ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಷನ್ ಕಮಲ ಭಾರೀ ಸದ್ದು ಮಾಡ್ತಾ ಇದೆ. ಎಲ್ಲ ಶಾಸಕರು ಬಿಜೆಪಿಗೆ ಬರ್ತಾರೆ ಅನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಬಾಂಬ್ ಸಿಡಿಸಿದ್ದಾರೆ. ಕೆ ಎಸ್ ಈಶ್ವರ ಪ್ಪ ಅವರು ಕಳೆದೊಂದು ವಾರ ದಿಂದ ಈ ಒಂದು ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೀತಾ ಇದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಜಟಾಪಟಿಯಿಂದ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಅಥವಾ ನಂತರ ದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರೋದಿಲ್ಲ ಅಂತ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನ ವರು ಭವಿಷ್ಯ ನುಡಿದಿದ್ದಾರೆ.ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಭಾರೀ ಸದ್ದು ಮಾಡ್ತಾ ಇದೆ. ಬಿಎಲ್ ಸಂತೋಷ್ ಅವರ ಸಂಪರ್ಕದಲ್ಲಿ 40 ಕಾಂಗ್ರೆಸ್ ಶಾಸಕರು ಇದ್ದಾರೆ ಅನ್ನುವ ಮಾಹಿತಿ ಕೂಡ ಸಾಕಷ್ಟು ಚರ್ಚೆಗೀಡಾಗಿತ್ತು. ಶ್ರೀರಾಮುಲು ಇದು ಶುದ್ಧ ಸುಳ್ಳು ಅಂತ ಹೇಳಿಕೊಂಡಿದ್ದರು.
ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ದೇವರಲ್ಲಿ ಪ್ರಾರ್ಥಿಸುತ್ತೇನೆ. 5 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಪೂರೈಸಿ ಅನ್ನುವಂತಹ ಅಚ್ಚರಿಯ ಹೇಳಿಕೆಯನ್ನು ನೀಡಿದ್ರು, ಶ್ರೀರಾಮುಲು ಇನ್ನು ಮತ್ತೊಂದು ಕಡೆ ಜಗದೀಶ್ ಶೆಟ್ಟರ್ ಅವರು ಬಿ ಎಲ್ ಸಂತೋಷ್ ಅವರು ಬೇಕಾದ್ರೆ ನಾಳೆನೇ ಆಪರೇಷನ್ ಕಮಲ ನಡೆಸಿ ಅಂತ ಹೇಳಿ ಚಾಲೆಂಜ್‌ನ್ನು ಹಾಕಿದ್ರು.ಎಷ್ಟು ಶಾಸಕರನ್ನು ಕೇಳಿದಾರೆ ಸರಿ ಅಂತ ಹೇಳಿ ನೋಡೇ ಬಿಡೋಣ ಅಂತ ಜಗದೀಶ್ ಶೆಟ್ಟರ್ ಅವರು ಒಂದು ಚಾಲೆಂಜ್ ಅನ್ನು ಕೂಡ ಹಾಕಿದ್ದಾರೆ. ಕಾಂಗ್ರೆಸ್ ನೂರಾ ಮೂವತೈದು ಶಾಸಕರನ್ನ ಒಳಗೊಂಡಿದೆ. ಗಟ್ಟಿ ಮುಟ್ಟಾದ ಸರ್ಕಾರ ಇಂತಹ ಸರ್ಕಾರವನ್ನು ಯಾರು ತಾನೆ ಬಿಟ್ಟು ಹೋಗೋಕೆ ಸಾಧ್ಯ ಅನ್ನೋದು ಶೆಟ್ಟರ್ ಅವರ ವಾದ. ಈ ರೀತಿಯಾಗಿ ಸಾಕಷ್ಟು ದಿನಗಳಿಂದ ಈ ರೀತಿಯ ಟಾಕ್ ವಾರ್ ಗಳು ಜೋರಾಗಿ ನಡೀತಾ ಇದೆ. ಹೀಗಿರುವಾಗ ಕೇವಲ ಈಶ್ವರಪ್ಪನ ವರು ಕೂಡ ಮಾತನಾಡಿ 100 ಕ್ಕೆ 100 ಆಪರೇಷನ್ ಕಮಲ ಆಗುತ್ತೆ. ಈ ದೇಶದಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ ಇಲ್ಲ. ಎಲ್ಲ ನಾಯಕರು ಬಿಜೆಪಿಗೆ ಬರ್ತಾರೆ ಅಂತ.ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಯೋಗ್ಯತೆಗೆ ಇಲ್ಲಿಯ ವರೆಗೂ ಬಿಜೆಪಿಯ ಒಬ್ಬ ಶಾಸಕರ ನ್ನು ಕರೆದೊಯ್ಯಲು ಆಗಿಲ್ಲ. ಕಾಂಗ್ರೆಸ್ ಬಿಜೆಪಿಯಿಂದ ಷ್ಟು ಜನ ಬರ್ತಾರೆ. ಇಷ್ಟು ಜನ ಬರ್ತಾರೆ ಅಂತ ಅಪಪ್ರಚಾರ ವನ್ನು ಮಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಕಾಂಗ್ರೆಸ್ ಗೆ ಒಂದು ತಿಂಗಳು ಸಮಯ ಕೊಡುತ್ತೇವೆ. ಬಿಜೆಪಿಯಿಂದ ಒಬ್ಬ ಶಾಸಕರ ನ್ನ ಕರೆದು ಇರಿ ನೋಡೋಣ ಅಂತ ಸವಾಲು ಹಾಕಿದಂತಹ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರ ಬೀಳಿಸುವ ವಿಚಾರದಲ್ಲಿ ಮತ್ತೆ ಆಪರೇಷನ್ ಕಮಲ ಆರಂಭವಾಗುತ್ತೆ. ಬೇಕಿದ್ರೆ ಸಚಿವ ಪ್ರಿಯಾಂಕ್ ಖರ್ಗೆ ಕಾದು ನೋಡಲಿ ಅಂತ ಟಾಂಗ್ ನೀಡಿದ್ರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ವಾಗಿ ಕೂಡ ವಾಗ್ದಾಳಿ ನಡೆಸಿದ್ರು. ಸೂರ್ಯ ಚಂದ್ರ ಇರೋ ವರೆಗೂ ಕಾಂಗ್ರೆಸ್ ಬಿಟ್ಟು ಹೋಗುವಂತಹ 17 ಜನರಲ್ಲಿ ಒಬ್ಬರನ್ನು ಕೂಡ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವುದಿಲ್ಲ ಅಂತ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ರು. ಈಗ ಯಾಕೆ ಬಿಜೆಪಿ ಶಾಸಕರ ಮನೆಯನ್ನು ಕಾಯುತ್ತಿದ್ದಾರೆ ಅಂತ ಈಶ್ವರಪ್ಪ ಅವರು ಪ್ರಶ್ನೆ ಮಾಡಿದರು. ಇನ್ನು ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರುವ ಗದ್ದಲದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಎಂದು ಆರೋಪ ಮಾಡಿದರು.