WhatsApp Group Join Now

ನಮಸ್ತೆ ಪ್ರಿಯ ಓದುಗರೇ, ಪ್ರಪಂಚವು ಭಗವಂತನ ಅಧೀನ ಎಂದು ನಂಬಿರುವ ಸನಾತನ ಹಿಂದೂ ಧರ್ಮದಲ್ಲಿ, ಶಿವ, ವಿಷ್ಣು, ಗಣಪತಿ, ಸುಬ್ರಮಣ್ಯ, ಪಾರ್ವತಿ, ಆಂಜನೇಯ, ಶ್ರೀ ರಾಮ, ವೇಣುಗೋಪಾಲ, ಲಕ್ಷ್ಮೀ ನರಸಿಂಹ, ದುರ್ಗೆ, ಕಾಳಿಕಾ ದೇವಿ ಹೀಗೆ ಇನ್ನೂ ಅನೇಕ ದೇವರುಗಳಿಗೆ ಭಾರತದಾದ್ಯಂತ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅದ್ರಲ್ಲೂ ಭಕ್ತರ ಭಕ್ತಿಗೆ ಬಲು ಬೇಗ ಒಲಿಯುವ ಶಿವನ ದೇವಸ್ಥಾನ ಇಲ್ಲ ಇಂದೇ ಹೇಳಬಹುದು. ಆಂತರ್ಯದ ಅಂಧಕಾರವನ್ನು ಹೋಗಲಾಡಿಸಿ ಚಿತ್ತ ಜ್ಯೋತಿಯನ್ನು ಬೆಳಗಿಸುವುದಕ್ಕೊಸ್ಕರ ಪರಮೇಶ್ವರನು ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆ ನಿಂತಿದ್ದಾನೆ ಎಂದು ಹೇಳಲಾಗುತ್ತದೆ. ಬನ್ನಿ ಇವತ್ತಿನ ಶುಭ ದಿನದಂದು ಶಿವನ ಪವಿತ್ರ ತಾಣಗಳು ಎಂದೇ ಕರೆಯುವ ದ್ವಾದಶ ಜ್ಯೋತಿರ್ಲಿಂಗಗಳ ಬಗ್ಗೆ ಇಂದಿನ ಲೇಖನದಲ್ಲಿ ಮಾಹಿತಿ ತಿಳಿದು ಕೃತಾರ್ಥರಾಗೋಣ. ನಮ್ಮ ದೇಶದಲ್ಲಿ ಒಟ್ಟು 64 ಜ್ಯೋತಿರ್ಲಿಂಗ ಗಳು ಇದ್ದು, ಅವುಗಳಲ್ಲಿ 12 ಜ್ಯೋತಿರ್ಲಿಂಗಗಳನ್ನು ಅತ್ಯಂತ ಪವಿತ್ರ ಮೋಕ್ಷ ಲಿಂಗಗಳು ಎಂದೇ ಕರೆಯಲಾಗುತ್ತದೆ. ಜ್ಯೋತಿರ್ಲಿಂಗಗಳನ್ನ ದರ್ಶನ ಮಾಡೋದ್ರಿಂದ ಸಕಲ ಪಾಪಗಳು ದೂರವಾಗಿ ಮೋಕ್ಷ ದೊರಕುತ್ತದೆ ಎನ್ನುವ ನಂಬಿಕೆ ಇದೆ. ಅದಕ್ಕೋಸ್ಕರ ಎಲ್ಲರೂ ದ್ವಾದಶ ಲಿಂಗಗಳ ಯಾತ್ರೆಯನ್ನು ಕೈಗೊಳ್ಳುತ್ತಾರೆ. ದ್ವಾದಶ ಜ್ಯೋತರ್ಲಿಂಗಗಳ ಹೆಸರನ್ನು ಬೆಳಗ್ಗೆ ಮತ್ತು ಸಂಜೆ ನೇನೆದರೂ ಸಾಕು ಸಪ್ತ ಜನ್ಮಗಳಲ್ಲಿ ಮಾಡಿದ ಪಾಪಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀ ಶಂಕರಾಚಾರ್ಯರು ತಮ್ಮ ಶ್ಲೋಕದಲ್ಲಿ ದ್ವಾದಶ ಜ್ಯೋತಿರ್ಲಂಗಗಳ ಬಗ್ಗೆ ಬರೆದುಕೊಂಡಿದ್ದಾರೆ. ಬನ್ನಿ ಈ ದ್ವಾದಶ ಜ್ಯೋತಿರ್ಲಿಂಗ ಗಳ ಮಾಹಿತಿಯನ್ನು ಪಡೆಯೋಣ. 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಸೌರಾಷ್ಟ್ರದ ಸೋಮನಾಥೇಶ್ವರ. ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೆರವಳ ಪ್ರದೇಶದ ಜ್ಯೋತಿರ್ಲಿಂಗ ಇದಾಗಿದೆ. ಅನಂಥಮಯ ಲಿಂಗವೆಂದು ಕರೆಯುವ ಈ ದೇಗುಲವನ್ನು ಅತ್ಯಂತ ಪುರಾತನ ದೇಗುಲ ಅಂತ ಹೇಳಲಾಗುತ್ತದೆ. ಅಪಾರವಾದ ಸಂಪತ್ತನ್ನು ಒಳಗೊಂಡ ಈ ದೇವಾಲಯದ ಮೇಲೆ ಹಲವಾರು ಬಾರಿ ದಾಳಿ ಮಾಡಲಾಯಿತು. ಹೀಗಾಗಿ ಭಾರತ ದೇಶದ ಸ್ವಾಂತಂತ್ರ್ಯ ನಂತರ ಈ ಆಲಯವನ್ನು ಸರ್ದಾರ್ ವಲ್ಲಭಯಿ ಪಟೇಲರು ಪುನರ್ ನಿರ್ಮಾಣ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಪರಮೇಶ್ವರನು ಸೋಮನಾಥೇಶ್ವರನಾಗೀ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೆ.

ಈ ಕ್ಷೇತ್ರಕ್ಕೆ ಭೇಟಿ ನೀಡಿ ಸೋಮೇಶ್ವರನ ದರ್ಶನ ಮಾಡಿದ್ರೆ ಸಕಲ ಇಷ್ಟಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದಲ್ಲಿ ಶಿವರಾತ್ರಿ ಯಂದು ಜಾತ್ರೆ ನಡೆಯುತ್ತದೆ. ಶಿವನ ಎರಡನೇ ಜ್ಯೋತಿರ್ಲಿಂಗವೂ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ನಂದಿ ಕೋಟತೋರು ಭಾಗದಲ್ಲಿ ಹಬ್ಬಿರುವ ಶ್ರೀ ಶೈಲ ಪರ್ವತ ಶ್ರೇಣಿಯಲ್ಲಿ ಇದೆ. ಕೃಷ್ಣಾ ನದಿಯ ದಕ್ಷಿಣ ಭಾಗದಲ್ಲಿರುವ ಈ ಕ್ಷೇತ್ರದಲ್ಲಿ ಮಹೇಶ್ವರನು ಮಲ್ಲಿಕಾರ್ಜುನ ಎಂಬ ಹೆಸರಿನಿಂದ ಬ್ರಮರಾಂಭ ದೇವಿಯ ಜೊತೆ ನೆಲೆ ನಿಂತಿದ್ದಾನೆ. ಮೋಕ್ಷ ಪ್ರದಾಯಕ ಕ್ಷೇತ್ರ ಎಂದೇ ಪ್ರಸಿದ್ಧಿ ಆಗಿರುವ ಈ ಕ್ಷೇತ್ರದಲ್ಲಿ ಪಾರ್ವತಿ ದೇವಿಯು ಅರುಣಾಸುರ ಎಂಬ ರಾಕ್ಷಸನನ್ನು ಸಂಹರಿಸುವ ಸಲುವಾಗಿ ಭ್ರಮರ ಅಂದರೆ ದುಂಬಿಯಾಗಿ ಬಂದು ರಾಕ್ಷಸನನ್ನೂ ಸಂಹರಿಸಿ ಈ ಸ್ಥಳದಲ್ಲಿ ಮಲ್ಲಿಕಾರ್ಜುನನ ಜೊತೆ ನೆಲೆಸಿದಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ. ವಿವಾಹ ವಿಳಂಬ ಸಮಸ್ಯೆ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕ್ಷೇತ್ರಕ್ಕೆ ಬಂದರೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯು ಇದೆ. ಪ್ರತಿ ವರ್ಷ ಯುಗಾದಿಯ ದಿನದಂದು ಇಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವ ನಡಸಲಾಗುವುದು. ಈ ಸಮಯದಲ್ಲಿ ಆಂಧ್ರ ಪ್ರದೇಶ ಮಾತ್ರವಲ್ಲದೆ ಕರ್ನಾಟಕದಿಂದಲೂ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಇನ್ನೂ ಶಿವನ ಮೂರನೇ ಜ್ಯೋತಿರ್ಲಿಂಗವೂ ಉಜ್ಜಯಿನಿಯಲ್ಲಿದೆ. ಇಲ್ಲಿ ಜಗದೇಶ್ವರನು ಸ್ವಯಂ ಭೂ ಆಗಿ ಮಹಾ ಕಾಲೇಶ್ವರ ಎಂಬ ಹೆಸರಿನಿಂದ ನೆಲೆನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಭಸ್ಮದಲ್ಲಿಯೇ ಶಿವನನ್ನು ಪೂಜಿಸುವ ಅಪರೂಪದ ದೇವಾಲಯ ಇದಾಗಿದ್ದು, ಮಹಾ ಕಾಳೇಶ್ವರನ ದರ್ಶನದಿಂದ ಮಾತ್ರದಿಂದಲೇ ಅಕಾಲ ಮೃತ್ಯು, ಮೃತ್ಯುವಿನಿಂದಲೇ ಭಯಗಳು ದೂರವಾಗಿ ಮುಕ್ತಿ ದೊರಕುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿನ ವಿಶೇಷತೆ ಏನಂದ್ರೆ ದೇವರಿಗೆ ಅರ್ಪಿಸಿದ ಹೂವು ಪತ್ರೆಗಳನ್ನು ತೊಳೆದು ಮರು ಉಪಯೋಗಿಸುತ್ತಾರೆ ಎಂಬುದು. ಅಲ್ಲದೆ ಭಕ್ತರೇ ಸ್ವಯಂ ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆಯನ್ನು ಮಾಡಬಹುದಾಗಿದೆ. ಭಸ್ಮ ಪ್ರಿಯನಾದ ಮಹಾ ಕಾಳೇಶ್ವರ ನ ಸನ್ನಿಧಿಯಲ್ಲಿ ಹನ್ನೆರೆಡು ವರ್ಷಗಳಿಗೆ ಒಮ್ಮೆ ಕುಂಭ ಮೇಳವನ್ನು ನಡೆಸಲಾಗುತ್ತದೆ. ಶಿವನ ನಾಲ್ಕನೇ ಜ್ಯೋತಿರ್ಲಿಂಗವೂ ಮಧ್ಯ ಪ್ರದೇಶದ ಕಾನ್ಪಾ ಜಿಲ್ಲೆಯಲ್ಲಿದೆ. ನರ್ಮದಾ ನದಿಯ ದ್ವೀಪ ಪ್ರದೇಶದಲ್ಲಿ ನರ್ಮದಾ ನದಿಯಿಂದ ನಿರ್ಮಿತವಾದ ಈ ದ್ವೀಪವು ನೋಡಲು ಓಂ ಆಕಾರದಲ್ಲಿ ಕಾಣುವುದರಿಂದ ಇಲ್ಲಿ ನೆಲೆಸಿದ ಪರಮೇಶ್ವರನನ್ನು ಓಂಕಾರೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಇಲ್ಲಿಗೆ ಬಂದು ಮನೋಭಿಲಾಶೆಗಳನ್ನು ಸ್ವಾಮಿಯ ಬಳಿ ಕೇಳಿಕೊಂಡರೆ ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತವೆ ಎಂದು ಹೇಳಲಾಗುತ್ತದೆ. ಪ್ರತಿ ದಿನ ರಾತ್ರಿ ದೀಪಾ ರಾಧನೆ ದೀಪ ಆರತಿ ನಡೆಯುವುದು ಈ ಕ್ಷೇತ್ರದ ಆಕರ್ಷಣೆ ಆಗಿದೆ. ಇನ್ನೂ ಶಿವನ ಐದನೇ ಜ್ಯೋತಿರ್ಲಿಂಗ ವೂ ಜಾರ್ಖಂಡ್ ರಾಜ್ಯದ ದೇವಗಡ್ ಪ್ರದೇಶದಲ್ಲಿದೆ. ಇಲ್ಲಿ ಶಿವನನ್ನು ವೈದ್ಯನಾಥ ಅಥವಾ ಬೈಧ್ಯನಾಥ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿರುವ ಶಿವನ ಲಿಂಗವನ್ನು ರಾವಣಾಸುರನು ಕೈಲಾಸದಿಂದ ತಂದು ಪ್ರತಿಷ್ಠಾಪಿಸಿದನು ಎಂಬ ಪ್ರತೀತಿ ಇದೆ. ಅತ್ಯಂತ ಪೂಜನೀಯ ಜ್ಯೋತಿರ್ಲಿಂಗ ಎಂದು ಕರೆಯುವ ಈ ದೇವಾಯಲದಲ್ಲಿ ಅತ್ಯಂತ ಭಕ್ತಿಯಿಂದ ಹಾಗೂ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸಿದರೆ ಎಲ್ಲ ಬಗೆಯ ಕಷ್ಟಗಳು ದುಃಖಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಶಿವನ ಆರನೆಯ ಜ್ಯೋತಿರ್ಲಿಂಗವೂ ಗುಜರಾತ್ ರಾಜ್ಯದ ಪುಣೆ ನಗರದ ಖೇಡ್ ಪ್ರದೇಶದಲ್ಲಿದೆ. ಭೀಮಾ ನದಿಯ ತಟದಲ್ಲಿ ಭೀಮಾ ಶಂಕರನಾಗಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಪರಮೇಶ್ವರನು ಈ ಕ್ಷೇತ್ರದಲ್ಲಿ ಪಾರ್ವತಿ ಸಮೇತನಾಗಿ ಲಿಂಗ ರೂಪದಲ್ಲಿ ನೆಲೆಸಿದ್ದಾನೆ ಅನ್ನೋ ಪ್ರತೀತಿ ಇದ್ದು, ನಾಗರ ಶೈಲಿಯಲ್ಲಿ ನಿರ್ಮಿತವಾದ ಈ ದೇಗುಲದಲ್ಲಿ ಶಿವನಿಗೆ ತ್ರಿಕಾಲ ಪೂಜೆಯನ್ನು ಮಾಡಲಾಗುತ್ತದೆ.

ಮಹಾ ಶಿವರಾತ್ರಿ ಯಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಭೀಮಾ ನದಿಯ ಉಗಮ ಸ್ಥಾನವಾದ ಈ ಕ್ಷೇತ್ರಕ್ಕೆ ಬಂದರೆ ದೇಗುಲದ ಸೌಂದರ್ಯದ ಜೊತೆಗೆ ಪ್ರಕೃತಿಯ ಅನನ್ಯ ಸೌಂದರ್ಯವನ್ನು ಸಹ ಸವಿಯಬಹುದು. ಇನ್ನೂ ಶ್ರೀ ರಾಮ ಚಂದ್ರನು ಲಂಕೆಗೆ ಸೇತುವೆ ಕಟ್ಟುವುದಕ್ಕೆ ಮೊದಲು ಶಿವ ಲಿಂಗವನ್ನು ಸಮುದ್ರದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು ಎನ್ನುವ ಪುಣ್ಯ ಕ್ಷೇತ್ರವನ್ನು ರಾಮೇಶ್ವರ ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತದೆ. ರಾಮೇಶ್ವರ ದೇವಾಲಯವೂ ಸಾವಿರ ಕಂಬಗಳ ಕೆತ್ತನೆಯನ್ನೂ ಹೊಂದಿದ್ದು, ಅತ್ಯದ್ಭುತ ವಾಸ್ತು ಶಿಲ್ಪಿ ಗಳಿಂದ ಕೆತ್ತಲ್ಪಟ್ಟಿವೆ. ದೇ. ಈ ದೇವಾಲಯವನ್ನು ಹನ್ನೆರಡನೆಯ ಶತಮಾನದಲ್ಲಿ ಕಟ್ಟಲಾಗಿದೆ. ಪಾಂಡ್ಯಮ್ ವಂಶದ ರಾಜರು ಕಟ್ಟಿದರು ಎಂದು ಹೇಳಲಾಗುತ್ತದೆ. ಈ ದೇವಾಲಯವು ಭಾರತದ ಎಲ್ಲಾ ದೇವಾಲಯಗಳಿಗಿಂತ ಉದ್ದವಾಗಿದೆ ಎಂದು ಹೇಳಲಾಗುತ್ತದೆ. ರಾಮೇಶ್ವರದ ಈ ದೇವಾಲಯವು ಶೈವ ವೈಷ್ಣವರ ಪವಿತ್ರವಾದ ಯಾತ್ರಾ ಸ್ಥಳ ವೆಂದು ಪ್ರಸಿದ್ಧಿ ಆಗಿದೆ. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಭಕ್ತರು ಇಲ್ಲಿನ ಸ್ಫಟಿಕದ ಲಿಂಗವನ್ನು ದರ್ಶನ ಮಾಡಬಹುದಾಗಿದೆ. ಇಲ್ಲಿ ಪ್ರತಿ ದಿನವೂ ವಿಶೇಷವಾದ ಪೂಜೆ ಇರುತ್ತೆ. ಉತ್ತರ ಗಂಗಾ ದಲ್ಲಿ ಸ್ನಾನ ಮಾಡಿ ಅಲ್ಲಿಂದ ತುಂಬಿಕೊಂಡು ಬಂದ ನೀರನ್ನು ರಾಮೇಶ್ವರನಿಗೆ ಅಭಿಷೇಕ ಮಾಡುವುದು ಈ ಕ್ಷೇತ್ರದ ವಿಶೇಷ ಆಗಿದೆ. ಈ ಪುಣ್ಯ ಕ್ಷೇತ್ರವೂ ತಮಿಳು ನಾಡಿನ ಬಂಗಾಳ ಕೊಲ್ಲಿ ಸಮುದ್ರ ತಟದಲ್ಲಿದೇ. ಭಾರತದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ರಾಮೇಶ್ವರವೂ ಒಂದಾಗಿದೆ. ಇವೆಲ್ಲಾ ಜ್ಯೋತಿರ್ಲಿಂಗಗಳ ಜೊತೆ ಶಿವನಿಗೆ ಮುಡಿಪಾದ ಎಂಟನೇ ಜ್ಯೋತಿರ್ಲಿಂಗವೂ ಗುಜರಾತ್ ರಾಜ್ಯದ ಜಮ ನಗರ ಜಿಲ್ಲೆಯ ದ್ವಾರಕಾ ನಗರದಲ್ಲಿದೆ. ಇಲ್ಲಿ ಶಿವನು ನಾಗೇಶ್ವರನಾಗಿ ನೆಲೆ ನಿಂತು ಭಕ್ತರನ್ನು ಪೂಜಿಸುತ್ತಿದ್ದಾರೆ. ದಾರುಕ ಎಂಬ ರಾಕ್ಷಸರನ್ನು ಸಂಹರಿಸಿ ಪರಮೇಶ್ವರನು ನಾಗೇಶ್ವರನಾಗಿ ನೆಲೆಸಿದ ಎಂಬ ಪ್ರತೀತಿ ಇದ್ದು, ಇಲ್ಲಿ ನೆಲೆಸಿದ ಪಾರ್ವತಿ ದೇವಿಯನ್ನು ನಾಗೇಶ್ವರಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಇನ್ನೂ ಶಿವನ ಹನ್ನೆರೆಡು ಜ್ಯೋತಿರ್ಲಿಂಗ ಗಳಲ್ಲಿ ಅತೀ ಪ್ರಸಿದ್ಧವಾದ ಜ್ಯೋತಿರ್ಲಿಂಗ ಎಂದರೆ ಅದು ಕಾಶಿ ಕ್ಷೇತ್ರ. ಗಂಗಾ ನದಿಯ ತಟದಲ್ಲಿ ಇರುವ ಈ ಕ್ಷೇತ್ರಕ್ಕೆ ಸುಮಾರು 3500 ವರ್ಷಗಳಷ್ಟು ಇತಿಹಾಸ ಇದೆ. ಇಲ್ಲಿ ಮಹೇಶ್ವರನು ವಿಶ್ವೇಶ್ವರ ನಾಗಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದನೆ. ಹಿಂದೂ ಧರ್ಮದಲ್ಲಿ ಮೋಕ್ಷ ಕ್ಷೇತ್ರ ಎಂದೇ ಪ್ರಸಿದ್ಧವಾಗಿದೆ. ಈ ಸ್ಥಳಕ್ಕೆ ಬಂದು ಪಿಂಡ ಪ್ರಧಾನ ಮಾಡಿದ್ರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ, ಸದ್ಗತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಪ್ರತಿ ದಿನ ಸಂಜೆ ನಡೆಯುವ ಗಂಗಾ ರತಿ ನೋಡಲೂ ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಜಗದಿಶ್ವರ ನೀವೇ ಮುಡಿಪಾದ ಇನ್ನೊಂದು ಜ್ಯೋತಿರ್ಲಿಂಗ ಎಂದ್ರೆ ನಾಸಿಕ್ ಜಿಲ್ಲೆಯಲ್ಲಿರುವ ತ್ರಯಂಬಕೇಶ್ವರ ಜ್ಯೋತಿರ್ಲಿಂಗ. ಗೌತಮ ಮುನಿಗಳು ತಪಸ್ಸನ್ನು ಮಾಡಿ ವರುಣಾ ದೇವರು ಪ್ರತ್ಯಕ್ಷ ಆಗುವಂತೆ ಮಾಡಿದ ಈ ಲಿಂಗವು ಗೋದಾವರಿ ನದಿಯ ತಟದ ಮೇಲಿದ್ದು ಈ ಸ್ಥಳದಲ್ಲಿ ಮಹೇಶ್ವರನು ಬ್ರಹ್ಮ ವಿಷ್ಣುವಿನ ಸಮೇತರಾಗಿ ನೆಲೆ ನಿಂತಿರುವ ಪ್ರತೀತಿ ಇದೆ. ಕೇದಾರನಾಥ ಕ್ಷೇತ್ರವೂ ಪ್ರಸಿದ್ಧ ಜ್ಯೋತಿರ್ಲಿಂಗ ಆಗಿದೆ. ಇವೆಲ್ಲವುಗಳ ಜೊತೆ ಮಹಾರಾಷ್ಟ್ರದ ಗೃಷ್ಮೇಶ ಜ್ಯೋತಿರ್ಲಿಂಗ. ಇದನ್ನು ಕೊನೆಯ ಅಥವಾ ಹನ್ನೆರಡನೆಯ ಜ್ಯೋತಿರ್ಲಿಂಗ ಆಗಿದೆ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *