ನಾವು ಸೇವಿಸುವ ಎಲ್ಲ ಬಗೆಯ ಆಹಾರ ಪದಾರ್ಥಗಳಲ್ಲಿ ಕಾಳುಗಳಿಗೆ ಹಾಗೂ ಬೇಳೆಗಳಿಗೆ ವಿಶೇಷವಾದ ಸ್ಥಾನವಿದೆ ಯಾಕೆಂದರೆ ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಇವುಗಳಿಂದ ನಮ್ಮ ದೇಹಕ್ಕೆ ಸಿಗುವ ಪೌಷ್ಟಿಕ ಸತ್ವಗಳ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಮಾಂಸ ಹರ ಸೇವನೆ ಮಾಡದೆ ಕೇವಲ ಸತ್ಯ ಹಾರಗಳ ಮೇಲೆ ಅವಲಂಬಿತ ಆಗಿರುವವರಿಗಂತೂ ಹೇಳಿ ಮಾಡಿಸಿದ ಆಹಾರಗಳು ಇವು ಮನೆಯಲ್ಲಿ ತಯಾರು ಮಾಡುವ ವಿವಿಧ ಬಗೆಯ ಖಾದ್ಯಗಳಿಗೆ ನಾವು ಬಗೆ ಬಗೆಯ ಬೇಳೆಗಳನ್ನು ಬಳಕೆ ಮಾಡುತ್ತೇವೆ.

ಒಂದೊಂದು ಬಗೆಯ ಬೇಳೆಕಾಳುಗಳು ನಮ್ಮ ಆರೋಗ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಒಂದೊಂದು ಬಗೆಯ ಪ್ರಯೋಜನಗಳನ್ನು ಕೊಡುತ್ತಾ ಹೋಗುತ್ತವೆ ಅದರಲ್ಲಿ ಕೆಂಪು ಬಣ್ಣದ ಬೇಳೆಕಾಳುಗಳು ಅತಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಪ್ರೋಟಿನ್ ಅಂಶ ವಿಟಮಿನ್ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ.

ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶವಿರುವ ಬೇಳೆ ಕಾಳುಗಳಲ್ಲಿ ಕೆಲವರು ಆರೋಗ್ಯಕ್ಕೆಮಾರಕವಾಗಿರುವ ಗ್ಲುಟೆನ್ ಅಂಶ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಇದೊಂದು ನಿಮ್ಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ನೈಸರ್ಗಿಕ ಆಹಾರ ಪದಾರ್ಥ ಎಂದು ಹೇಳಬಹುದು.

ಹಾಗಾದರೆ ಕೆಂಪು ಬಣ್ಣದ ಬೇಳೆ ಕಾಳುಗಳ ಆರೋಗ್ಯದ ಪ್ರಯೋಜನಗಳು ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಮುಖ್ಯವಾಗಿ ಮಧುಮೇಹ ಇರುವವರಿಗೆ ಕೆಂಪು ಬಣ್ಣದ ಬೆಳೆಕಾಳುಗಳಿಂದ ಸಾಕಷ್ಟು ಅನುಕೂಲವಿದೆ ಏಕೆಂದರೆ ಈ ಬೇಳೆಕಾಳುಗಳಲ್ಲಿ ಸಿಗುವಂತಹ ನಾರಿನ ಅಂಶ ಮಧುಮೇಹಿಗಳು ಸೇವಿಸಿದ ಆಹಾರವನ್ನು ನಿಧಾನವಾಗಿ ಜೀರ್ಣ ಮಾಡುವ ಮೂಲಕ ಅವರ ಆಹಾರದಲ್ಲಿನ ಸಕ್ಕರೆ ಪ್ರಮಾಣ ಬೇಗನೆ ರಕ್ತ ಸಂಚಾರದಲ್ಲಿ ಬೆರೆತು ಇಡೀ ದೇಹದ ತುಂಬಾ ಹಬ್ಬದನ್ನು ತಡೆಗಟ್ಟುತ್ತದೆ.

ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣ ಅಂಶ ಮತ್ತು ಮ್ಯಾಗ್ನಿಷಿಯಂ ಅಂಶ ನಮಗೆ ಸಿಕ್ಕಿದರೆ ಒಳ್ಳೆಯದು. ಅಂತಹ ಆಹಾರಗಳನ್ನು ಹುಡುಕುವ ಬದಲು ಪ್ರತಿದಿನದ ಆಹಾರ ತಯಾರಿಯಲ್ಲಿ ಕೆಂಪು ಬೆಳೆಕಾಳುಗಳನ್ನು ಬಳಕೆ ಮಾಡುವುದು ಸೂಕ್ತ. ಇನ್ನು ಕೆಂಪು ಬೆಳೆಗಳಲ್ಲಿ ಮತ್ತು ವಿಟಮಿನ್ ಬಿ ಅಂಶ ಸಾಕಷ್ಟು ಇದೆ ಹಾಗಾಗಿ ಇದೊಂದು ವಿಟಮಿನ್ ಅಂಶದ ಪೂರಕ ಆಹಾರವೆಂದು ಹೇಳಬಹುದು.

ಈಗಾಗಲೇ ತಮ್ಮ ದೇಹದ ತೂಕವನ್ನು ತಮಗೆ ಅರಿವಿಲ್ಲದೆ ಹೆಚ್ಚು ಮಾಡಿಕೊಂಡಿರುವವರು ಸಾಧಾರಣವಾಗಿ ಕಡಿಮೆ ಕ್ಯಾಲೋರಿಗಳಿರುವ ಆಹಾರಗಳನ್ನು ಸೇವಿಸಲು ಮುಂದಾಗುತ್ತಾರೆ. ಅವರ ಆಯ್ಕೆಯಲ್ಲಿ ಮೊದಲನೇ ಸ್ಥಾನದಲ್ಲಿ ಕೆಂಪು ಬೇಳೆ ಇರುವುದು ಒಳ್ಳೆಯದು. ಏಕೆಂದರೆ 1 ಕಪ್ ಬೇಯಿಸಿದ ಬೇಳೆಯಲ್ಲಿ ಕೇವಲ 168 ಕ್ಯಾಲೋರಿಗಳು ಮಾತ್ರ ಸಿಗುತ್ತವೆ ಎಂದು ಹೇಳಬಹುದು.ಇದರಿಂದ ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ಆಗಾಗ ಸೇವನೆ ಮಾಡಬೇಕು ಎನ್ನುವ ನಿಮ್ಮ ಬಯಕೆ ಇಲ್ಲವಾಗುತ್ತದೆ. ಇದರ ಜೊತೆಗೆ ನಿಮ್ಮ ದೇಹದಲ್ಲಿ ಈಗಾಗಲೇ ಶೇಖರಣೆ ಆಗಿರುವ ಬೊಜ್ಜಿನ ಅಂಶ ನಿಮ್ಮ ದೇಹದ ಪ್ರತಿ ದಿನದ ಕಾರ್ಯ ಚಟುವಟಿಕೆಗೆ ನೆರವಾಗುತ್ತದೆ.

Leave a Reply

Your email address will not be published. Required fields are marked *