ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿರುವುದು ಹೆಮ್ಮೆಯ ವಿಷಯ. ಭಾರತದ ಸೈನ್ಯದಲ್ಲಿರುವ ಮಹಿಳೆಯೊಬ್ಬರು ಮಿಗ್ 21 ಬಿಸನ್ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟಕ್ಕೂ ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಆದರೂ ಯಾರು ಗೊತ್ತೇ??

ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್ ಅವಾನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿಯಾಗಿದ್ದಾರೆ. ಗುಜರಾತ್‍ನ ಜಮ್ ನಗರ್‍ನಲ್ಲಿ ಸೋಮವಾರ ಅವನಿ ಚತುರ್ವೇದಿ ಒಬ್ಬರೇ ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಇದು ಭಾರತೀಯ ವಾಯುಪಡೆ ಹಾಗೂ ಭಾರತಕ್ಕೆ ಇದೊಂದು ಅನನ್ಯ ಸಾಧನೆಯಾಗಿದೆ.

ಮಹಿಳೆಯರು ಯಾವ ಸಾಧನೆಗೂ ಸೈ ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದರೆ ಕಲ್ಪನಾ ಚಾವ್ಲ, ಧೀರೆ ನೀರಜಾ ಹೀಗೆ ಅದೆಷ್ಟೋ ಮಹಿಳಾ ಮಣಿಯರಿದ್ದಾರೆ. ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಅವಾನಿ ಚತುರ್ವೇದಿ ಹೊಸ ಇತಿಹಾಸ ಬರೆದಿದ್ದಾರೆ. ಕಳೆದ ಸೋಮವಾರ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸುವ ಮೂಲಕ ಇತಿಹಾಸವನ್ನು ಬರೆಯುವ ಜೊತೆಗೆ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸುದೀರ್ಘ 30 ನಿಮಿಷಗಳ ಕಾಲ ಅವಾನಿ ಅವರು ರಷ್ಯಾ ಮೂಲದ ಜೆಟ್ ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯವರಾದ ಅವಾನಿ ಚತುರ್ವೇದಿ ಅವರ ಸಾಧನೆಯನ್ನು ಭಾರತೀಯ ವಾಯು ಪಡೆಯಲ್ಲಿ ನಾರಿ ಶಕ್ತಿಯ ಸೇರ್ಪಡೆ ಎಂದೇ ಬಣ್ಣಿಸಲಾಗುತ್ತಿದೆ. ಮಹಿಳಾ ಪೈಲೆಟ್ ಮೊದಲ ಬಾರಿಗೆ ಏಕಾಂಗಿಯಾಗಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ. ಇದರೊಂದಿಗೆ ವಾಯುಪಡೆಯಲ್ಲಿ ನಾರಿ ಶಕ್ತಿಯ ಕಾಲ ಆರಂಭವಾಗಿದೆ ಎಂದರೆ ತಪ್ಪಾಗಲಾರದು.

ಇನ್ನು 2016ರ ಜೂನ್ ತಿಂಗಳಲ್ಲಿ ಭಾರತದ ಮೊದಲ ಮೂವರು ಮಹಿಳಾ ಪೈಲೆಟ್ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗಿದ್ದು, ಅದರಲ್ಲಿ ಅವಾನಿ ಚತುರ್ವೇದಿಯೂ ಒಬ್ಬರು. ಕಳೆದ ವಾರದವರೆಗೂ ಇಬ್ಬರು ಪೈಲೆಟ್ ಗಳ ತರಬೇತಿ ಯುದ್ಧ ವಿಮಾನ ಹಾರಾಟ ನಡೆಸಿದ್ದು, ಈ ಯುದ್ಧ ವಿಮಾನದಲ್ಲಿ ನುರಿತ ಮಾರ್ಗದರ್ಶಕರ ಜತೆ ಅವಾನಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. 2016ರಲ್ಲಿ ವಾಯಪಡೆಗೆ ಸೇರಿದ ನಂತರ ಅವಾನಿ ಅವರು ಬೀದರ್ ನಲ್ಲಿರುವ ವಾಯು ನೆಲೆಯಲ್ಲಿ ಸುದೀರ್ಘ ಒಂದು ವರ್ಷ ತರಬೇತಿ ಪಡೆದಿದ್ದರು. ನಂತರ ಆರು ತಿಂಗಳ ಕಾಲ ಹಕಿಮ್ ಪೇಟ್ ನ ಕಿರಣ ತರಬೇತಿ ಜೆಟ್ ನಲ್ಲಿ ತರಬೇತಿ ಪಡೆದಿದ್ದರು. ಸಂಗ್ರಹ ಮಾಹಿತಿ.

Leave a Reply

Your email address will not be published. Required fields are marked *