ಬೇಸಿಗೆಯಲ್ಲಿ ಪ್ರತಿಯೊಬ್ಬರು ದೇಹವನ್ನು ತಂಪಾಗಿಸುವ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ ಹೀಗಿರುವಾಗ ಕೆಲವೊಂದು ಆಹಾರಗಳು ಬೇಸಿಗೆಯಲ್ಲಿ ಸೂಕ್ತ ಎಂದು ಹೆಚ್ಚಿನವರು ನಂಬಿದ್ದಾರೆ ಆದರೆ ಅದು ಆಯುರ್ವೇದ ಪ್ರಕಾರ ತಪ್ಪು ಎನ್ನುವುದು ಗೊತ್ತಾ ಅಂತ ಆಹಾರ ಯಾವುದು ಅಂತ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ.

ಬೇಸಿಗೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಫ್ರಿಜ್ಜಿನಲ್ಲಿ ಐಸ್ ನೀರು, ತಂಪಾದ ಮೊಸರು ಇದ್ದೇ ಇರುತ್ತದೆ ಇದನ್ನು ಶರಬತ್ತು ಜ್ಯೂಸ್ಗಳಿಗೆ ಮಿಕ್ಸ್ ಮಾಡಿ ಕುಡಿಯುತ್ತಾರೆ ಇದನ್ನು ಕುಡಿಯುವಾಗ ಹೊಟ್ಟೆ ತಂಪಾದಂತಹ ಅನುಭವವಾಗುತ್ತದೆ ಆದರೆ ಆಯುರ್ವೇದ ಪ್ರಕಾರ ಐಸ್ ನೀರು ಅಥವಾ ತಂಪು ನೀರನ್ನು ಕುಡಿಯುವುದರಿಂದ ದೇಹ ತಂಪಾಗುವುದಿಲ್ಲ ಬದಲಾಗಿ ಬಿಸಿಯಾಗುತ್ತದೆ ಇನ್ನು ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ ಅದರಲ್ಲೂ ಬೇಸಿಗೆಯಲ್ಲಿ ಐಸ್ ಕ್ರೀಮ್ ತಿನ್ನುವುದರ ಅನುಭವ ಬೇರೆ.

ಆದರೆ ಐಸ್ ಕ್ರೀಮ್ ನಲ್ಲಿ ಕೊಬ್ಬು ಮತ್ತು ಸಕ್ಕರೆ ಪ್ರಮಾಣವ ಅಧಿಕವಾಗಿರುತ್ತದೆ ಇದರಿಂದಾಗಿ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ ಇದರಿಂದಾಗಿ ಅದನ್ನು ಜೀರ್ಣಿಸಿಕೊಳ್ಳಲು ದೇಹದಲ್ಲಿ ಸಾಕಷ್ಟು ಸಾಕವು ಉತ್ಪತ್ತಿಯಾಗುತ್ತದೆ ಇನ್ನು ಬೇಸಿಗೆಯಲ್ಲಿ ಮೊಸರನ್ನು ಸೇವಿಸಲಾಗುತ್ತದೆ ಅನ್ನಕ್ಕೆ ಮೊಸರು ಸೇವಿಸಿ ಸೇವಿಸುತ್ತಾರೆ ಆದರೆ ಇದು ಜೀರ್ಣಿಸಿಕೊಳ್ಳಲು ಕಷ್ಟ ಮೊಸರು ಸೇವಿಸಿದ ನಂತರ ಕೆಲವರಿಗೆ ಮೊಡವೆ, ಮೊಡವೆ, ಚರ್ಮದ ಅಲರ್ಜಿ, ಜೀರ್ಣಕ್ರಿಯೆ ಸಮಸ್ಯೆ, ದೇಹದಲ್ಲಿ ಅಧಿಕ ಶಾಖದ ಅನುಭವ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ನಾವು ಹೆಚ್ಚಾಗಿ ನೋಡಿದ್ದೇವೆ.

ಮೊಸರು ನಮ್ಮ ದೇಹಕ್ಕೆ ಏನು ಮಾಡಬಹುದೆಂಬುದಕ್ಕೆ ಇದು ನಿಖರವಾಗಿ ವಿರುದ್ಧವಾಗಿದೆ. , ಮೊಸರು ಬಿಸಿ ಮಾಡುವ ಗುಣಲಕ್ಷಣಗಳಿಗಿಂತ ತಂಪಾಗಿಸುವ ಗುಣಗಳನ್ನು ಹೊಂದಿದೆ ಎಂದು ತಿಳಿಯಲಾಗಿದೆ. ಅನೇಕರು ಈ ವಿಷಯವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಬಾಲ್ಯದಿಂದಲೂ ಮೊಸರು ತಂಪಾಗಿಸುವ ಗುಣವನ್ನು ಹೊಂದಿದೆ ಎಂದು ಪರಿಗಣಿಸಿ ಸೇವಿಸುತ್ತಿದ್ದೇವೆ. ಆದರೆ ಆಯುರ್ವೇದದ ಪ್ರಕಾರ, ಮೊಸರು ರುಚಿಯಲ್ಲಿ ಹುಳಿ ಮತ್ತು ಸ್ವಭಾವದಲ್ಲಿ ಬಿಸಿಯಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಆದ್ದರಿಂದ ಇದು ಕಫ ಮತ್ತು ಪಿತ್ತ ದೋಷಗಳಲ್ಲಿ ಹೆಚ್ಚು ಮತ್ತು ವಾತ ದೋಷದಲ್ಲಿ ಕಡಿಮೆ. ಹಾಗಾಗಿ ಯಾವುದೇ ಋತುವಿನಲ್ಲಿ ಮೊಸರು ಸೇವಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಮೊಸರು ಸೇವಿಸಿದರೆ ಕೆಲವರ ದೇಹದ ಉಷ್ಣತೆಯನ್ನು ಹೆಚ್ಚಿಸುವುದು ಇದೇ ಕಾರಣಕ್ಕೆ. ಅಲ್ಲದೆ, ನೀವು ಅದನ್ನು ಆರೋಗ್ಯಕರವೆಂದು ಪರಿಗಣಿಸಿ ಅತಿಯಾಗಿ ಸೇವಿಸಿದರೆ, ನೀವು ಮುಖದ ಮೇಲೆ ಮೊಡವೆಗಳು ಮತ್ತು ಇತರ ಹಲವು ಪ್ರಮುಖ ಸಮಸ್ಯೆಗಳನ್ನು ನೋಡಬಹುದು.

ಇನ್ನು ಟೊಮೇಟೊ ಜ್ಯೂಸ್ ಅನ್ನು ಕುಡಿಯುವುದು ದೇಹವನ್ನು ತಂಪಾಗಿಸುವುದು ಎಂದು ಪರಿಗಣಿಸಲಾಗಿದೆ ಆದರೆ ಆಯುರ್ವೇದ ಪ್ರಕಾರ ಇದರ ಹುಳಿ ರುಚಿ ಮತ್ತು ಆಮ್ಲಿಯ ಪರಿಣಾಮದಿಂದ ದೇಹದಲ್ಲಿ ಶಾಖವನ್ನು ಉಂಟುಮಾಡುತ್ತದೆ ಅಷ್ಟೇ ಅಲ್ಲದೆ ನಿಂಬೆಹಣ್ಣು ವಿಟಮಿನ್ ಸಿ ಇಂದ ಸಮೃದ್ಧವಾಗಿದೆ ಮತ್ತು ತಂಪಾಗಿಸುವ ಪರಿಣಾಮವನ್ನು ಹೊಂದಿದೆ ಆದರೆ ಆಯುರ್ವೇದ ಪ್ರಕಾರ ಅದರ ಹುಳಿ ರುಚಿ ಮತ್ತು ಬೆಚ್ಚಗಿನ ಪರಿಣಾಮದಿಂದಾಗಿ ಇದು ಜೀರ್ಣಕಾರಿ ಬೆಂಕಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ ಆದ್ದರಿಂದ ಬೇಸಿಗೆಯಲ್ಲಿ ನಿಂಬೆರಸವನ್ನು ಹೆಚ್ಚಿಗೆ ಸೇವಿಸಬಾರದು.

Leave a Reply

Your email address will not be published. Required fields are marked *