ನಮಸ್ತೆ ಪ್ರಿಯ ಓದುಗರೇ, ಮೊಟ್ಟೆಯ ಹಳದಿ ಭಾಗ ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ, ಅಷ್ಟಕ್ಕೂ ಮೊಟ್ಟೆಯ ಹಳದಿ ಭಾಗ ತಿಂದರೆ ಏನಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಮೊಟ್ಟೆಯು ಅತ್ಯಂತ ಪೌಷ್ಟಿಕತೆ ಹೊಂದಿರುವ ಆಹಾರವಾಗಿದ್ದು, ಪ್ರತಿನಿತ್ಯ ಒಂದ ಮೊಟ್ಟೆಯನ್ನು ತಿನ್ನಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ತೂಕ ಇಳಿಕೆಗೆ ಸಹಕಾರಿಯಾದ ಈ ಮೊಟ್ಟೆಯು ಅನೇಕ ಆರೋಗ್ಯ ಪ್ರಯೋಜನಗಳಿಂದ ಜನಪ್ರಿಯವಾಗಿದೆ. ಮಕ್ಕಳಿಗಂತೂ ಮೊಟ್ಟೆಯ ಬಿಳಿ ಭಾಗ ಕ್ಕಿಂತ ಹಳದಿ ಭಾಗವೇ ಅತ್ಯಂತ ಪ್ರಿಯ. ಆದರೆ ಹಿರಿಯರು ಮಾತ್ರ ಹಳದಿ ಭಾಗ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ, ತಿನ್ನಬೇಡಿ ಎಂದು ಹೇಳುತ್ತಾರೆ. ಅಷ್ಟಕ್ಕೂ ಮೊಟ್ಟೆಯಲ್ಲಿನ ಹಳದಿ ಭಾಗವನ್ನು ಯಾಕೆ ತಿನ್ನಬಾರದು ಗೊತ್ತಾ? ಸಂಪೂರ್ಣವಾಗಿ ಓದಿ ಮಾಹಿತಿ ತಿಳಿಯಿರಿ.

ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗದಲ್ಲಿ ಅಂಥದ್ದೇನಿದೆ? – ಒಂದು ಕಾಲದಲ್ಲಿ ಮೊಟ್ಟೆಗಳನ್ನು ತಿನ್ನುವುದು ಅನಾರೋಗ್ಯಕ್ಕೆ ಕಾರಣವೆಂದು ಹೇಳಲಾಗಿತ್ತು. ಮುಖ್ಯವಾಗಿ ಮೊಟ್ಟೆಯ ಬಿಳಿ ಭಾಗವು ಹೆಚ್ಚಾಗಿ ಪ್ರೊಟೀನ್ ಹೊಂದಿದೆ. ಹಳದಿ ಭಾಗದಲ್ಲಿ ಹೆಚ್ಚು ಪೋಷಕಾಂಶ ಇದ್ದರೂ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸಾಮರ್ಥ್ಯವಿದೆ ಎಂದು ಹಿರಿಯರು ಹಳದಿ ಭಾಗವನ್ನು ಕಡೆಗಣಿಸುತ್ತಿದ್ದರು. ವಾಸ್ತವವಾಗಿ, ಕೊಲೆಸ್ಟ್ರಾಲ್ ಆಹಾರದಲ್ಲಿ ಕಂಡುಬರುವ ಮೇಣದಂತಹ ವಸ್ತುವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಇಂದ ಹೃದಯದ ಅಪಾಯವೂ ಹೆಚ್ಚಾಗುತ್ತದೆ ಎಂದು ಭಾವಿಸಲಾಗುತ್ತಿತ್ತು. ಮೊಟ್ಟೆಯ ಹಳದಿ ಭಾಗ ದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ – ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ. ಉದಾಹರಣೆಗೆ ೨ ಮೊಟ್ಟೆಯಲ್ಲಿ ಸುಮಾರು ೪೧೧ ಮಿ.ಗ್ರಾಂ ಅಷ್ಟು ಕೊಲೆಸ್ಟ್ರಾಲ್ ಇರುತ್ತದೆ. ಪ್ರತಿನಿತ್ಯ ೩೦೦ ಮೀ.ಗ್ರಾಂ ಅಷ್ಟು ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಉತ್ತಮ ಎಂದು ಆರೋಗ್ಯ ತಜ್ನರು ಶಿಫಾರಸ್ಸು ಮಾಡುತ್ತಾರೆ. ಹೆಚ್ಚಿನ ಕೊಲೆಸ್ಟ್ರಾಲ್ ಸೇವನೆ ಇಂದ ನೇರವಾಗಿ ಹೃದಯಕ್ಕೆ ಬೀರುವ ಅಪಾಯಗಳು ಹೆಚ್ಚಾಗಿರುತ್ತವೆ. ಮೊಟ್ಟೆಯು ರಕ್ತದ ಕೊಲೆಸ್ಟ್ರಾಲ್ ಮಟ್ಟಕ್ಕೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ ಬನ್ನಿ – ವಾಸ್ತವವಾಗಿ, ಯಕೃತ್ ಕೊಲೆಸ್ಟ್ರಾಲ್ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುತ್ತದೆ. ಏಕೆಂದರೆ ಕೊಲೆಸ್ಟ್ರಾಲ್ ಜೀವಕೋಶಗಳಿಗೆ ಅಗತ್ಯವಾಗಿರುವ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತದೆ. ನೀವು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಯನ್ನು ತಿಂದಾಗ, ಸಹಜವಾಗಿಯೇ ಯಕೃತ್ ಕೊಲೆಸ್ಟ್ರಾಲ್ ಉತ್ಪಾದಿಸುವ ಮಟ್ಟವನ್ನೂ ತಗ್ಗಿಸುತ್ತದೆ. ಇದರ ವಿರುದ್ಧವಾಗಿ ನೀವು ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವ ಆಹಾರವನ್ನು ಸೇವಿಸಿದಾಗ, ಯಕೃತ್ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಆದರೆ ಕೊಲೆಸ್ಟ್ರಾಲ್ ಕೆಟ್ಟದ್ದಲ್ಲ ಎಂಬುದನ್ನು ನೆನಪಿನಲ್ಲಿಡಿ. ಯಾವುದೇ ಒಂದು ಆಹಾರವನ್ನು ನಿಯಮಿತವಾಗಿ ಸೇವಿಸಬೇಕು ಹೊರತು, ಯದ್ವ ತದ್ವಾ ಸೇವಿಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಹಾಗಾದರೆ ಮೊಟ್ಟೆಯು ಹೃದ್ರೋಗದ ತೊಂದರೆಯನ್ನು ಹೆಚ್ಚಿಸುತ್ತದೆಯೆ? – ಹಲವಾರು ಅಧ್ಯಯನಗಳ ಪ್ರಕಾರ, ದಿನಕ್ಕೆ ಒಂದರಿಂದ ಎರಡು ಸಂಪೂರ್ಣವಾದ ಮೊಟ್ಟೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶ್ಗಳು ಹೆಚ್ಚುವುದಿಲ್ಲ ಎಂದು ಸಾಬೀತು ಪಡಿಸಿದೆ. ದಿನಕ್ಕೆ ಒಂದೆರೆಡು ಮೊಟ್ಟೆ ತಿನ್ನುವುದರಿಂದ ಕೊಲೆಸ್ಟ್ರಾಲ್,ಮಧುಮೇಹ ಮತ್ತು ತೂಕ ,ಬೊಜ್ಜಿನ ಮೇಲೆ ಯಾವುದೇ ಅಪಾಯಕಾರಿ ಪರಿಣಾಮ ಬೀರುವುದಿಲ್ಲ. ಈಗಾಗಲೇ ಹೃದಯದ ಸಮಸ್ಯೆ ಇರುವವರು ದಿನಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ನಿಯಮಿತವಾಗಿ ಸೇವಿಸುವುದು ಒಳ್ಳಯದು ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. ಶುಭದಿನ.

Leave a Reply

Your email address will not be published. Required fields are marked *