ನಮಸ್ತೆ ಪ್ರಿಯ ಓದುಗರೇ, ಹಲವಾರು ಜನರು ತೂಕವನ್ನು ಇಳಿಸಿಕೊಳ್ಳಲು ಎಷ್ಟೋ ರೀತಿಯಾಗಿ ಕಷ್ಟ ಪಡುತ್ತಾರೆ. ಹಲವಾರು ರೀತಿಯ ಔಷಧಗಳನ್ನು ತೆಗೆದುಕೊಳ್ಳುವುದು ಮತ್ತು ಡಯೆಟ್ ಮಾಡುವುದು ಹಾಗೆ ವ್ಯಾಯಾಮ ದೇಹದ ಕಸರತ್ತು ದೇಹ ದಂಡನೆ ಮಾಡುವುದನ್ನು ನೋಡೆ ಇರುತ್ತೇವೆ. ಆದ್ರೂ ಕೂಡ ಅವರ ತೂಕ ಕಡಿಮೆ ಆಗುತ್ತಿರುವು ಧಿಲ್ಲ. ಈ ತೂಕ ಗಳಿಕೆಗೆ ಕಾರಣ ಏನು ಹಾಗೂ ನಮ್ಮ ದೇಹದ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂದು ಇಂದಿನ ಲೇಖನದಲ್ಲಿ ಹೆಚ್ಚುವರಿ ಆಗಿ ತಿಳಿದುಕೊಳ್ಳೋಣ ಸ್ನೇಹಿತರೆ. ನೀವೇನಾದರೂ ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಖಂಡಿತವಾಗಿ ನಿಮ್ಮ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬನ್ನು ಬೊಜ್ಜನ್ನು ಹಾಗೆ ತೂಕವನ್ನು ಇಳಿಸಲು ಸಹಾಯ ಆಗುತ್ತದೆ. ನಮ್ಮ ದೇಹದಲ್ಲಿ ತೂಕ ಮತ್ತು ಬೊಜ್ಜು ಹೆಚ್ಚಾಗಲು ನಾವು ತಿನ್ನುವಂತಃ ಪದ್ಧತಿ. ಹೌದು ವೀಕ್ಷಕರೇ ಪ್ರತಿಯೊಂದು ತುತ್ತನ್ನು ಕೂಡ ಹಿಂದಿನ ಕಾಲದ ಹಿರಿಯರು 32 ಬಾರಿ ಆಗಿದು ತಿನ್ನಬೇಕು ಎಂದು ಹೇಳುತ್ತ ಇದ್ದರು ಆದರೆ ಇಂದಿನ ಫಾಸ್ಟ್ ದುನಿಯಾದಲ್ಲಿ ಯಾರೋ ಕೂಡ 32 ಬಾರಿ ಅದನ್ನು ಅಗಿದು ತಿನ್ನುತ್ತಾ ಇಲ್ಲ. ಹಾಗೇನೇ ಬೇಗ ಬೇಗನೆ ತಿನ್ನುತ್ತಾ ಇದ್ದರೆ. ನಾವು ಸೇವನೆ ಮಾಡಿರುವಂತಹ ಆಹಾರ ಸರಿಯಾಗಿ ಜೀರ್ಣ ಆಗದೇ ಇದ್ದರೆ, ನಮಗೆ ಮಲಬದ್ದತೆ ಅಂತಹ ಸಮಸ್ಯೆ ಆಗಿ ನಮ್ಮ ದೇಹದಲ್ಲಿ ಬೊಜ್ಜು ಜಾಸ್ತಿ ಆಗುತ್ತಾ ಹೋಗುತ್ತದೆ.
ಒಂದು ದಿನಕ್ಕೆ 6 ಜಲ ಹಾಗೂ 3 ಮಲ ಎನ್ನುತ್ತಾರೆ ಅಂದರೆ , ಒಂದು ದಿನಕ್ಕೆ ನಾವು 6 ಸರಿ ಆದರೂ ಮೂತ್ರ ವಿಸರ್ಜನೆ ಮಾಡಬೇಕು ಹಾಗೂ ಮೂರು ಬಾರಿ ಆದರೂ ಮಲ ವಿಸರ್ಜನೆ ಮಾಡಬೇಕು ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಬಾರಿ ಆದ್ರೂ ಕೂಡ ಮಲ ವಿಸರ್ಜನೆ ಬಹಳಷ್ಟು ಜನರು ಮಾಡುತ್ತಾ ಇಲ್ಲ. ಹಾಗಾಗಿ ಈ ರೀತಿ ಸಮಸ್ಯೆ ಇಂದ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಮಲ ವಿಸರ್ಜನೆ ಮಾಡಿದಾಗ ಯಾವುದೇ ವಾಸನೆ ಕೂಡ ಬರಬಾರದು,ಸರಿಯಾದ ಮಲ ವಿಸರ್ಜನೆ ಆಗದೆ ಇದ್ದರೆ, ದೇಹದಲ್ಲಿ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ. ತೂಕ ಕೂಡ ಜಾಸ್ತಿ ಆಗುತ್ತದೆ. ನಾರಿನಂಶ ಅಧಿಕವಿರುವುದರಿಂದ ಉತ್ತಮವಾದ ತರಕಾರಿಗಳು ಹಣ್ಣುಗಳನ್ನು ಸೇವನೆ ಮಾಡಿ ಇದರಿಂದ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. ಮತ್ತು ನಿಮ್ಮ ದೇಹದ ತೂಕ ಕಡಿಮೆ ಆಗಲು ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕೂಡ ಕುಡಿಯಿರಿ. ನೀರನ್ನು ಕುಡಿಯುವುದರಿಂದ ಮೂತ್ರ ವಿಸರ್ಜನೆಗೆ ಹೋಗುತ್ತೇವೆ. ಮೂತ್ರ ವಿಸರ್ಜನೆ ಮಾಡಿದಾಗ ನಮ್ಮ ದೇಹದಲ್ಲಿ ಇರುವಂತಹ ಕಲ್ಮಶಗಳು ಹಾಗೂ ಕೆಟ್ಟ ವಿಷಕಾರಿ ಅಂಶಗಳು ಹೊರಗೆ ಹೋಗುತ್ತವೆ. ಇದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವಂತಹ ಸಹಾಯ ಆಗುತ್ತದೆ.
ಇನ್ನೂ ಸಾಧ್ಯವಾದಷ್ಟು ನೀವು ಸಕ್ಕರೆ ಅಂಶದಿಂದ ದೂರ ಇರಿ ಹಾಗೂ ಅತಿಯಾದ ಸಿಹಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೂಡ ನಿಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ. ಹಾಗಾಗಿ ಸಕ್ಕರೆ ಪದಾರ್ಥ ಹಾಗೂ ಸಿಹಿ ಪದಾರ್ಥ ಸೇವನೆ ಮಾಡುವುದನ್ನು ಕಡಿಮೆ ಮಾಡಿ. ಇನ್ನೂ ಸ್ನೇಹಿತರೆ ಹಲವಾರು ಜನರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಹಾರವನ್ನು ಬಿಟ್ಟು ಬಿಡುತ್ತಾರೆ ಆದರೆ ಈ ರೀತಿಯ ತಪ್ಪುಗಳನ್ನು ಎಂದಿಗೂ ಕೂಡ ಮಾಡಬೇಡಿ. ನೀವೇನಾದರೂ ಆಹಾರವನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿದರೆ ಅಥವಾ ಬಿಟ್ಟರೆ ನಿಮ್ಮ ರೋಗ ನಿರೋಧಕ ಶಕ್ತಿ ಕುಂಠಿತ ಆಗುತ್ತದೆ. ಇದರಿಂದ ನಿಮಗೆ ಹಲವಾರು ರೀತಿಯ ಕಾಯಿಲೆಗಳು ಕೂಡ ಆರಂಭ ಆಗುತ್ತವೆ. ದೇಹ ಶಕ್ತಿಹೀನವಾಗುತ್ತದೆ. ಹಾಗಾಗಿ ಆಹಾರವನ್ನು ಬಿಟ್ಟು ಬಿಡದೆ ಮಿತವಾಗಿ ಸೇವನೆ ಮಾಡಿ. ಪ್ರತಿ ದಿವಸ ನೀವು 30 ನಿಮಿಷಗಳ ಕಾಲ ವ್ಯಾಯಾಮ ಹಾಗೂ ವಾಕಿಂಗ್, ಜಿಮ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ. ಪ್ರತಿ ದಿವಸ ಎಕ್ಸರ್ಸೈಜ್ ಮಾಡದೆ ಇದ್ದರೆ ನಿಮ್ಮ ದೇಹದ ತೂಕ ಎಂದಿಗೂ ಕಡಿಮೆ ಆಗಲು ಸಾಧ್ಯವಿಲ್ಲ. ನಿಮ್ಮ ಆಫೀಸ್ ಹತ್ತಿರ ಇದ್ದರೆ ನೀವು ನಿಮ್ಮ ಆಫೀಸ್ ಗೆ ಕಾರ್ ಅಥವಾ ಬೈಕ್ ತೆಗೆದುಕೊಂಡು ಹೋಗುವ ಬದಲು ವಾಕಿಂಗ್ ಅಥವಾ ಕಾಲ್ನಡಿಗೆ ಮಾಡಿಕೊಂಡು ಹೋಗಿ ಅಥವಾ ಸೈಕಲ್ ತುಳಿದುಕೊಂಡು ಹೋಗಿ. ಇದರಿಂದ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ ಹಾಗೂ ಇಡೀ ದಿನ ನೀವು ಆಕ್ಟೀವ್ ಆಗಿ ಕ್ರಿಯಾ ಶೀಲರಾಗಿ ಇರುತ್ತೀರಿ. ನಿಮಗೆ ಒಂದು ಒಳ್ಳೆಯ ವಾಯಮ ಕೂಡ ಸಿಕ್ಕಂತೆ ಆಗುತ್ತದೆ. ನೋಡಿದ್ರಲ್ವ ಸ್ನೇಹಿತರೆ ದೇಹದ ತೂಕ ಇಳಿಸಿಕೊಳ್ಳುವುದು ಈಗ ತುಂಬಾ ಸುಲಭ ಆದರೆ ಮನಸ್ಸು ಮಾಡಬೇಕು ಅಷ್ಟೇ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.