚ್ಚಿಕೊಂಡರೆ ಅಂಗೈ ಅಂಗಾಲುಗಳಲ್ಲಿ ಉರಿಯುತ್ತಿದ್ದರೇ ಶಮನ ಆಗುತ್ತದೆ. ನೋಡಿದಿರಲ್ಲ ಮೆಂತ್ಯ ಹೇಗೆಲ್ಲಾ ನಮ್ಮ ದೈನಂದಿನ ಜೀವನದಲ್ಲಿ ಹಲವಾರು ರೀತಿಯಲ್ಲಿ ಉಪಯುಕ್ತ ಎಂದು .. ಇದನ್ನು ಬರೀ ಓದಿ ಸುಮ್ಮನಿರದೆ ನೀವು ನಿಮ್ಮ ನಿತ್ಯ ಜೀವನದಲ್ಲಿ ಬಳಸಿ ಇದರ ಉಪಯೋಗಗಳನ್ನು ಪಡೆಯಿರಿ. ನೋಡಿದ್ರಲಾ ಮಿತ್ರರೇ, ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.