ಮೊಟ್ಟೆಯ ಹಳದಿ ಭಾಗ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಅಥವಾ ಕೆಟ್ಟದು ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಎಲ್ಲರಿಗೂ ಗೊತ್ತಿರುವ ಹಾಗೆ ಮೊಟ್ಟೆ ಒಂದು ಉತ್ತಮ ಪೌಷ್ಟಿಕಾಂಶ ಇರುವ ಆಹಾರ ಅಂತನೇ ಹೇಳಬಹುದು. ಆದರೆ ಮೊಟ್ಟೆಯಲ್ಲಿ ಕೇವಲ ಬಿಳಿ ಭಾಗ ಆರೋಗ್ಯಕರ ಹಾಗೂ ಹಳದಿ ಭಾಗ ಆರೋಗ್ಯಕರವಲ್ಲ ಇಲ್ಲ ಎಂಬುದು ಹಲವರ ವಾದ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೇಳುತ್ತೇವೆ ಕೇಳಿ. ಅದಕ್ಕೂ ಮುಂಚೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮೊಟ್ಟೆಗಳ ಬಿಳಿ ಭಾಗದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಹಳದಿ ಭಾಗದಲ್ಲಿ ಮಿನರಲ್ಗಳು ವಿಟಮಿನ್ ಗಳು ಕೊಲೆಸ್ಟ್ರಾಲ್ ಗಳು ಇರುತ್ತದೆ.
ಕೊಲೆಸ್ಟ್ರಾಲ್ ಅಂತ ಕೂಡಲೇ ಭಯಪಡುವವರು ಹೆಚ್ಚು ಆದರೆ ಭಯ ಬಿಡಿ ಮೊಟ್ಟೆಯಲ್ಲಿನ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿರುತ್ತದೆ. ಮೊಟ್ಟೆ ಕೇವಲ ಮಾಂಸಖಂಡಗಳನ್ನು ಬಲಿಷ್ಠಗೊಳಿಸುವುದು ಅಲ್ಲ. ದೇಹದ ತೂಕವನ್ನು ಸಹ ನಿಯಂತ್ರಿಸುವಲ್ಲಿ ಸಹಕಾರಿ. ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆಗಳನ್ನು ಸೇವಿಸುತ್ತಾರೆ ಹಸಿವನ್ನು ಕಡಿಮೆ ಮಾಡುತ್ತದೆ ಹೀಗಾಗಿ. ಹಸಿವು ಕಡಿಮೆ ಎಂದಾದಾಗ ಆಹಾರ ಸೇವನೆಯೂ ಕೂಡ ಕಡಿಮೆಯಾಗುತ್ತದೆ.
ಇದರಿಂದ ನಿಮ್ಮ ದೇಹದ ತೂಕವನ್ನು ಸಮಪ್ರಮಾಣದಲ್ಲಿ ಇಡಬಹುದು ಇನ್ನು ಹಲವಾರು ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸಬೇಕು ಹಳದಿ ಭಾಗವನ್ನು ಸೇವಿಸಿದರೆ ಇದರಲ್ಲಿರುವ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ತೊಂದರೆಗಳನ್ನು ತರುತ್ತೆ ಅಂತ ತಪ್ಪಾಗಿ ಭಾವಿಸಿದರು ಇನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ನಮ್ಮ ದೇಹದಲ್ಲಿ ಕೇವಲ ಶೇಕಡಾ 25ರಷ್ಟು ಕೊಲೆಸ್ಟ್ರಾಲ್ ಮಾತ್ರ ನಾವು ಸೇವಿಸುವ ಆಹಾರದಿಂದ ಬರುತ್ತೆ. ಮಿಕ್ಕ 75 ಶೇಕಡದಷ್ಟು ಕೊಲೆಸ್ಟ್ರಾಲನ್ನು ನಮ್ಮ ದೇಹವೇ ಉತ್ಪಾದಿಸಿ ಕೊಳ್ಳುತ್ತದೆ.
ಲಿವರ್ ಈ ಕೊಲೆಸ್ಟ್ರಾಲನ್ನು ಉತ್ಪಾದಿಸುತ್ತದೆ. ಅಂದರೆ ನೀವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದ್ದರೆ ನಿಮ್ಮ ದೇಹಕ್ಕೆ ಬೇಕಾದ ಕೊಲೆಸ್ಟ್ರಾಲನ್ನು ಲಿವರ್ ಉತ್ಪಾದಿಸುತ್ತದೆ. ಒಂದು ವೇಳೆ ನೀವು ಆಹಾರದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚು ತೆಗೆದುಕೊಳ್ಳುತ್ತಿದ್ದರೆ ಆಗ ಲಿವರ್ ಕೊಲೆಸ್ಟ್ರಾಲ್ ಅಂಶವನ್ನು ಉತ್ಪಾದಿಸುವುದು ಅನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಹಾನಿಕಾರಕವಲ್ಲ. ಸರಿಯಾದ ಪ್ರಮಾಣದ ಕೊಲೆಸ್ಟ್ರಾಲ್ ದೇಹದಲ್ಲಿ ಇರದಿದ್ದರೆ ಶ್ರಿಯಾನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.