ಈ ಕಲ್ಲಿನ ಬಣ್ಣದ ಬಗ್ಗೆ ನೀವು ತಿಳಿದರೆ ಒಳಿತು ಯಾಕೆ ಅಂದ್ರೆ ಈ ಕಲ್ಲಿನ ಬಣ್ಣಗಳು ಅಂದರೆ ಕೆಲವೊಂದು ಕಲ್ಲಿನಲ್ಲಿ ಹಸಿರು ಬಣ್ಣ ಇನ್ನೂ ಕೆಲವು ಕಲ್ಲಿನ ಮೇಲೆ ಹಳದಿ ಬಣ್ಣ ಮತ್ತು ಕಪ್ಪು ಬಣ್ಣ ಇರುವುದನ್ನು ನೀವು ನೋಡಿದ್ದೀರಾ ಆದ್ರೆ ಈ ಬಣ್ಣಗಳು ಏನನ್ನು ಸೂಚಿಸುತ್ತವೆ ಅನ್ನೋದು ಇಲ್ಲಿದೆ ನೋಡಿ.
ಬಿಳಿ ಹಾಗು ಹಳದಿ ಬಣ್ಣದ ಕಲ್ಲು ಏನು ಸೂಚಿಸುತ್ತೆ ಗೊತ್ತ: ನಾವು ರಸ್ತೆಯಲ್ಲಿನ ಮೈಲು ಕಲ್ಲುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವುದಿಲ್ಲ ಅದನ್ನು ಯಾಕೆ ಹಾಕಲಾಗಿರುತ್ತೆ ಅಂದ್ರೆ ಕೇವಲ ಕಿಲೋಮೀಟರ್ ತೋರಿಸಲು ಅನ್ನೋದು ಮಾತ್ರ ತಪ್ಪು ಆ ಕಲ್ಲಿನಲ್ಲಿ ಇರುವ ಬಣ್ಣದ ಆಧಾರದ ಮೇಲೆ ಅದು ಏನನ್ನು ಸೂಚಿಸುತ್ತದೆ ಅನ್ನೋದನ್ನ ಸರ್ಕಾರ ಅಧಿಕೃತವಾಗಿ ತಿಳಿಸಿರುತ್ತದೆ. ಬಿಳಿ ಬಣ್ಣವು ಕಿಲೋಮೀಟರ್ ಬಗ್ಗೆ ತಿಳಿಸುತ್ತದೆ ಮತ್ತು ಆ ಕಲ್ಲಿನಲ್ಲಿ ಹಳದಿ ಬಣ್ಣ ಸಹ ಇದ್ರೆ ಅದು ರಾಷ್ಟೀಯ ಹೆದ್ದಾರಿ ಎಂದು ಅರ್ಥ.
ಬಿಳಿ ಮತ್ತು ಹಸಿರು ಬಣ್ಣವನ್ನು ಹೊಂದಿರುವ ಕಲ್ಲುಗಳು: ನಾವು ಮೇಲೆ ಹೇಳಿದಂತೆ ಬಿಳಿಯ ಬಣ್ಣವು ಕಿಲೋಮೀಟರ್ ಸೂಚಿಸುವ ಬಣ್ಣವಾಗಿರುತ್ತೆ. ಇದರ ಜೊತೆ ಹಸಿರು ಬಣ್ಣ ಹೊಂದಿದ್ದಾರೆ ಅದು ರಾಜ್ಯ ಹೆದ್ದಾರಿ ಎಂದು ಅರ್ಥ. ಆಗ ನೀವು ತಿಳಿದುಕೊಳ್ಳಬೇಕು ನಾವು ರಾಜ್ಯ ಹೆದ್ದಾರಿಯಲ್ಲಿವೆ ಅಂತ.
ಬಿಳಿ ಬಣ್ಣ ಮತ್ತು ನೀಲಿ ಹಾಗು ಇದರ ಜೊತೆ ಕಪ್ಪು ಬಣ್ಣದ ಕಲ್ಲು ಇದ್ರೆ: ಬಿಳಿ ಬಣ್ಣ ಮತ್ತು ನೀಲಿ ಹಾಗು ಇದರ ಜೊತೆ ಕಪ್ಪು ಬಣ್ಣದ ಕಲ್ಲು ಇದ್ರೆ ನೀವು ಯಾವುದೊ ಒಂದು ನಗರದ ಅಥವಾ ಸಿಟಿಯ ಹತ್ತಿರದಲ್ಲಿ ಅಂದ್ರೆ ಸಮೀಪದಲ್ಲಿ ಹೋಗುತ್ತಿದ್ದೀರಾ ಎಂದು ನಿಮಗೆ ಸೂಚಿಸುತ್ತದೆ.
ಆರೆಂಜ್ ಮತ್ತು ಬಿಳಿ ಬಣ್ಣದ ಕಲ್ಲು ಕಂಡ್ರೆ: ಆರೆಂಜ್ ಮತ್ತು ಬಿಳಿ ಬಣ್ಣದ ಕಲ್ಲು ಕಂಡ್ರೆ ಈ ರಸ್ತೆಯ ಮಾರ್ಗವು ಯಾವುದೊ ಒಂದು ಗ್ರಾಮಕ್ಕೆ ಹೋಗುವ ರಸ್ತೆ ಎಂದು ನಿಮಗೆ ಸೂಚಿಸುತ್ತದೆ. ಇದರಿಂದ ನಿಮಗೆ ತುಂಬ ಸಹಾಯವಾಗುತ್ತೆ.
ನೋಡಿ ನಾವು ರಸ್ತೆಯಲ್ಲಿ ಹೋಗುವ ಈ ಕಲ್ಲುಗಳ ಬಗ್ಗೆ ಇರುವ ಅಭಿಪ್ರಾಯವೇ ಬೇರೆ ಈ ಲೇಖನವನ್ನು ಓದಿದ ಮೇಲೆ ನಿಮ್ಮಲ್ಲಿ ಇರುವ ಅಭಿಪ್ರಾಯವೇ ಬೇರೆಯಾಗಿರುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.