ಯಾರಾದರೂ ಒಬ್ಬರು ಮೊಬೈಲಿಂದ ನನ್ನ ಸಂಸಾರ ಚೆನ್ನಾಗಿದೆ, ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ,ನನಗೆ ನೆಮ್ಮದಿ ಸಿಕ್ಕಿದೆ, ಮೊಬೈಲ್ ನಿಂದಲೇ ನಾನು ಅತ್ಯಂತ ಖುಷಿಯಾಗಿದ್ದೇನೆ ಎಂದು ಹೇಳಲಿ ನೋಡೋಣ . ಹಾಸ್ಯಾಸ್ಪದ ಸಂಗತಿ ಎಂದರೆ ನಾವು ನಮ್ಮ ಆಯುಷ್ಯವಿಡಿ ಸಂಬಂಧಿಕರು ,ಗೆಳೆಯರು,ಮನೆಯವರನ್ನು ಕೊನೆಗೆ ಸಂಗತಿಯನ್ನೂ ದೂರ ಮಾಡಿಕೊಳ್ಳುವಷ್ಟು ಮೊಬೈಲ್ ಹಿಂದೆ ಬಿದ್ದು ಆಟದಲ್ಲಿ ನಮ್ಮ ಸಂತೋಷ ನೆಮ್ಮದಿ ಹುಡುಕುತ್ತಿದ್ದೇವೆ . ಆದರೆ ಕೊನೆಗೆ ನಮ್ಮ ಉಸಿರು ನಿಂತರೂ ಅದರಲ್ಲಿ ನಮ್ಮ ಆ ಹುಡುಕಾಟ ನಿಲ್ಲುವುದಿಲ್ಲ . ಮೊಬೈಲ್ ಈ ಪ್ರಪಂಚಕ್ಕೆ ಬಂದಾಗ ಮೊದ ಮೊದಲು ನಾವೆಲ್ಲರೂ ಹೆಮ್ಮೆಯಿಂದ ಬೀಗಿದೇವು ಇನ್ನು ಮುಂದೆ ಇಡೀ ಪ್ರಪಂಚವೇ ನಮ್ಮ ಕೈಯಲ್ಲಿರುತದೆ ಎಂದು .ಆದರೆ ಇಂದು ಆ ಮೊಬೈಲ್ ಅಂಗೈಯಲ್ಲಿ ನಾವು ಇರುವಂತಾಗಿದೆ. ಇದಕ್ಕೆಲ್ಲಾ ಮೊಬೈಲ್ ಅನ್ನೋ ಮಾಯಾವಿ ಯನ್ನು ನಾವು ನಮ್ಮ ಬದುಕಿನಲ್ಲಿ ಅತಿಯಾಗಿ ಬಿಟ್ಟುಕೊಂಡಿದ್ದೇ ಕಾರಣವಾಗಿದೆ.
ಮೊಬೈಲ್ ಈಗ ಕೇವಲ ಫೋನ್ ಮಾಡಲು ಮೆಸ್ಸೇಜ್ ಮಾಡಲು ಉಳಿದಿದ್ದರೆ ಬಹುಶಃ ಮೊಬೈಲ್ ನಶೆ ಇಷ್ಟೊಂದು ಇರುತ್ತಿರಲಿಲ್ಲ. ಇದು ಮೊಬೈಲ್ ಮಾಡುವಷ್ಟೇ ಕೆಲಸ ಮಾಡದೇ ಟಿವಿ, ರೇಡಿಯೋ , ಪುಸ್ತಕ, ಸುದ್ದಿ ಪತ್ರಿಕೆ ಹೀಗೆ ಅನೇಕ ವಸ್ತುವಿನ ಕೆಲಸ ಕಸಿದುಕೊಂಡು ಪಾರ್ಟ್ ಟೈಂ ಲೆಕ್ಕದಲ್ಲಿ ಮಾಡುತ್ತಿದೆ.ಈಗ ಅದ್ಯಾವ ಮನೆಯಲ್ಲದರೂ ನೋಡಿ , ಅತ್ತೆ ಸೊಸೆ ಜಗಳ ,ಚಿಕ್ಕ ಮಕ್ಕಳ ಚೀರಾಟ ,ಪಾಲಕರ ಕಿತ್ತಾಟ ಕಡಿಮೆ ಆಗಿದೆ .ಮೊದಲೆಲ್ಲ ಪಕ್ಕದ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಕೇಳಿಸಿಕೊಳ್ಳುವ ಕೆಟ್ಟ ಕುತೂಹಲ ಎಲ್ಲರಲ್ಲೂ ಇರುತಿತ್ತು. ಆದರೆ ಇಂದು ಪಕ್ಕದ ಮನೆಯವರ ಸುದ್ದಿ ಬಿಡಿ, ನಮ್ಮ ಪಕ್ಕಕ್ಕಿದ್ದವರ ಮಾತೂ ಕೇಳಿಸಿಕೊಳ್ಳಲು ಆಗುತ್ತಿಲ್ಲ.ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಎಷ್ಟು ಮಂದಿ ಇರುತ್ತಾರೋ ಅವರೆಲ್ಲರ ಬಳಿಯೂ ಒಂದೊಂದು ಮೊಬೈಲ್ ಇದ್ದೆ ಇರುತ್ತದೆ .ಯಾಕೆಂದರೆ ಬಿಡುವಿನ ಸಮಯದಲ್ಲಿ ಆ ಮೊಬೈಲ್ ಅವರ ಕೈಗೆ ಬಂದಾಗ ಒಬ್ಬೊಬ್ಬರದ್ದು ಒಂದೊಂದು ಪ್ರಪಂಚ ಆಗಿರುತ್ತದೆ. ಅಂದು ಚಿಕ್ಕ ಮಕ್ಕಳು ಅಳದಂತೆ,ಕೀಟಲೆ ಮಾಡದಂತೆ ನೋಡಿಕೊಳ್ಳಲು ಮನೆಯವರೆಲ್ಲ ಒಟ್ಟಾಗುತ್ತಿದ್ದರು. ಅವರ ಜೊತೆ ನಲಿದು ಅವರ ನಗುವಿಗೆ ಕಾರಣವಾಗುತ್ತಿದ್ದರು. ಆದರೆ ಇಂದು ಯಾವ ಪಾಲಕರಿಗೂ ಮಕ್ಕಳನ್ನು ಸುಧಾರಿಸುವ ಸಹನೆ ,ಸಮಯ ಎರೆಡೂ ಇಲ್ಲ .ತಮ್ಮ ಮಕ್ಕಳು ಅತ್ತರೆ ಸಾಕು ಅವರ ಕೈಗೆ ಮೊಬೈಲ್ ಕೊಟ್ಟು ಯಾವುದಾದರೂ ಕಾರ್ಟೂನ್ ಹಾಕಿ ಕೊಟ್ಟು ಬಿಡುತ್ತಾರೆ …
ಈ ಮೊಬೈಲ್ ನಿಂದ ಎಷ್ಟೋ ಸಂಸಾರದಲ್ಲಿ ವಿರಸ ಉಂಟಾಗಿ ಕೊನೆಗೆ ಸಂಗಾತಿಯೇ ಬೇಡ ಅನ್ನುವ ಮಟ್ಟಕ್ಕೆ ತಲುಪಿದ್ದೇವೆ ಮೊಬೈಲ್ ನಮಗೆ ಉತ್ತಮ ಗೆಳೆಯ ನಾಗಬಲ್ಲಾ . ಯಾವಾಗೆಂದರೆ ನಾವು ನಮ್ಮ ಮೊಬೈಲ್ ಅನ್ನು ಉತ್ತಮ ದುಡಿಮೆಗೆ ,ಲಾಭಕ್ಕಾಗಿ ಉಪಯೋಗಿಸಿದಾಗ ಮಾತ್ರ . ಅದು ಬಿಟ್ಟು ಮೊಬೈಲ್ ನಶೆ ಹತ್ತಿಸಿಕೊಂಡು , ಅದೇ ಸರ್ವಸ್ವ ಎಂದು ಭಾವಿಸಿ ಬದುಕಿದರೆ ಕೊನೆಗೆ ಉಳಿಯುವುದು ಏಕಾಂಗಿತನ ಮಾತ್ರ ..