ಎಲ್ಲರಿಗು ನಮಸ್ಕಾರ ಸ್ನೇಹಿತರೇ. ಮಕ್ಕಳಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಹಣ್ಣು ಗಳಲ್ಲಿ ಡ್ರ್ಯಾಗನ್ ಫ್ರೂಟ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ಅದರ ಆಕಾರವೇ ಎಲ್ಲರ ಗಮನ ಸೆಳೆಯುತ್ತದೆ. ರುಚಿಯಲ್ಲೂ ಡ್ರ್ಯಾಗನ್ ಹಣ್ಣು ಕಡಿಮೆಯೇನಿಲ್ಲ. ಬೇಸಿಗೆ ಯಲ್ಲಿ ದೇಹಕ್ಕೆ ತಂಪಿನ ಅನುಭವ ನೀಡುವ ಹಣ್ಣು ಡ್ರ್ಯಾಗನ್.90ನೇ ಶತಮಾನದಲ್ಲಿ ಮೊದಲ ಬಾರಿ ಭಾರತ ( ಕ್ಕೆ ಇದು ಎಂಟ್ರಿ ಕೊಟ್ಟಿದ್ದರೂ ಈಗಿನ ದಿನಗಳಲ್ಲಿ ಜನರು ಇದಕ್ಕೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ವರ್ಷ ವರ್ಷಕ್ಕೂ ಇದ್ರ ಬೇಡಿಕೆ ಹೆಚ್ಚಾಗ್ತಿದೆ. ಡ್ರಾಗನ್ ಹಣ್ಣನ್ನು ಸ್ಟ್ರಾಬೆರಿ ಪಿಯರ್ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಕಮಲಂ ಎಂದೂ ಕರೆಯುತ್ತಾರೆ. ಕೆಂಪು,ಬಿಳಿಯ ಹಣ್ಣಿನ ಮಧ್ಯದಲ್ಲಿ ಕಪ್ಪು ಬೀಜಗಳಿರುತ್ತವೆ. ಸಿಹಿಯಾದ ರಸಭರಿತವಾದ ಹಣ್ಣಿದು. ಅದ್ಭುತ ಪೋಷಕಾಂಶಗಳನ್ನು ಹೊಂದಿರುವ, ಕಡಿಮೆ ಕ್ಯಾಲೋರಿ ಹಣ್ಣು ಡ್ರ್ಯಾಗನ್.

ಡ್ರ್ಯಾಗನ್ ಹಣ್ಣಿನ ಗಿಡವು ಪಾಪಾಸುಕಳ್ಳಿಗೆ ಹೋಲುತ್ತದೆ. ಡ್ರ್ಯಾಗನ್ ಹಣ್ಣಿನ ಪರಿಮಳವನ್ನು ಕಿವಿ, ಪೇರಳೆ ಮತ್ತು ಕಲ್ಲಂಗಡಿಗಳಿಗೆ ಹೋಲಿಕೆ ಮಾಡ್ಬಹುದು. ಆದರೆ ಬೀಜಗಳು ಅಡಿಕೆ ಪರಿಮಳವನ್ನು ಹೊಂದಿರುತ್ತವೆ. ವಿಟಮಿನ್ ಎ ಮತ್ತು ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ. ಡ್ರ್ಯಾಗನ್ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಬೇಸಿಗೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಡ್ರ್ಯಾಗನ್ ಹಣ್ಣಿನ ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ಮಧುಮೇಹ ಇರುವವರು ಹಣ್ಣುಗಳನ್ನು ತಿನ್ನುವಾಗ ಜಾಗರೂಕರಾಗಿರಬೇಕು. ಆದ್ರೆ ಡ್ರ್ಯಾಗನ್ ಹಣ್ಣನ್ನು ಆರಾಮವಾಗಿ ತಿನ್ನಬಹುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸ್ವಾಭಾವಿಕವಾಗಿ ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.ಡ್ರ್ಯಾಗನ್ ಹಣ್ಣು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ, ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಮತ್ತು ಬಳಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *