ರಕ್ಷಾ ಬಂಧನ ಮತ್ತು ಓಣಂ ದಿನದಂದು ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಕೇಂದ್ರ ಸರ್ಕಾರ ದೊಡ್ಡ ಪರಿಹಾರವನ್ನು ಘೋಷಿಸಿದೆ. ಗೃಹಬಳಕೆಯ ಗ್ಯಾಸ್ ಎಲ್ ಪಿಜಿ ಬೆಲೆಯಲ್ಲಿ 200 ರೂ.ಗಳ ಸಬ್ಸಿಡಿಯನ್ನು ಸಂಪುಟ ಘೋಷಿಸಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂ.ಗಳ ಹೆಚ್ಚುವರಿ ಸಹಾಯಧನ ನೀಡಲಾಗುವುದು. ಅಂದರೆ, ಗ್ಯಾಸ್ ಸಿಲಿಂಡರ್ ಮೇಲೆ 400 ರೂಪಾಯಿ ರಿಯಾಯಿತಿ ಸಿಗಲಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ 200 ಕಡಿತ ಸಂಪುಟ ಸಭೆಯಲ್ಲಿ ನಿರ್ಣಯ ಹೌದು, ಹಣದುಬ್ಬರದಿಂದ ತೊಂದರೆ ಗೀಡಾಗಿರುವ ಜನರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ನೀಡಲಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ₹200 ವರೆಗೆ ಕಡಿತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ ಸರ್ಕಾರವು ₹200 ಸಬ್ಸಿಡಿಯನ್ನ ಘೋಷಿಸಬಹುದು.
ಆಗಸ್ಟ್ ಒಂದರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನ ₹100 ಕಡಿತಗೊಳಿಸಿದವು. ಆದರೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಪ್ರಸ್ತುತ ಎಲ್ಪಿಜಿ ಬೆಲೆ ಆಗಸ್ಟ್ ಮೊದಲ ದಿನಾಂಕದಂದು ರಾಜಧಾನಿ ದೆಹಲಿಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ₹1103.ದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಮುಂಬೈನಲ್ಲಿ 1000, ನೂರಾ 250, ಪೈಸಾ ಕೊಲ್ಕತ್ತದಲ್ಲಿ 1129 ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಉಜ್ವಲ ಯೋಜನೆಯಡಿ ಫಲಾನುಭವಿಗಳು 1 ವರ್ಷದಲ್ಲಿ ಒಟ್ಟು 12 ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯಬಹುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ 2016 ರಲ್ಲಿ ಪ್ರಾರಂಭವಾಯಿತು. ಇದರ ಅಡಿಯಲ್ಲಿ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕಗಳನ್ನು ನೀಡುತ್ತದೆ.
ಸಬ್ಸಿಡಿ ಪಡೆಯಲು ನೀವು ನಿಮ್ಮ ಆಧಾರ್ ಸಂಖ್ಯೆಯನ್ನ ಎಲ್‌ಪಿಜಿ ಸಂಪರ್ಕದೊಂದಿಗೆ ಲಿಂಕ್ ಮಾಡಬೇಕು. 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಮೇಲೆ 200 ಸಬ್ಸಿಡಿ ಲಭ್ಯವಿದೆ ಮಾರ್ಚ್ 2023 ರವರೆಗಿನ ಸರ್ಕಾರಿ ಅಂಕಿ ಅಂಶ ಪ್ರಕಾರ ಉಜ್ವಲ ಯೋಜನೆಯಡಿ ಸರ್ಕಾರ ವು 9,00,00,000 ಗೂ ಹೆಚ್ಚು ಉಚಿತ ಅಡುಗೆ ಅನಿಲ ಸಂಪರ್ಕಗಳನ್ನ ವಿತರಿಸಿದೆ. ಉಜ್ವಲ ಯೋಜನೆಯ ಫಲಾನುಭವಿಗಳು ಈಗಾಗಲೇ ಪಡೆಯುತ್ತಿರುವ 200 ರೂ.ಗಳ ಸಹಾಯಧನದ ಜೊತೆಗೆ 200 ರೂ.ಗಳ ಪ್ರತ್ಯೇಕ ಸಹಾಯಧನವನ್ನು ನೀಡಲಾಗುವುದು. ಅಂದರೆ, ಗ್ಯಾಸ್ ಸಿಲಿಂಡರ್ ಮೇಲೆ 400 ರೂಪಾಯಿ ರಿಯಾಯಿತಿ ಸಿಗಲಿದೆ. ರಕ್ಷಾ ಬಂಧನದ ಹಿಂದಿನ ಕ್ಯಾಬಿನೆಟ್ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಘೋಷಿಸಿದರು. ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವರು, 75 ಲಕ್ಷ ಮಹಿಳೆಯರಿಗೂ ಉಚಿತ ಗ್ಯಾಸ್ ಸಂಪರ್ಕ ನೀಡಲಾಗುವುದು ಎಂದರು. ಅವರಿಗೆ ಉಚಿತವಾಗಿ ಪೈಪ್ ಮತ್ತು ಸ್ಟೌವನ್ನೂ ನೀಡಲಾಗುವುದು.