ಇವತ್ತಿನ ವಿಷಯ ಗಡ್ಡ ಈ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಮುನ್ನ ಈ ಮಾಹಿತಿಯನ್ನು ಶೇರ್ ಮಾಡಿ. ಈಗಿನ ದಿನಗಳಲ್ಲಿ ದಪ್ಪ ಗಡ್ಡ ಇರುವುದು ಎಲ್ಲ ಗಂಡಸರ ಕನಸಾಗಿದೆ. ಏಕೆಂದರೆ ಇದು ಗಂಡಸರ ವ್ಯಕ್ತಿತ್ವ ಎದ್ದು ಕಾಣುತ್ತದೆ. ಆದರೆ ಈ ಕನಸು ತುಂಬಾ ಕಡಿಮೆ ಜನರಿಗೆ ಮಾತ್ರ ನಿಜವಾಗುವುದು. ಬಹುತೇಕ ಜನರು ಪ್ಯಾಚಿ beard ಅಥವಾ ತ್ಯಾಪೆ ಗಡ್ಡ ಹೊಂದಿರುತ್ತಾರೆ. ಮತ್ತು ಇದು ನೋಡಲು ಸುಂದರವಾಗಿರುವುದಿಲ್ಲ. ಹಾಗೂ ಇದನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಪ್ಯಾಚಿ ಗಡ್ಡ ಆಗಲು ತುಂಬಾ ಕಾರಣಗಳು ಇವೆ. ಅಂದರೆ ಸ್ಟ್ರೆಸ್ ನಿಂದ ನಮ್ಮ ಕೂದಲು ಉದುರುವುದು. ಮತ್ತು ನಮ್ಮ ಗಡ್ಡ ಸರಿಯಾಗಿ ಬೆಳೆಯುವುದಿಲ್ಲ.
ಹಾಗೂ ನಮ್ಮ ದೇಹ ನಿಧಾನವಾಗಿ ದಪ್ಪ ಆಗುವುದು. ಇದರ ಇನ್ನೊಂದು ಕಾರಣ ನಿಮ್ಮ ಆಹಾರ. ಹೌದು ಗೆಳೆಯರೆ ಈಗ ಜನರು ಮನೆಯಲ್ಲಿ ಊಟ ಮಾಡುವುದು ಕಡಿಮೆ ಮಾಡಿದ್ದಾರೆ. ಮತ್ತು ಹೊರಗಡೆಯ ಊಟ ಹೆಚ್ಚಾಗಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದರೆ. ಇದರಿಂದ ನಿಮ್ಮ ದೇಹಕ್ಕೆ ಸರಿಯಾದ ನ್ಯೂಟ್ರಿಷಿಯನ್ ಸಿಗುವುದಿಲ್ಲ. ಮತ್ತು ನಿಮ್ಮ ಗಡ್ಡ ಸರಿಯಾಗಿ ಬೆಳೆಯುವುದಿಲ್ಲ. ಪ್ಯಾಚಿ ಗಡ್ಡದ ಮತ್ತೊಂದು ಕಾರಣ ನಿಮ್ಮ ಜೇನೇಟಿಕ್ಸ್ ಕೂಡ ಆಗಿರುತ್ತದೆ. ನಿಮ್ಮ ತಂದೆಗೆ ಪ್ಯಾಚಿ beards ಬೆಳೆದಿದ್ದರೆ ಅದೇ ರೀತಿ ನಿಮಗೂ ಸಹ
ತಂದೆಯ ತರಹ ಪ್ಯಾಚಿ beard ಬೆಳೆದಿರುತ್ತದೆ. ಇವಾಗ ನಾವು ನಿಮಗೆ ಕೆಲವೊಂದು ಟಿಪ್ಸ್ ತಿಳಿಸಬೇಕು. ಮತ್ತು ಇದನ್ನು ಅನುಸರಿಸುವುದರಿಂದ ನೀವು ಸಹ ನಿಮ್ಮ ಪ್ಯಾಚಿ beards ಅನ್ನು ದಪ್ಪ ಮತ್ತು ದಟ್ಟ ಗಡ್ಡ ವಾಗಿ ಬೆಳೆಸಿಕೊಳ್ಳಬಹುದು. ಮೊಟ್ಟಮೊದಲಿಗೆ ನಿಮ್ಮ ಪ್ಯಾಚಿ beards ಬೆಳೆಯುತ್ತಿದ್ದಾರೆ ನೀವು ಅದನ್ನು ಟ್ರಿಮ್ ಅಥವಾ ಶೇವ ಮಾಡಬೇಡಿ. ಪ್ಯಾಚಿ ಗಡ್ಡವನ್ನು ಹಾಗೆಯೇ ಬೆಳೆಯಲು ಬಿಡಿ. ಮತ್ತು ಹೀಗೆ ಮಾಡುವುದರಿಂದ ಯಾವ ಭಾಗದಲ್ಲಿ ಗಡ್ಡ ಬೆಳೆಯುತ್ತಿಲ್ಲವೋ ಆ ಭಾಗವು ಫೀಲ್ ಆಗುತ್ತದೆ.1.ಆಹಾರ: ಹೆಚ್ಚಿನ ಪೋಷಕಾಂಶಗಳಿರುವ ಆಹಾರ ಹಾಗೂ ಕಡಿಮೆ ಒತ್ತಡ ಹಾಗೂ ಹೆಚ್ಚು ನಿದ್ದೆ ನಿಮಗೆ ಬೇಗನೆ ಗಡ್ಡವನ್ನು ಬೆಳೆಸಲು ಸಹಾಯಕ. ಹಾಗೂ ನಿದ್ದೆ ಮಾಡುವುದರಿಂದಾಗಿ ಪ್ರೊಟೀನ್ ಸರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ಎಲ್ಲರೂ ಹೇಳುವಂತೆ ದಿನಕ್ಕೆ ಎಂಟು ಗ್ಲಾಸುಗಳಷ್ಟು ನೀರು ಕುಡಿಯುವುದು ಬಹಳ ಅಗತ್ಯ. ಇದರಿಂದಾಗಿ ದಪ್ಪನೆಯ ಗಡ್ಡ ಬರುತ್ತದೆ. ಒತ್ತಡ ಹೆಚ್ಚಾದಷ್ಟು ದೇಹದ ಕೂದಲು ಬಲಹೀನಗೊಳ್ಳುತ್ತದೆ ಹಾಗಾಗಿ ಒತ್ತಡದಿಂದರದಂತೆ ನೋಡಿಕೊಳ್ಳಬೇಕು. ಸಣ್ಣದಾಗಿ ಬೆಳೆದ ಗಡ್ಡ ಅಷ್ಟೊಂದು ಸುಂದರವಾಗಿ ಕಾಣದೇ ಇದ್ದರೂ ಹಾಗೆಯೇ ಬೆಳೆಯಲು ಬಿಡಿ ಗಡ್ಡ ಬೆಳೆದು ಕೂದಲು ಉದ್ದಗೆ ಬೆಳೆದಂತೆ ಮೈಯ ಚರ್ಮ ಮುಚ್ಚಿ ಹೋಗಿ ಅಂದ ಕಾಣಿಸುತ್ತದೆ.
ಹೀಗಾಗಿ ತಾಳ್ಮೆ ಇರಲಿ ಸಣ್ಣಗೆ ಬೆಳೆದ ಕೂದಲು ನೋಡಿ ಅಂದ ಕಾಣದು ಎಂದೆನ್ನಬೇಡಿ.ನಿಮ್ಮ ಜೀವನ ಶೈಲಿಗೆ ಅನುಗುಣವಾಗಿ ಚರ್ಮದ ಮೇಲ್ಪದರವನ್ನು ತೆಗೆಯುತ್ತಿರಿ. ಇದಕ್ಕಾಗಿ ಪುರುಷರಿಗಾಗಿ ಮಾಡಲಾದ ಕೆಲವು ಚರ್ಮ ನಿರ್ಮೂಲಕಗಳಿವೆ ಅವನ್ನೇ ಬಳಸಿ. ಸತ್ತು ಹೋದ ಜೀವಕಣಗಳನ್ನು ತೆಗೆಯುವುದರಿಂದ ಕೂದಲಿನ ಬೆಳವಣಿಗೆ ಬಹಳ ಬೇಗನೆ ಆಗುತ್ತದೆ.ವಿಟಮಿನ್ ಬಿ ಅನ್ನು ನಿಮ್ಮ ನಿತ್ಯದ ಆಹಾರದಲ್ಲಿ ಹೆಚ್ಚಾಗಿ ಹೋಗುವಂತೆ ನೋಡಿಕೊಳ್ಳಿ. ವಿಟಮಿನ್ ಬಿ1, ಬಿ6 ಮತ್ತು ಬಿ 12 ಮುಖ್ಯವಾಗಿ ನಮ್ಮ ಗಡ್ಡದ ಬೆಳವಣಿಗೆಗೆ ಬಹಳ ಸಹಾಯಕ. ಬಯೋಟಿನ್ ಅನ್ನು ಪ್ರತಿನಿತ್ಯ ಸೇವಿಸಿದರೆ ಉತ್ತಮ. ಇದು ಕೂದಲು ಮತ್ತು ಉಗುರಿನ ಬೆಳವಣಿಗೆಗೆ ಸಹಾಯಕ. ಬಯೋಟಿನ್ ಯಕೃತ್ತು, ಸಿಂಪಿ, ಹೂಕೋಸು, ಬೀನ್ಸ್, ಮೀನು, ಕ್ಯಾರೆಟ್, ಬಾಳೆಹಣ್ಣು, ಸೋಯಾ ಹಿಟ್ಟು, ಮೊಟ್ಟೆಯ ಹಳದಿ, ಧಾನ್ಯಗಳಲ್ಲಿ ಲಭ್ಯವಿದೆ.