ರಾಜ್ಯದ ನಿರೋದ್ಯೋಗ ಯುವಕ ಯುವತಿಯರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯಡಿಯಲ್ಲಿ 10 ಲಕ್ಷ ರೂ.ಗಳನ್ನು ಸಾಲವಾಗಿ ಕಡಿಮೆ ಬಡ್ಡಿದರದಲ್ಲಿ ಪಡೆಯಬಹುದು.
ಈ ಯೋಜನೆಯನ್ನು ಯಾರೆಲ್ಲ ಪಡೆಯಬಹುದು ಇದಕ್ಕೆ ಬೇಕಾಗುವ ದಾಖಲಾತಿಗಳು ಏನು ಅನ್ನೋದು ಇಲ್ಲಿದೆ ನೋಡಿ.
ಈ ಯೋಜನೆ ಕರ್ನಾಟಕ ಮುಖ್ಯಮಂತ್ರಿ ಸ್ವಯಂ ಸುಜನ್ ಯೋಜನೆ ನಿರುದ್ಯೋಗ ಯವಕ ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಲು 10 ಲಕ್ಷದ ವರೆಗೆ ಉಚಿತವಾಗಿ ಸಬ್ಸಿಡಿ ಸಹಿತ ಸಾಲ ಸೌಲಾಭ್ಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಯಾವುದೇ ಜಾತಿ ಧರ್ಮವಿಲ್ಲದೆ ಎಲ್ಲರು ಕೂಡ ಪಡೆಯಬಹುದಾಗಿದೆ, ಜನರಲ್ ಕೇಟಗಿರಿಗೆ 10 ಲಕ್ಷ ಸಾಲಕ್ಕೆ 2.50 ರೂ ಲಕ್ಷ ಉಚಿತ ಸಬ್ಸಿಡಿ ನೀಡಲಾಗುತ್ತದೆ, ಹಾಗೂ ಉಳಿದ ಎಸ್.ಸಿ.,ಎಸ್.ಟಿ.,ಕೆಟಗಿರಿ -01, 2 ಎ ,ಎಲ್ಲ ವರ್ಗದ ಜಾತಿಯವರಿಗೆ 3.50 ಲಕ್ಷ ಉಚಿತ ಸಬ್ಸಿಡಿ ಈ ಯೋಜನೆಯಡಿ ಸೀಗುತ್ತದೆ.
ಈ ಸಲ ಸೌಲಭ್ಯವನ್ನು ಯಾವುದಕ್ಕಾಗಿ ಬಳಸಿ ಕೊಳ್ಳಬಹುದು: ಈ ಯೋಜನೆಯಡಿಯಲ್ಲಿ ತಮ್ಮ ಸ್ವಂತ ವ್ಯವಹಾರಕ್ಕಾಗಿ ಅಂದರೆ ನಿರುದ್ಯೋಗ ಯುವಕ,ಯುವತಿಯರು ಸ್ವಯಂ ಆಗಿ ಟೈಲರಿಂಗ್,ಸೈಬರ್ ಕೆಫೆ,ಆಟೋಮೊಬೈಲ್ಸ್,ಹಳ್ಳಿಗಳಲ್ಲಿ ಹೈನುಗಾರಿಕೆ,ಈ ತರಹ ಸ್ವಯಂ ಉದ್ಯೋಗ ರೂಡಿಸಿಕೂಳ್ಳಲು ಈ ಯೋಜನೆ ಸಾಲ ಸಬ್ಸಿಡಿ ನೀಡುತ್ತದೆ.
ಅರ್ಜಿಯನ್ನು ಸಲ್ಲಿಸಲು ವಯಸ್ಸು: 18 ರಿಂದ 45 ವರ್ಷ ವಯಸ್ಸಿನೂಳಗೆ ಇರಬೇಕು. ಬೇಕಾಗುವ ದಾಖಲಾತಿಗಳು: ಶಾಲೆಯ ಮಾರ್ಕ್ಸ್ ಕಾರ್ಡ್, ಯೋಜನ ವರದಿ (ಕೋಟೇಷನ್) ಆಧಾರ ಕಾರ್ಡ್, ರೇಷನ್ ಕಾರ್ಡ, ಒಟರ್ ಐಡಿ, ಸ್ಥಳದ ಪಹಣಿ(ದೃಡಿಕೃತ) ಪತ್ರ, ಪಾನ್ ಕಾರ್ಡ್, ಪಾಸ್ ಪೂರ್ಟ್ ಹೂಂದಿರಬೇಕಾಗುತ್ತದೆ.
ಅರ್ಜಿಯನ್ನು ಆಯಾ ತಾಲ್ಲೂಕಿನ ಕೈಗಾರಿಕಾ ಕೇಂದ್ರಗಳಲ್ಲಿ ಆಫ್ ಲೈನ್ ಮೂಲಕ ಅರ್ಜಿ ಪಡೆದು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಕೈಗಾರಿಕಾ ಕೇಂದ್ರಗಳಲ್ಲಿ ಸಂಪರ್ಕಿಸಬಹುದು. ಕೃಪೆ: ನ್ಯೂಸ್ ಡೆಸ್ಕ ಕನ್ನಡ