ನಮಸ್ತೆ ಪ್ರಿಯ ಓದುಗರೇ, ತುಂಬೆ ಗಿಡ ಎಲ್ಲರಿಗೂ ಚಿರಪರಿಚಿತ. ಕಾರ್ತಿಕ ಮಾಸದಲ್ಲಿ ಶಿವನ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು , ಎಲ್ಲಿಯಾದರೂ ಹೋಗಿ ಹುಡುಕಿ ತುಂಬೆ ಹೂವನ್ನು ಶಿವನ ತಲೆ ಮೇಲಿಟ್ಟರೆ ಎಷ್ಟೊಂದು ಸಮಸ್ಯೆ ಪರಿಹಾರ ಆಗುತ್ತೆ ಅನ್ನುವುದು ನಮ್ಮ ಧಾರ್ಮಿಕ ಭಾವನೆ ಇರುವಂಥ ಗಿಡ ಇದು. ಸಾಧಾರಣವಾಗಿ ಭಗವಂತನಿಗೆ ಪ್ರಿಯ ಎನಿಸುವ ಗಿಡ, ಹೂವು, ಪತ್ರೆ, ಪುಷ್ಪ ಎಲ್ಲವೂ ಕೂಡ ಔಷಧಿ ಇಂದ ಸಮೃದ್ಧವಾಗಿವೆ. ಇದು ಎಲ್ಲೋ ಬೇಲಿಯಲ್ಲಿ ಬಿಡುವಂತಹ ಗಿಡ ಇದು. ಇದನ್ನು ಯಾರೂ ತಂದು ಗಿಡ ನೆಟ್ಟು ಬೆಳಸಲ್ಲ. ಆದರೆ ಇದರಲ್ಲಿ ಅದ್ಭುತವಾದ ಔಷಧೀಯ ಗುಣಗಳು ಸಿಗುತ್ತವೆ. ಇದನ್ನು ನಾವು ಇಂದಿನ ಲೇಖನದಲ್ಲಿ ತಿಳಿಯೋಣ. ಕಾಮಾಲೆ ಎನ್ನುವುದು ಸ್ವಲ್ಪ ದೊಡ್ಡ ಸಮಸ್ಯೆ ಆಗಿದೆ, ಅದು ಬಂದರೆ ಸುಮಾರು ಒಂದು ತಿಂಗಳು ಏನಾದರೂ ತಿನ್ನಲು ಭಯ, ಅಷ್ಟು ತೊಂದರೆಯನ್ನು ಕೊಡುತ್ತೆ, ಏನು ತಿಂದರೂ ಏನಾದರೂ ವ್ಯತ್ಯಾಸ ಕಂಡು ಬರುತ್ತದೆ. ಹಾಗಾಗಿ ಈ ಕಾಮಾಲೆ ಯಾವಾಗ ಬರುತ್ತದೆ ಎಂದರೆ, ಈ ಲಿವರ್ ಅಥವ ಯಕೃತ್ ಸರಿಯಾಗಿ ಕೆಲಸ ಮಾಡದೇ ಇದ್ದಗ ಈ ಕಾಮಾಲೆ ರೋಗದ ಲಕ್ಷಣಗಳು ಕಾಣಿಸುತ್ತವೆ. ಲಿವರ್ ಇಂದ ಬರುವ ಎಲ್ಲ ಸಮಸ್ಯೆಗಳಿಗೆ ತುಂಬೆ ಗಿಡದ ಎಲೆಗಳಲ್ಲಿ ಚಿಕಿತ್ಸೆ ಇದೆ. ಇದನ್ನು ಹೇಗೆ ಬಳಸಬೇಕು? ಎಂದರೆ, ಈ ಗಿಡದ ಎಲೆಗಳನ್ನು ಕಿತ್ತು ಮೆಣಸಿನ ಕಾಳಿನ ಜೊತೆಗೆ ಅವನ್ನು ಜಜ್ಜಿ ರಸ ಬೇರ್ಪಡಿಸಿ , ಆ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನೆಕ್ಕುತ್ತಾ ಬರಬೇಕು. ಹೀಗೆ ದಿನ ಬೆಳಿಗ್ಗೆ ರಾತ್ರಿ 8 ದಿವಸ ಸತತವಾಗಿ ಸೇವನೆ ಮಾಡಿದರೆ ಲಿವರ್ ಗೆ ಸಂಬಂಧ ಪಟ್ಟ ಎಲ್ಲ ಸಮಸ್ಯೆ ಹಾಗೂ ಕಾಮಾಲೆ ಅಂದರೆ ಜಾಂಡೀಸ್ ಕೂಡ ಗುಣವಾಗುತ್ತದೆ. ಇದು ಬಹಳ ದೊಡ್ಡ ಸಮಸ್ಯೆಯೇ, ಅದಕ್ಕೆ ಇದರಲ್ಲಿ ಸುಲಭ ಚಿಕತ್ಸೆ ಇದೆ.

ಇನ್ನೂ ಮಧುಮೇಹಿಗಳು ಈ ತುಂಬೆ ಗಿಡದ ಎಲೆಗಳನ್ನು ಕೈಯಲ್ಲಿ ಹಿಸುಕಿ ಹಿಂಡಿದರೆ ರಸ ಬರುತ್ತದೆ, ಈ ರಸಕ್ಕೆ ಒಂದು ಚಿಟಿಕೆ ಕಾಳು ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಟು ಕನಿಷ್ಟ 21 ದಿನಗಳ ಕಾಲ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆ ಆಗುವುದಕ್ಕೆ ಸಾಧ್ಯವಾಗುತ್ತದೆ. ಕೆಲವರಿಗೆ ನಿಯಂತ್ರಣಕ್ಕೆ ಬರುವುದಿಲ್ಲ, 300-350 ಕೆ ಹೋಗುತ್ತಾ ಇರುತ್ತದೆ. ಅಂಥವರು ಕೂಡ ಇದನ್ನು ತೆಗೆದುಕೊಂಡರೆ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ನೆಗಡಿ, ಕೆಮ್ಮು, ಗಂಟಲು ನೋವು ಈ ರೀತಿ ಶೀತಕ್ಕೆ ಸಂಬಂಧ ಪಟ್ಟಂತ ಸಮಸ್ಯೆಗೆ ಮಾತ್ರ ಇದು ಅದ್ಭುತವಾದ ದಿವ್ಯೌಷಧ. ಈ ಸಮಸ್ಯೆ ಇರುವವರೂ ಇದನ್ನು ಒಂದು ಒಳ್ಳೆಯ ಟೀ ಮಾಡಿಕೊಂಡು ಕುಡಿದರೆ ತಕ್ಷಣ ಗುಣವಾಗುವುದು. ಇನ್ನೂ ಸೈನಸ್ ಅಂತಹ ಇದ್ದಾಗ ಇದೇ ತುಂಬೆ ಸೊಪ್ಪನ್ನು ಜಜ್ಜಿ ರಸವನ್ನು ಎರೆಡು ಬಾರಿ ಶೋಧಿಸಿ ಅರ್ಧ ಚಮಚ ದಷ್ಟು ತೆಗೆದುಕೊಂಡು ಎರೆಡು ಮೂಗಿನ ಹೊಳ್ಳೆಗೆ ಎರೆಡೆರಡು ಹನಿ ಹಾಕಿಕೊಳ್ಳುವುದರಿಂದ ಈ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

ತುಂಬೆ ಹೂವು ತುಂಬಾ ಚಿಕ್ಕದಿದ್ದ ರೂ ಇದರ ಉಪಯೋಗಗಳು ನೂರಾರು. ಚರ್ಮದಲ್ಲಿ ತುರಿಕೆ, ಹುಳುಕಡ್ಡಿ ಆದಾಗ ಈ ಹೂವಿನ ತುಂಬನ್ನು ಸವರಿಕೊಂಡರೆ ಸಾಕು ಹುಳುಕಡ್ಡಿ, ಗಜಕರ್ಣ ಕೆರೆತ ಮಾಯವಾಗುತ್ತದೆ. ತಲೆ ಹೊಟ್ಟಿನ ನಿವಾರಣೆಗೆ ಈ ಸೊಪ್ಪಿನ ರಸವನ್ನು ವಾರದಲ್ಲಿ ಒಮ್ಮೆಯದರೂ ನಾಲ್ಕು ವಾರ ಹಚ್ಚಿದರೆ ಸಾಕು ಹೊತ್ತು ಕಡಿಮೆ ಆಗುತ್ತದೆ. ಇನ್ನೂ ಸದಾ ಮೈ ಕೈ ನೋವಿನಿಂದ ಬಳಲುತ್ತಿದ್ದರೆ ಅಂಥವರು ಈ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ಹಿಪ್ಪಲಿ ಸೇರಿಸಿ ಕುದಿಸಿ ಶೋಧಿಸಿ ಕುಡಿಯಬೇಕು. ಆ ರೀತಿ ಮಾಡುವುದರಿಂದ ಮೈ ಕೈ ನೋವು, ಯಾವಾಗಲೂ ಜ್ವರ ಬಂದಂತೆ ಭಾಸ ಆಗುವುದು, ಕೆಲಸ ಮಾಡಲು ಚೈತನ್ಯ ಇಲ್ಲದೆ ಆಲಸ್ಯ ಬರುವುದು ಖಂಡಿತ ಕಡಿಮೆ ಆಗುತ್ತದೆ. ಹಾಗಾಗಿ ಎಲ್ಲೋ ಬೇಲಿಯಲ್ಲಿ ಬೆಳೆಯುವ ತುಂಬೆ ಗಿಡದಲ್ಲಿ ಇಂತಹ ಅದ್ಭುತವಾದ ಚಿಕಿತ್ಸೆ ಇರುವುದು ನಮ್ಮ ಸೌಭಾಗ್ಯ ವೆ ಸರಿ. ತುಂಬೆ ಟೀ ಮಾಡುವ ವಿಧಾನ ನೋಡೋಣ – ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಹಸಿ ಶುಂಠಿ, ತುಂಬೆ ಎಲೆ, ಹಾಗೂ ಏಲಕ್ಕಿ ಬುಡ್ಡಿ ಹಾಕಿ ಕುದಿಸಿ, ನಂತರ ಗ್ಯಾಸ್ ಆಫ್ ಮಾಡಿ ಅದಕ್ಕೆ ಜೇನುತುಪ್ಪ ಹಾಗೂ ನಿಂಬೆ ರಸ ಸೇರಿಸಿ ಬಿಸಿ ಬಿಸಿಯಾಗಿ ಕುಡಿಯಿರಿ. ಶುಭದಿನ.

Leave a Reply

Your email address will not be published. Required fields are marked *