ನಮಸ್ತೆ ಪ್ರಿಯ ಓದುಗರೇ, ನಾವು ನಮ್ಮ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಅಡುಗೆಗೆ ಬಳಸುವ ಟೊಮೆಟೊ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು? ಇದನ್ನು ಹಣ್ಣು ಎಂದರೂ ಅಡುಗೆಗೆ ಬಳಸುತ್ತೇವೆ, ಹಾಗೆ ದಿನಪ್ರತಿ ಬಳಸುವ ಈ ಟೊಮೆಟೊ ಹಣ್ಣಿನ ಉಪಯೋಗಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಟೊಮೆಟೊ ಹಣ್ಣನ್ನು ನಾವು ದಿನನಿತ್ಯ ಯಾವುದೋ ಒಂದು ಅಡುಗೆಗೆ ಬಳಸಿಯೇ ಇರುತ್ತೇವೆ, ಆದರೆ ಈ ಟೊಮೆಟೊದಲ್ಲಿ ಕೂಡ ಬೇಕಾದಷ್ಟು ಆರೋಗ್ಯಕ್ಕೆ ಬೇಕಾದ ಅಂಶಗಳು ಇವೆ. ಟೊಮೆಟೊದಲ್ಲಿ ಬೇಕಾದಷ್ಟು ಪೋಷಕಾಂಶಗಳು, ಆಂಟಿ ಆಕ್ಸಿಡೆಂಟ್, ಆಂಟಿ ಇನ್ಫ್ಲಮೇಟರಿ ಗುಣಗಳಿವೆ. ವಿಟಮಿನ್ ಏ ಮತ್ತು ಇ ಹೇರಳವಾಗಿವೆ. ಖನಿಜಾಂಶಗಳು ಜೀವಸತ್ವಗಳು ಇವೆ. ಇವೆಲ್ಲವೂ ಇರುವುದರಿಂದ ಪ್ರತಿನಿತ್ಯ ಅಡುಗೆಗೆ ಬಳಸಲು ಯೋಗ್ಯವಾದದ್ದು ಈ ತರಕಾರಿ. ತರಕಾರಿ ಅಂತ ಆದ್ರೂ ಹೇಳಬಹುದು ಹಣ್ಣು ಅಂತಲೂ ಹೇಳಬಹುದು. ಇದನ್ನು ಹೇಗೆ ಕರೆದರೂ ಹೇಗೆ ಬಳಸಿದರೂ ಇದರಲ್ಲಿ ಬೇಕಾದಷ್ಟು ಉತ್ತಮ ಉಪಯೋಗಗಳು ಇವೆ. ಇವತ್ತು ನಾವು ಮಾಡುತ್ತಿರುವ ಚಟ್ನಿಯಲ್ಲಿ ಹಸಿಯಾಗಿಯೇ ಟೊಮೆಟೊವನ್ನು ಬಳಕೆ ಮಾಡುತ್ತಿದ್ದೇವೆ. ಅಂದ್ರೆ ಇದನ್ನು ನಾವು ಬೆಯಿಸುತ್ತಿಲ್ಲ, ಅದರ ಪೋಷಕಾಂಶಗಳು ಸತ್ತು ಹೋಗುವಂತೆ ಬೇಯಿಸದೆ ಹಸಿಯಾಗಿಯೇ ಬಳಕೆ ಮಾಡುತ್ತಿರುವುದರಿಂದ ಇದು ಹೆಚ್ಚು ಉಪಯುಕ್ತ.
ಇದನ್ನು ಬಳಸುವುದರಿಂದ ಮೆದುಳಿನ ವಿಕಾರಗಳು, ಮೆದುಳನ್ನು ಚುರುಕುಗೊಳಿಸಲು, ಮೆದುಳಿನಲ್ಲಿ ಇರುವಂತಹ ನರ ಮಂಡಲವನ್ನು ಆಕ್ಟಿವೇಟ್ ಅಂದ್ರೆ ಚಲನಶೀಲ ಮಾಡುವಂತ ಕೆಲಸವನ್ನು ಈ ಟೊಮೆಟೊ ಮಾಡುತ್ತದೆ. ಲಿವರ್ ಅಂದ್ರೆ ನಮ್ಮ ಯಕೃತ್ ಸರಿಯಾಗಿ ಕೆಲಸ ಮಾಡಲು ಇದು ಸಹಕಾರಿ. ಇನ್ನೂ ಈ ಟೊಮೆಟೊವನ್ನು ಯಾರು ಸ್ಥೂಲಕಾಯ ಸಮಸ್ಯೆ ಇಂದ ಬಳಲುತ್ತಾ ಇರುತ್ತಾರೆ ಅವರು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂಡಿ ತಿನ್ನುವ ಮೊದಲೇ ಒಂದೊಂದು ಟೊಮೆಟೊ ಹಣ್ಣನ್ನು ಪ್ರತಿನಿತ್ಯ ಒಂದು ತಿಂಗಳು ತಿನ್ನುವುದರಿಂದ ನಿಮ್ಮ ತೂಕದಲ್ಲಿ ಗಮನಿಯವಾದ ಇಳಿಕೆ ಕಂಡು ಬರುತ್ತದೆ. ಇದನ್ನು ತಿನ್ನಲು ಕಷ್ಟ ಎಂದರೆ ಇದರ ರಸವನ್ನು ತೆಗೆದು ಕುಡಿದರೆ ತಕ್ಷಣಕ್ಕೆ ಶಕ್ತಿ ಒದಗಿಸಿ ತೂಕವನ್ನೂ ಇಳಿಸುತ್ತದೆ. ಮತ್ತು ಇದ್ರ ಸೇವನೆ ಇಂದ ಮಾಂಸ ಖಂಡಗಳಿಗೆ ಶಕ್ತಿ ಹೆಚ್ಚುತ್ತದೆ. ತುಂಬಾ ಆಯಾಸ , ಬಳಲಿಕೆ ಅಥವಾ ಬಿಸಿಲಿನಿಂದ ಬಂದಾಗ, ಸುಸ್ತು ಆಗುತ್ತಿದೆ ಎಂದಾಗ ಒಂದು ಲೋಟ ಟೊಮೆಟೊ ರಸವನ್ನು ಸೇವನೆ ಮಾಡುವುದರಿಂದ ತಕ್ಷಣಕ್ಕೆ ಆ ನಿತ್ರಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಟೊಮೆಟೊ ಸೌಂದರ್ಯವರ್ಧಕವಾಗಿಯೂ ಕೂಡ ನಮಗೆ ಸಹಾಯ ಮಾಡುತ್ತದೆ. ಟೊಮೆಟೊ ಹಣ್ಣಿನ ಒಂದು ತೆಳ್ಳದಾಗಿ ಕಟ್ ಮಾಡಿಕೊಂಡು ಸೂರ್ಯನ ಕಿರಣ ಎಲ್ಲಿ ಬಿಳುತ್ತದೆಯೂ ಆ ಮುಖದ ಜಾಗಕ್ಕೆ ಹಚ್ಚಿದರೆ ಈ ಸನ್ ಬರ್ನ್ ಅಂದ್ರೆ ಮುಖ ಅಲ್ಲಲ್ಲಿ ಸುಟ್ಟ ಹಾಗೆ ಆಗಿರುವುದು ಕಡಿಮೆ ಆಗುತ್ತದೆ.
ಇವೆಲ್ಲವುಗಳಿಗಿಂತ ತುಂಬಾ ಮುಖ್ಯವಾದ ಅದ್ಭುತವಾದ ಸಂಗತಿ ಎಂದರೆ, ತುಂಬಾ ಜನಕ್ಕೆ ವೇರಿಕೋಸ್ ವೇನ್ ಸಮಸ್ಯೆ ಇರುತ್ತದೆ. ಅಂದರೆ ಕಾಲಿನಲ್ಲಿ ಹಸಿರು ನರಗಳು ಮೇಲೆ ಮೇಲೆ ಗಂಟಿನ ರೀತಿ ಕಾಣಿಸುತ್ತ ಇರುತ್ತದೆ, ಇದು ರಕ್ತ ಸಂಚಾರ ಚೆನ್ನಾಗಿ ಆಗದೆ ಇದ್ದಾಗ ಬರುವ ಸಮಸ್ಯೆ ಆಗಿದ್ದು ಕಾಲು ನೋವು, ಕಾಳು ಎಳೆತ ಬರುವುದು ಇದರ ಸೂಚನೆ. ಇಂಥ ದೊಡ್ಡ ಸಮಸ್ಯೆಗೆ ಟೊಮೆಟೊ ಹಣ್ಣಲ್ಲಿ ಪರಿಹಾರ ಇದೆ. ಏನಿಲ್ಲ ಟೊಮೆಟೊ ಹಣ್ಣಿನ ರಸವಿರುವ ಒಂದು ತೆಳ್ಳನೆಯ ಭಾಗ ಸೀಳಿ, ಅದನ್ನು ಆ ನರಗಳ ಮೇಲೆ ಚೆನ್ನಾಗಿ 5 ನಿಮಿಷ ಉಜ್ಜಿದರೆ ಕ್ರಮೇಣ ಈ ಸಮಸ್ಯೆ ಪರಿಶಮನ ಆಗುತ್ತದೆ. ಕಣ್ಣಿನ ದೃಷ್ಟಿಗೆ ಕೂಡ ಟೊಮೆಟೊ ತುಂಬಾ ಉಪಯುಕ್ತವಾದ ಹಣ್ಣು. ಈಗ ಟೊಮೆಟೊ ಈರುಳ್ಳಿ ಚಟ್ನಿ ಮಾಡುವ ವಿಧಾನ ನೋಡೋಣ. ಒಂದು ಮಿಕ್ಸಿ ಜಾರ್ ಗೆ ಹೆಚ್ಚಿದ ಹಸಿ ಟೊಮೆಟೊ, ಈರುಳ್ಳಿ, ಹುಣಸೆ ಹಣ್ಣು, ಸಾರಿನ ಪುಡಿ, ಅಚ್ಚ ಮೆಣಸಿನ ಪುಡಿ, ಅರಿಶಿನ, ಬೆಲ್ಲ ಹಾಗೂ ಉಪ್ಪು ಹಾಕಿ ಪೇಸ್ಟ್ ರೀತಿ ಮಿಕ್ಸಿ ಮಾಡಿ. ಇದಕ್ಕೆ ಎಣ್ಣೆಯಲ್ಲಿ ಇಂಗು, ಸಾಸಿವೆ, ಕರಿಬೇವು ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ 3-4 ನಿಮಿಷಗಳ ಕಾಲ ಚೆನ್ನಾಗಿ ಬಾಡಿಸಿದರೆ ಟೊಮೆಟೊ ಈರುಳ್ಳಿ ಚಟ್ನಿ ಸವಿಯಲು ಸಿದ್ಧ. ಶುಭದಿನ.