ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಒಂದಲ್ಲ ಒಂದು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಪ್ರಧಾನ್ ಮಂತ್ರ ಯುವ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ಗ್ಯಾಸ್ ಸಬ್ಸಿಡಿಯಂತಹ ಇನ್ನು ಹತ್ತು ಹಲವು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ..
ಈಗ ಮೋದಿಯವರ ತಂದಿರುವ ಹೊಸದೊಂದು ಯೋಜನೆ ನಿಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು. ಅದೇನಪ್ಪ ಅಂತೀರಾ ಹೆಣ್ಣು ಮಕ್ಕಳನ್ನು ಬ್ರುಣದಲ್ಲೇ ಹತ್ಯೆ ಮಾಡುತ್ತಿರುವ ಈ ಕಾಲದಲ್ಲಿ, ಹೆಣ್ಣು ಸಂತಾನ ಹೆಚ್ಚಿಸುವ ಸಲುವಾಗಿ ಹಾಗು ಹೆಣ್ಣು ಮಕ್ಕಳ ಭವಿಷ್ಯದ ವಿದ್ಯಾಬ್ಯಾಸಕ್ಕೆ, ವಿವಾಹಕ್ಕೆ ಹಾಗು ಅವರ ಅಭಿವೃದ್ದಿಗೆ ಅವರ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು ಪೋಷಕರಿಗೆ ನೆರವಾಗುವಂತಹ ಒಂದು ಅದ್ಭುತ ಯೋಜನೆಯನ್ನು ಮೋದಿ ಸರ್ಕಾರ ಪ್ರಾರಂಬಿಸಿದೆ.
ಮೋದಿಯವರ ‘ಭೇಟಿ ಬಚಾವೋ, ಭೇಟಿ ಪಡಾವೋ’ ಎಂಬ ಆಂದೋಲನ ಎಲ್ಲರಿಗೂ ತಿಳಿದೇ ಇದೆ ಈಗ ಇದೆ ಆಂದೋಲನದ ಅಡಿಯಲ್ಲಿ ಈ ಹೊಸ ಯೋಜನೆ ರೂಪುಗೊಂಡು ಜಾರಿಗೆ ಬಂದಿದೆ. ಈ ಮಹತ್ವಕಾಂಕ್ಷಿ ಯೋಜನೆಯೇ “ಸುಕನ್ಯ ಸಮೃದ್ಧಿ ಯೋಜನೆ”,
ಈ ಯೋಜನೆಯ ವಿಶೇಷ ಅಂದರೆ ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯ ಅಡಿಯಲ್ಲಿ 10000 ಠೇವಣೀ ಇಟ್ಟರೆ ಅಥವ ತೊಡಗಿಸಿದರೆ ಆ ಮಗು 18 ವರ್ಷ ವಯಸ್ಸಿಗೆ ಬರುವ ವೇಳೆಗೆ ನೀವು 40,00,000 ಲಕ್ಷಕ್ಕೂ ಅಧಿಕ ಹಣವನ್ನ ಪಡೆಯುತ್ತೀರಿ ಅಷ್ಟೇ ಅಲ್ಲ ಇನ್ನು 21 ವರ್ಷದವರೆವಿಗೂ ಬಿಟ್ಟರೆ ನೀವು ಕೋಟ್ಯಾಧಿಪತಿ ಆಗುತ್ತೀರಿ.
ಹಾಗಿದ್ದರೆ ಏಕೆ ತಡ ನಿಮ್ಮ ಮನೆಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗು ಇದ್ದರೆ ಇಂದೇ ಆ ಮಗುವಿನ ಹೆಸರಿನಲ್ಲಿ ಸುಕನ್ಯ ಸಮೃದ್ಧಿ ಯೋಜನೆಯಡಿ ಖಾತೆ ತೆರದು ಆ ಮಗುವಿನ ಭವಿಷ್ಯ ರೂಪಿಸಿ. ಶೇರ್ ಮಾಡಿ ಹಾಗು ಹೆಣ್ಣು ಮಗಳು ಹುಟ್ಟಿದರೆ ಕೊರಗುವ ಅದೆಷ್ಟೋ ಕುಟುಂಬದವರಿಗೆ ಈ ಯೋಜನೆ ತಲುಪಿಸಿ ಹಾಗು ಒಂದು ಹೆಣ್ಣು ಮಗುವಿನ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿ.