ನಮ್ಮ ದೇಹದ ಯಾವುದೇ ಭಾಗದಲ್ಲಿ ಸುಟ್ಟಾಗ ಅದರಿಂದ ತುಂಬ ನೋವು ಮತ್ತು ಹಲವು ಬೇನೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನಿಮಗೆ ಸುಟ್ಟ ತಕ್ಶಣ ಈ ರೀತಿಯಾಗಿ ಮಾಡಿ ನೋಡಿ.
ಹರಿಯುವ ನೀರು: ಸುಟ್ಟುಕೊಂಡ ತಕ್ಷಣ ನಲ್ಲಿಯಲ್ಲಿ ನೀರನ್ನು ಹರೆಯ ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ಹಿಡಿಯಬೇಕು. ಈ ರೀತಿ 10 ನಿಮಿಷ ಹಿಡಿದು ನಂತರ ಐಸ್ ನಿಂದ ಮೆಲ್ಲನೆ ಉಜ್ಜಬೇಕು. ಗಾಯ ಒಣಗುವವರೆಗೆ 8-10 ಗ್ಲಾಸ್ ನೀರನ್ನು ಕಡ್ಡಾಯವಾಗಿ ಸೇವಿಸಬೇಕು.
ಜೇನು: ತಣ್ಣೀರಿನಲ್ಲಿ ಗಾಯವನ್ನು ಹಿಡಿದ ನಂತರ ಆ ಭಾಗಕ್ಕೆ ಸ್ವಲ್ಪ ಜೇನು ಹಾಕಿ. ಇದರಿಂದ ಗಾಯಕ್ಕೆ ಸೋಂಕು ಆಗುವುದಿಲ್ಲ.
ಹಣ್ಣುಗಳು: ಟೊಮೆಟೊ, ಚೆರ್ರಿ, ದ್ರಾಕ್ಷಿ ಹೀಗೆ antioxidants ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸಿದರೆ ಗಾಯ ಬೇಗನೆ ಗುಣಮುಖವಾಗುವುದು.
ಅರಿಶಿಣ: ರಾತ್ರಿ ಮಲಗುವಾಗ ಹಾಲನ್ನು ಬಿಸಿ ಮಡಿ ಅದರಲ್ಲಿ ಅರಿಶಿಣವನ್ನು ಕರಗಿಸಿ ಅದನ್ನು ಹಚ್ಚಿದರೆ ಗಾಯ ಗುಣವಾಗುತ್ತೆ. ಉಪ್ಪು: ಬಿಸಿಯಾದ ಆಹಾರವನ್ನು ಬಾಯಿಗೆ ಹಾಕಿದರೆ ಬಾಯಿ ನಾಲಗೆ ಸುಟ್ಟು ಹೋಗುತ್ತದೆ. ಆಗ ಉಪ್ಪನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು.
ಆಲೂಗೆಡ್ಡೆ: ಗಾಯವಾದ ತಕ್ಷಣ ಬೇಯಿಸಿದ ಆಲೂಗೆಡ್ಡೆಯನ್ನು ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚಿದರೆ ಸೋಂಕು ಆಗುವುದನ್ನು ತಡೆಯುತ್ತದೆ. ಲೋಳೆಸರ: ಸುಟ್ಟ ಜಾಗದಲ್ಲಿ ದಿನಕ್ಕೆ 2-3 ಬಾರಿ ಲೋಳೆಸರ ಹಚ್ಚಿಕೊಂಡರೆ ಗಾಯ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಕಲೆ ಕೂಡ ಕಡಿಮೆಯಾಗುವುದು.
ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಸುಟ್ಟ ಗಾಯ ಉಂಟಾದಾಗ ಬಾಳೆಹಣ್ಣಿನ ಲೇಪ ಹಚ್ಚಿದರೆ ಹಿತಕರ. ಅಂತೆಯೇ ಸುಟ್ಟ ಗಾಯಕ್ಕೆ ಶುದ್ಧ ಜೇನಿನ ಲೇಪ ಹಚ್ಚುವುದೂ ಹಿತಕರ.