ನಮಸ್ತೆ ಪ್ರಿಯ ಓದುಗರೇ , ಇಂದಿನ ಲೇಖನದಲ್ಲಿ ನೀವೇನಾದರೂ ಎರಡನೇ ಮಗುವಿಗೆ ಜನ್ಮ ನೀಡಲು ಪ್ರಯತ್ನ ಮಾಡ್ತಾ ಇದ್ದರೆ ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು ಮತ್ತು ನೀವು ಯಾಕೆ ಎರಡನೇ ಮಗುವನ್ನು ಪಡೆಯುವಲ್ಲಿ ವಿಫಲ ಆಗುತ್ತಿದ್ದಿರ ಎಂದು ಕೆಲವೊಂದು ಮಾಹಿತಿಗಳನ್ನು ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ನೀವು ಎರಡನೇ ಮಗುವಿಗೆ ಯಾವಾಗ ಪ್ರಯತ್ನ ಮಾಡಿದರೆ ಒಳ್ಳೆಯದು ಎಂದು ಹೇಳುವುದಾದರೆ, ಮೊದಲನೇ ಮಗು ಆದ ಎರೆಡು ವರ್ಷಗಳ ನಂತರ ನೀವು ಎರಡನೇ ಮಗುವಿಗೆ ಟ್ರೈ ಮಾಡಬಹುದು ಯಾಕೆಂದ್ರೆ ಮಗುವಿಗೆ ಎರೆಡು ವರ್ಷಗಳ ತನಕ ನೀವು ಎದೆ ಹಾಲನ್ನು ಉಣಿಸಬೇಕಾಗುತ್ತದೆ. ಮಗುವಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯವಾಗುತ್ತದೆ. ಹಾಗಾಗಿ ಸಂಪೂರ್ಣ ಎರೆಡು ವರ್ಷಗಳ ತನಕ ಎದೆ ಹಾಲನ್ನು ಉಣಿಸಬೇಕಾಗುತ್ತದೇ.

 

ಈ ಸಂದರ್ಭದಲ್ಲಿ ಅಂದ್ರೆ ಎದೆ ಹಾಲು ಉಣಿಸುವ ಸಂದರ್ಭದಲ್ಲಿ ನಿಮ್ಮ ಹಾರ್ಮೋನ್ ಗಳು ಕೂಡ ವ್ಯತ್ಯಾಸ ಆಗುತ್ತಾ ಇರುತ್ತದೆ ಹಾಗಾಗಿ ನಿಮ್ಮ ತಿಂಗಳ ಮುಟ್ಟಗುವಿಕೆ ಕೂಡ ಸರಿಯಾಗಿ ಆಗದೇ ವ್ಯತ್ಯಾಸ ಆಗುತ್ತಾ ಇರುತ್ತದೆ. ಇನ್ನೂ ಸಾಕಷ್ಟು ಜನರಿಗೆ ಮೊದಲು ಗರ್ಭ ಧಾರಣೆಯ ಬಳಿಕ ಮತ್ತೆ ಗರ್ಭಿಣಿ ಆಗುವುದು ಕಷ್ಟ ಅಂತ ಸುಮಾರು ಜನರು ಹೇಳಿರುವುದನ್ನು ಕೇಳಿರುತ್ತೀರಿ. ಇದಕ್ಕೆ ಕಾರಣ ಏನೆಂದರೆ ನಿಮ್ಮ ವಯಸ್ಸು ಕೂಡ ಇರಬಹುದು, ವಯಸ್ಸು ಹೆಚ್ಚಾದಂತೆ ಗರ್ಭಿಣಿ ಆಗುವ ಸಾಧ್ಯತೆ ಕೂಡ ಕಡಿಮೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ 30 ವರ್ಷ ದಾಟಿದ ನಂತರ ಮಹಿಳೆಯರು ಮದುವೆ ಆಗುತ್ತಿದ್ದಾರೆ. ಆದ್ರೆ 30 ವರ್ಷ ದಾಟಿದ ನಂತರ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಕಡಿಮೆ ಆಗುತ್ತದೆ ಎಂದು ಅಧ್ಯಯನ ಹೇಳುತ್ತದೆ. ಸ್ನೇಹಿತರೆ ನಿಮ್ಮ ವಯಸ್ಸು 30 ದಾಟಿದರೆ ಜೊತೆಗೆ ನಿಮ್ಮ ತೂಕ ಜಾಸ್ತಿ ಹೊಂದಿದ್ದರೆ ಆಗ ನಿಮಗೆ ಎರಡನೇ ಮಗು ಆಗುವುದು ಕಷ್ಟ ಆಗುತ್ತದೆ. ಹಾಗಾಗಿ ನೀವು ಸರಿಯಾದ ಆಹಾರ ಕ್ರಮ ಅನುಸರಿಸಿ ನಿಮ್ಮ ದೇಹದ ತೂಕವನ್ನು ಇಳಿಸುವಲ್ಲಿ ಪ್ರಯತ್ನ ಪಡಿ. ಪ್ರತಿನಿತ್ಯ ಯೋಗ, ಪ್ರಾಣಾಯಾಮ, ವಾಕಿಂಗ್ ಮಾಡಿ ಈ ರೀತಿ ಮಾಡಿದರೆ ನೀವು ಆರೋಗ್ಯದಿಂದ ಇರುತ್ತೀರಿ, ಇನ್ನೂ ಎರಡನೆಯ ಮಗು ಆಗದೆ ಇರಲು ಇನ್ನೊಂದು ಮುಖ್ಯ ಕಾರಣ ಏನು ಅಂದ್ರೆ ವಯಸ್ಸು ಹೆಚ್ಚಾದಂತೆ ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುವ ಒಂದು ಸಾಮಾನ್ಯ ತೊಂದರೆ ಅಂದ್ರೆ ಅದು ಗರ್ಭಕೋಶದಲ್ಲಿ ಗಡ್ಡೆ ಬರುತ್ತಾ ಇರುತ್ತದೆ ಹಾಗಾಗಿ ಎರಡನೇ ಮಗು ಪಡೆಯಲು ಸಾಧ್ಯ ಆಗುವುದಿಲ್ಲ.

 

ಇದಕ್ಕಾಗಿ ನೀವು ಸೂಕ್ತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯ ಮೂಲಕ ಗುಣ ಪಡಿಸಬಹುದು. ಇನ್ನೂ ಮೊದಲನೇ ಬಾರಿ ಗರ್ಭಿಣಿ ಆದಾಗ ಕೆಲವರು ಗರ್ಭ ಪಾತ ಮಾಡಿಸುತ್ತಾರೆ, ಆದ್ರೆ ಎರಡನೇ ಬಾರಿ ಗರ್ಭಿಣಿ ಆಗಲು ಟ್ರೈ ಮಾಡಿದಾಗ ಅವರ ವಯಸ್ಸು ಅಥವಾ ಗರ್ಭಧಾರಣೆ ಆಗದೆ ಇರಲು ಪುರುಷರಲ್ಲಿ ಕಂಡು ಬರುವ ವೀರ್ಯಾಣು ಕೊರತೆ ಕಾರಣ ಆಗಬಹುದು. ಅಧಿಕ ಮಾನಸಿಕ ಒತ್ತಡ, ಜೀವನ ಶೈಲಿ, ಚಟ ಇವೆಲ್ಲವೂ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುವಂತೆ ಮಾಡುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೆ ಮಕ್ಕಳು ಆಗುವುದು ತುಂಬಾ ಕಷ್ಟ. ಇನ್ನೂ ಥೈರಾಯ್ಡ್ ಸಮಸ್ಯೆ ಇರುವ ಮಹಿಳೆಯರು ಹಾರ್ಮೋನ್ ಗಳ ವ್ಯತ್ಯಾಸದಿಂದ ಮಕ್ಕಳು ಆಗುವ ಸಾಧ್ಯತೆ ಕಡಿಮೆ ಆಗುತ್ತದೆ. ಇನ್ನೂ ಕೆಲವರಿಗೆ ಮೊದಲ ಹೆರಿಗೆ ನಂತರ ಸಕ್ಕರೆ ಕಾಯಿಲೆ ಕಂಡು ಬಂದರೆ ಎರಡನೇ ಬಾರಿ ಗರ್ಭಿಣಿ ಆಗುವ ಸಾಧ್ಯತೆ ಕಮ್ಮಿ ಇರುತ್ತದೆ. ಇನ್ನೂ ಮೊದಲನೇ ಬಾರಿ ಗರ್ಭಿಣಿ ಆಗಿದ್ದು ತುಂಬಾ ವರ್ಷದ ನಂತರ ಆಗಿದ್ದರೆ ಮತ್ತು ಮೊದಲ ಹೆರಿಗೆ ತುಂಬಾ ಕಷ್ಟ ಆಗಿದ್ದರೆ, ಉದಾಹರಣೆಗೆ ಗರ್ಭಕೋಶದ ಸೋಂಕು ಮುಂತಾದ ಸಮಸ್ಯೆಗಳಿಗೆ ನೀವು ತುತ್ತಾಗಿದ್ದಾರೆ ಎರಡನೇ ಬಾರಿ ಗರ್ಭಿಣಿ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *