ನಮಸ್ತೆ ನಮ್ಮ ಆತ್ಮೀಯ ಓದುಗರೇ, ಅತಿಯಾದ ಶುಗರ್ ಲೆವೆಲ್ ಇದೀಯಾ? ಹಾಗಾದರೆ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ಖಂಡಿತ ಪರಿಹಾರ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವಂತ ರೋಗವಾಗಿದೆ. 2019ನೆ ಸರ್ವೇ ಪ್ರಕಾರ ವಿಶ್ವದಲ್ಲಿ ಸುಮಾರು 463 ಮಿಲಿಯನ್ ಜನರು ಸಕ್ಕರೆ ಕಾಯಿಲೆ ಇಂದ ಬಳಲುತ್ತಿದ್ದಾರೆ. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಹಾಗೂ ಗ್ಲೂಕೋಸ್ ಅಧಿಕವಾಗಿ ಸಕ್ಕರೆ ಕಾಯಿಲೆ ಹುಟ್ಟಿಕೊಳ್ಳುತ್ತದೆ. ಒಂದು ಬಾರಿ ಈ ಕಾಯಿಲೆ ಬಂದರೆ ಅದು ಕೇವಲ ಮಾತ್ರೆ ತೆಗೆದುಕೊಂಡರೆ ಕಡಿಮೆ ಆಗುವುದಿಲ್ಲ. ಹಾಗಾಗಿ ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಬೇಕು ಎಂದರೆ ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಹಾಗೂ ಕೆಲವೊಂದು ಮದ್ದುಗಳನ್ನು ಸೇವನೆ ಮಾಡುವ ಮುಖಾಂತರ ಕೂಡ ಸಕ್ಕರೆ ಕಾಯಿಲೆ ಅನ್ನು ನಿಯಂತ್ರಣಕ್ಕೆ ತರಬಹುದು. ಇವತ್ತಿನ ಈ ಲೇಖನದಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಲು ಒಂದು ಉತ್ತಮವಾದ ಮನೆ ಮದ್ದನ್ನು ತಿಳಿಸಿ ಕೊಡುತ್ತೇವೆ.
ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಉತ್ತಮ ಮದ್ದು ಎಂದರೆ ಅದು ಮೆಂತ್ಯ ಕಾಳು. ಈ ಮೆಂತ್ಯ ಕಾಳಿನಲ್ಲಿ ಗಲೆಟೋ ಮೇನಿನ್ ಎಂಬ ನಾರಿನಂಶ ಇದೆ. ಇದು ರಕ್ತದಲ್ಲಿನ ಸಕ್ಕರೆ ಇರುವಿಕೆಯನ್ನ ತಗ್ಗಿಸುತ್ತದೆ. ಇದರಿಂದ ಮಧುಮೇಹವನ್ನು ತೆಡೆಯಬಹುದು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸಬಹುದು. ಹಾಗಾದ್ರೆ ಈ ಮೆಂತ್ಯ ಕಾಳನ್ನು ಯಾವ ರೂಪದಲ್ಲಿ ಹೇಗೆ ಸೇವನೆ ಮಾಡಿದರೆ ನಿಯಂತ್ರಣಕ್ಕೆ ಬರುತ್ತದೆ ಅಂತ ತಿಳಿಯೋಣ ಬನ್ನಿ. ಮೊದಲು ನಿಮ್ಮ ಮನೆಯಲ್ಲಿ ಮೆಂತ್ಯ ಕಾಳುಗಳು ಇದ್ದರೆ ಅವುಗಳನ್ನು ಹಸಿಯಾಗಿಯೇ ಮಿಕ್ಸಿ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ ಮತ್ತು ನಿಮ್ಮ ಮನೆಯಲ್ಲಿ ಯಾವಾಗಲೂ ಮೊಸರು ಇದ್ದೆ ಏರುತ್ತದೆ . ಈಗ ಒಂದು ಚಮಚ ಹಸಿ ಮೆಂತ್ಯ ಪುಡಿಗೆ ಎರೆಡು ಚಮಚ ಮೊಸರಿನ ಅಳತೆಗೆ ಕಲಸಿಕೊಳ್ಳಿ, ಬೇಕಾದರೆ ಮೊಸರನ್ನು ಇನ್ನೂ ಜಾಸ್ತಿ ಹಾಕಿಕೊಳ್ಳಬಹುದು. ಹೀಗೆ ಚೆನ್ನಾಗಿ ಮಿಕ್ಸ್ ಮಾಡಿ ಎರೆಡು ಗಂಟೆಗಳ ಕಾಲ ಹಾಗೆ ನೆನೆಸಿಡಿ. ನಂತರ ಇದನ್ನು ಸೇವನೆ ಮಾಡಬಹುದು. ನಿಮ್ಮ ಶುಗರ್ ಲೆವೆಲ್ ಜಾಸ್ತಿ ಇದ್ದರೆ ಒಂದು ದಿನ ಬಿಟ್ಟು ಒಂದು ದಿನ ಕುಡಿಯಬಹುದು ಅಥವಾ ಪ್ರತಿನಿತ್ಯ ಕೂಡ ಕುಡಿಯಬಹುದು. ಒಂದುವೇಳೆ ನಿಮ್ಮ ಶುಗರ್ ಲೆವೆಲ್ ನಾರ್ಮಲ್ ಇದ್ದರೆ ಈ ಮಿಶ್ರಣವನ್ನು ವಾರಕ್ಕೆ ಎರೆಡು ಬಾರಿಯಂತೆ ಸೇವನೆ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಶುಗರ್ ಬೇಗ ನಿಯಂತ್ರಣಕ್ಕೆ ಬರುತ್ತದೆ.
ಇನ್ನೊಂದು ನೆನಪಿಡಿ ಈ ಮೆಂತ್ಯ ಪುಡಿಯನ್ನು ರಾತ್ರಿ ಮೊಸರಿನಲ್ಲಿ ನೆನೆ ಇಟ್ಟು ಬೆಳಿಗ್ಗೆ ಕುಡಿಯಬೇಡಿ. ಇದರಲ್ಲಿ ಮೊಸರು ಇರುವುದರಿಂದ ಬೆಳಿಗ್ಗೆ ಅಷ್ಟೊತ್ತಿಗೆ ಕೆಟ್ಟ ವಾಸನೆ ಬರಲು ಶುರು ಆಗುತ್ತದೆ. ಆದ್ದರಿಂದ ಇದನ್ನು 2 ಅಥವಾ 3 ತಾಸು ಬಿಟ್ಟರೆ ಸಾಕು ಮತ್ತು ನಿಮಗೆ ಮಲಬದ್ದತೆ ಸಮಸ್ಯೆ ಇದ್ದರೆ ಇದನ್ನು ಸೇವಿಸಲು ಹೋಗಬೇಡಿ ಯಾಕೆಂದರೆ ಮೆಂತ್ಯ ಕಾಲು ತಿಂದರೆ ಹೊಟ್ಟೆ ಗಟ್ಟಿಯಾಗುತ್ತದೆ ಎಂಬ ಮಾತಿದೆ. ಆದರಿಂದ ಮಲಬದ್ದತೆ ಇರುವವರು ಇದನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು. ಹಾಗೆ ನೋಡಿದರೆ ಶುಗರ್ ಒಂದು ದೊಡ್ಡ ಕಾಯಿಲೆ ಅಲ್ಲ. ಆದರೆ ಅದನ್ನು ನಿಯಂತರಿಸಲು ಅದಕ್ಕೆ ಆದ ಬೇರೆ ಜೀವನ ಶೈಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಪ್ರತಿದಿನ ವ್ಯಾಯಾಮ, ವಾಕಿಂಗ್, ಪ್ರಾಣಾಯಾಮ, ಒಳ್ಳೆಯ ಸಾತ್ವಿಕ ಆಹಾರ, ಇತಿ ಮಿತಿಯಲ್ಲಿರುವ ಆಹಾರ ಕ್ರಮ ಹಾಗೂ ತಾಳ್ಮೆ ಇದ್ದರೆ ಖಂಡಿತ ನೀವು ನಿಮ್ಮ ಶುಗರ್ ಅನ್ನು ಗೆಲ್ಲಬಹುದು. ಈ ಮಾಹಿತಿ ಇಷ್ಟವಾಗಿದ್ದಾರೆ ಒಮ್ಮೆ ಖಂಡಿತ ಟ್ರೈ ಮಾಡಿ ನೋಡಿ ಹಾಗೂ ನಿಮ್ಮ ಪ್ರೀತಿ ಪಾತ್ರರಿಗೆ ಶೇರ್ ಮಾಡಿ ತಿಳಿಸಿ. ಶುಭದಿನ.