WhatsApp Group Join Now

ಉತ್ತಮ ಗುಣಮಟ್ಟದ ಔಷಧಿಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಮುಂದಾಗಿರುವ ಕೇಂದ್ರದ ಔಷಧ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ. ದೇಶಾದ್ಯಂತ ಪ್ರತಿ ಜಿಲ್ಲೆಗೆ ಒಂದು ಜನ್ ಔಷಧಿ ಮಳಿಗೆ ತೆರೆಯುವುದು ಇಲಾಖೆಯ ಗುರಿಯಾಗಿದೆ.

ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವೈಕ್ತಿಕವಾಗಿ ಜನ್ ಔಷದಿ ಮಳಿಗೆಗಳನ್ನು ತೆರೆಯಲು ಆಸಕ್ತಿ ಉಳ್ಳವರು ಇದನ್ನು ಪ್ರಾರಂಭಿಸಬಹುದಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ್ ಔಷಧ ಮಳಿಗೆ ತೆರೆಯಲು ಸರ್ಕಾರ ಸುಮಾರು2.5 ಲಕ್ಷ ರುಪಾಯಿ ಧನ ಸಹಾಯ ನೀಡಲಿದೆ.ಜೊತೆಗೆ ಜಾಗವನ್ನು ಸಹ ಉಚಿತವಾಗಿ ನೀಡಲಿದೆ.

ಔಷಧಿ ಅಂಗಡಿ ಪೀಠೋಪಕರಣಕ್ಕಾಗಿ 1 ಲಕ್ಷ, ಕಂಪ್ಯೂಟರ್ ಮತ್ತಿತರ ವಸ್ತುಗಳಿಗಾಗಿ 50 ಸಾವಿರ, ಆರಂಭದಲ್ಲಿ ಉಚಿತವಾಗಿ ಔಷದಿ ನೀಡುವ ಸಲುವಾಗಿ 1 ಲಕ್ಷ ರು. ಹಣವನ್ನು ಸರ್ಕಾರ ನೀಡುತ್ತದೆ. ಇನ್ನು ಔಷಧಿ ಮಾರಾಟದ ಮೇಲೆ ತಿಂಗಳಿಗೆ ಸುಮಾರು 1.5 ಲಕ್ಷ ರು. ಪ್ರೋತ್ಸಾಹ ಧನ ಕೂಡ ನೀಡಲಾಗುತ್ತದೆ.

ಮುಂದಿನ ಮಾರ್ಚ್ ವೇಳೆಗೆ ಸುಮಾರು 1 ಸಾವಿರ ಜನ್ ಔಷಧಿ ಅಂಗಡಿಗಳನ್ನು ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯುವ ವೇಳೆಗೆ ದೇಶದ 543 ಲೋಕಸಭೆ ಕ್ಷೇತ್ರಗಳಲ್ಲಿ ಕೊನೆ ಪಕ್ಷ ಒಂದೊಂದು ಜನ್ ಔಷಧಿ ಮಳಿಗೆ ಆರಂಭಿಸಲು ಔಷಧ ಇಲಾಖೆ ತೀರ್ಮಾನಿಸಿದೆ. ಇದರ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅರೋಗ್ಯ ಇಲಾಖೆಯಲ್ಲಿ ವಿಚಾರಿಸಿ.

WhatsApp Group Join Now

Leave a Reply

Your email address will not be published. Required fields are marked *