ನೀರು ಆರೋಗ್ಯದ ಮೂಲ ಮಂತ್ರ ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರು ಆಗಿರುತ್ತೇವೆ. ಆರೋಗ್ಯಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತ ವೈದ್ಯರು ಕೂಡ ಹೇಳುತ್ತಾರೆ ಆದರೆ ಆಚಾರ್ಯ ಚಾಣಕ್ಯಷ್ಟು ನೀರು ಕುಡಿಯಬೇಕು ಯಾವಾಗ ಕುಡಿಯಬೇಕು ಎನ್ನುವ ಬಗ್ಗೆ ಏನು ಹೇಳಿದ್ದಾರೆ ಹೇಳುತ್ತೇವೆ ಕೇಳಿ. ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಲೋಟ ನೀರು ಕುಡಿಯುವುದು ನೀವು ದಿನ ಆರಂಭಿಸಲು ಉತ್ತಮವಾಗುವಂತೆ ಮಾಡುತ್ತದೆ. ಇದು ಕೂಡಲೇ ನಿಮ್ಮ ಶರೀರವನ್ನು ರೀಹೈಡ್ರೇಟ್ ಮಾಡಿ ನಿಮ್ಮ ಮೆದುಳನ್ನು ನಿದ್ರೆಯ ಭಾವನೆಯಿಂದ ಎಚ್ಚರಿಸುತ್ತದೆ. ಜೊತೆಗೆ, ಇದು ನಿಮ್ಮ ಜೀರ್ಣ ವ್ಯವಸ್ಥೆಯಲ್ಲಿ ರಾತ್ರಿಯಿಡೀ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ನೆರವಾಗುತ್ತದೆ, ಜೊತೆಗೆ ನಿಮ್ಮ ಶರೀರದ ಆಂತರಿಕ ಅಂಗಗಳನ್ನು ಸ್ವಚ್ಛಗೊಳಿಸುತ್ತದೆ.
ನೀರು ಕುಡಿದ ನಂತರ, ಏನನ್ನಾದರೂ ಸೇವಿಸುವ ಮೊದಲು ಉತ್ತಮ ಫಲಿತಾಂಶಕ್ಕಾಗಿ 30-40 ನಿಮಿಷಗಳ ಅಂತರ ನೀಡಿ.ಆಹಾರ ಸೇವಿಸುವಾಗ ಕೆಲವೇ ಕ್ಷಣದ ಮೊದಲು ನೀರು ಕುಡಿಯಬಾರದು ಎಂದು ಹೇಳುತ್ತಾರೆ ಚಾಣಕ್ಯ. ಆಹಾರ ಸೇವನೆಗಿಂತ ಮೊದಲು ತುಂಬಾ ನೀರು ಕುಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಇದರಿಂದ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ ಆಹಾರ ಸೇವಿಸಿದ ತಕ್ಷಣವೂ ಕೂಡ ನೀರನ್ನು ಕುಡಿಯಬಾರದು. ಇದು ವಿಷಯಕ್ಕೆ ಸಮಾನ ಇದು ಆರೋಗ್ಯಕ್ಕಿಂತ ವೃದ್ಧಿಯಾಗುವ ಬದಲು ಅನಾರೋಗ್ಯ ಕಾಡುತ್ತದೆ ಎನ್ನುತ್ತಾರೆ ಚಾಣಕ್ಯ. ಅವಶ್ಯಕತೆ ಇದ್ದಲ್ಲಿ ಆಹಾರದ ಜೊತೆ ಸ್ವಲ್ಪ ಸ್ವಲ್ಪ ನೀರು ಕುಡಿಯಿರಿ ಎನ್ನುತ್ತಾರೆ ಚಾಣಕ್ಯ ಅವರು.
ದೈಹಿಕ ಕೆಲಸ ಮಾಡಿದ್ದಣಿದು ಬಂದವರು ತಕ್ಷಣ ನೀರು ಕುಡಿಯಬಾರದು ಸುಮಾರು ಅರ್ಧ ಗಂಟೆಯವರೆಗೂ ನೀರು ಕುಡಿಯದೇ ಇರುವುದು ಒಳ್ಳೆಯದು ತಕ್ಷಣ ನೀರು ಕುಡಿಯುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳು ಇರುತ್ತವೆ ಇನ್ನು ಕೆಲವರಿಗೆ ಸ್ನಾನದ ನಂತರ ನೀರು ಕುಡಿಯಬೇಕು ಆದರೆ ಸ್ನಾನವಾದ ತಕ್ಷಣ ನೀರು ಕುಡಿಯುವುದು ಅಪಾಯ ಜೀರ್ಣಕ್ರಿಯೆಗೆ ಇದರಿಂದ ಹಾನಿಯಾಗುವ ಸಾಧ್ಯತೆಗಳು ಇರುತ್ತವೆ. ಜೊತೆಗೆ ಸ್ನಾನ ಮಾಡಿದಾಗ ದೇಹ ತಣ್ಣಗೆ ಆಗಿರುವುದರಿಂದ ನೀರು ಕುಡಿಯುವುದು ಹಾನಿಕಾರಕವಾಗಿರುತ್ತದೆ . ನೀರು ನಮ್ಮ ಶರೀರ ತೂಕದ ಹೆಚ್ಚಿನ ಭಾಗ ಆವರಿಸಿದೆ. ಇದು ಶರೀರದ ಅನೇಕ ಮುಖ್ಯ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಉದಾಹರಣೆಗೆ, ನೀರು ನಿಮ್ಮ ಶರೀರದಿಂದ ತ್ಯಾಜ್ಯವನ್ನು ಹೊರಹಾಕಲು, ನಿಮ್ಮ ಶರೀರದ ಉಷ್ಣಾಂಶವನ್ನು ನಿಯಂತ್ರಿಸಲು, ನಿಮ್ಮ ಕೀಲುಗಳನ್ನು ಲೂಬ್ರಿಕೇಟ್ ಮಾಡಿ, ಮೆತ್ತಗಾಗಿಡಲು, ಜೀರ್ಣಕ್ರಿಯೆಗೆ ಮತ್ತು ಪೋಷಕಾಂಶ ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ. ಹೆಚ್ಚಿನ ಆರೋಗ್ಯ ತಜ್ಞರು ದಿನಕ್ಕೆ 8 ಲೋಟಗಳಷ್ಟು ನೀರು ಕುಡಿಯಬೇಕೆಂದು ಸಲಹೆ ನೀಡುತ್ತಾರೆ.