ನಮಸ್ತೆ ಪ್ರಿಯ ಓದುಗರೇ, ಸಬ್ಬಸಿಗೆ ಸೊಪ್ಪು, ನಾವಿಂದು ಮಾಡುತ್ತಿರುವುದು ಸಾಧಾರಣ ಉಪ್ಪಿಟ್ಟು ಆದರೂ ಕೂಡ ಅದಕ್ಕೆ ನಾವು ಬಳಕೆ ಮಾಡುತ್ತಿರುವಂತ ಪದಾರ್ಥಗಳು ತುಂಬಾ ಮುಖ್ಯ ಆಗುತ್ತೆ. ಹಾಗಾಗಿ ಸಬ್ಬಸಿಗೆ ಸೊಪ್ಪನ್ನು ಹಾಕಿ ಉಪ್ಪಿಟ್ಟು ಮಾಡ್ತಾ ಇದೀವಿ. ಉಪ್ಪಿಟ್ಟನ್ನೇನೋ ಮಾಡ್ತಾ ಇದೀವಿ ಆದರೆ ಈ ಸೊಪ್ಪಿನಲ್ಲಿ ಏನು ಮಹತ್ವ ಇದೆ ಎಂದು ತಿಳಿದುಕೊಂಡಾಗ ಈ ಉಪ್ಪಿಟ್ಟಿಗೆ ಮಹತ್ವ ಬರುತ್ತದೆ. ಅಂದರೆ ನಾವು ಇಂದು ತಿಳಿಸುತ್ತಿರುವ ಈ ಸೊಪ್ಪು ರುಚಿಯನ್ನೂ ಕೊಡುತ್ತೆ, ಒಳ್ಳೆಯ ಪರಿಮಳವನ್ನು ಕೊಡುತ್ತೆ ಜೊತೆಗೆ ಒಳ್ಳೆಯ ಆರೋಗ್ಯವನ್ನೂ ಕೊಡುತ್ತೆ. ನಿದ್ರಾಹೀನತೆ – ತುಂಬಾ ಜನ ನಿದ್ದೇನೇ ಬರಲ್ಲ ರಾತ್ರಿ ಆದ ತಕ್ಷಣ ತುಂಬಾ ಒದ್ದಾಟ ಆಗತ್ತೆ, ಬೆಳಕು ಯಾವಾಗ ಹರಿಯುತ್ತೂ ಅಂತ ಕಾಯುವ ಕೆಲಸ ಆಗ್ತಾ ಇರುತ್ತೆ, ಇಂತಹ ಸಮಸ್ಯೆ ಇರುವವರೂ ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಹಾಗಾಗಿ ಈ ಸೊಪ್ಪಿನ ಪರಿಮಳಕ್ಕೆ ತುಂಬಾನೇ ಶಕ್ತಿ ಇದೆ. ಅದರ ವಾಸನೆಯನ್ನು ತೆಗೆದುಕೊಳ್ಳುತ್ತಾ ಇದ್ದರೆ ತನ್ನಷ್ಟಕ್ಕೆ ತಾನೇ ನಿದ್ರಾ ಲೋಕಕ್ಕೆ ಕರೆದುಕೊಂಡು ಹೋಗುತ್ತೆ. ಅಂದ್ರೆ ನೀವು ಈ ಸೊಪ್ಪನ್ನು ನೀವು ಮಲಗುವ ಜಾಗದಲ್ಲಿ ಸ್ವಲ್ಪ ದೂರದಲ್ಲಿ ಇಟ್ಟು ಮಲಗಿದರೆ ಇದು ಒಳ್ಳೆಯ ನಿದ್ದೆ ಕೊಡುತ್ತೆ. ಅಥವಾ ಆಹಾರದಲ್ಲಿ ನಾವು ಈ ಸೊಪ್ಪನ್ನು ಬಳಕೆ ಮಾಡುವುದರಿಂದ ಕೂಡ ಒಳ್ಳೆಯ ನಿದ್ದೆ ಬರಲು ಸಹಾಯ ಆಗುತ್ತೆ.
ಇನ್ನೂ ಈ ಅಸ್ತಮಾ ಸಮಸ್ಯೆ ಇರುವಂತವರು, ಉಸಿರಾಟದ ಸಮಸ್ಯೆ ಇರುವಂಥವರು, ಮೇಲಿಂದ ಮೇಲೆ ನೆಗಡಿ, ಕೆಮ್ಮು ಬರುತಕ್ಕಂತವರು, ಸೀತದ ಬಾಧೆಯಿಂದ ನರಳುವಂತವರು, ಇಂತವರಿಗೆಲ್ಲ ಸಬ್ಬಸಿಗೆ ಸೊಪ್ಪು ಒಂದು ವರ. ಅವರು ಈ ಥಂಡಿ ಕಾಲದಲ್ಲಿ ಹೆಚ್ಚು ಹೆಚ್ಚು ಸಬ್ಬಸಿಗೆ ಸೊಪ್ಪನ್ನು ಬಳಕೆ ಮಾಡುವುದು ಒಳ್ಳೆಯದು. ಇನ್ನೂ ಹೆಣ್ಣುಮಕ್ಕಳಿಗೆ ಇದೊಂದು ಅದ್ಭುತವಾದ ಶಕ್ತಿ ಕೊಡುವ ದಿವ್ಯೌಷಧ ಹಾಗೂ ವರ ಇದ್ದಂತೆ. ಈ ಮಾಸಿಕ ಧರ್ಮದ ಸಮಸ್ಯೆ ಇರಥಕ್ಕಂತವರು ತಿಂಗಳು ತಿಂಗಳು ಸರಿಯಾಗಿ ಮುಟ್ಟು ಬರುತ್ತಾ ಇಲ್ಲ ಅನ್ನುವವರು, ಹಾಗೆ ಕೆಲವರಿಗೆ ಎರೆಡು ಮೂರು ತಿಂಗಳಾದರೂ ಮುಟ್ಟು ಬರುತ್ತಿಲ್ಲ ಎನ್ನುವವರು, ಹಾರ್ಮೋನುಗಳ ಅನೇಕ ರೀತಿಯ ವ್ಯತ್ಯಯ ಇರತಕ್ಕಂತವರು ಈ ಎಲ್ಲಾ ಸಮಸ್ಯೆಗಳಿಗೆ ಕೂಡ ಕೇವಲ ಈ ನಮ್ಮ ಸಬ್ಬಸಿಗೆ ಸೊಪ್ಪಿನಲ್ಲಿ ಒಳ್ಳೆಯ ಪರಿಹಾರ ಇದೆ. ಇದನ್ನು ಹೇಗೆ ಬಳಕೆ ಮಾಡಬೇಕು? – ಕೇವಲ ಒಂದು ಹಿಡಿ ಸೊಪ್ಪನ್ನು ತೊಳೆದು ಒಂದು ಲೋಟ ನೀರಿಗೆ ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ, ಶೋಧಿಸಿ ಆ ನೀರನ್ನ ಕುಡಿಯಿರಿ. ಹೀಗೆ ಸಮಸ್ಯೆ ಇರುವವರೂ ಸತತವಾಗಿ 21 ದಿನಗಳ ಕಾಲ ಪ್ರತಿನಿತ್ಯ ಕುಡಿಯುತ್ತಾ ಬಂದರೆ ಯಾರಿಗೆ ಸರಿಯಾಗಿ ಕಾಲ ಕಾಲಕ್ಕೆ ಈ ಋತುಚಕ್ರ ಬರುವುದಿಲ್ಲವೋ ಅಂಥವರಿಗೆ ಅದ ಸಮಸ್ಯೆ ಪರಿಹಾರ ಆಗುತ್ತೆ.
ಮತ್ತೊಂದು ವಿಶೇಷ ವಿಷ್ಯ ಏನಪ್ಪಾ ಅಂದ್ರೆ ಬಾಣಂತಿಯರಿಗೆ ಇದು ಬಲು ಮುಖ್ಯವಾದ ಪರಮೌಷಧ. ಬಾಣಂತಿಯರು ಈ ಸೊಪ್ಪನ್ನು ಯಾವುದೇ ರೀತಿಯಲ್ಲಿ ಅಡುಗೆಯಲ್ಲಿ ಬಳಸಿದರೆ ತುಂಬಾನೇ ಒಳ್ಳೆಯದು. ಇನ್ನೂ ಇದು ಉಷ್ಣ ಪ್ರವೃತ್ತಿ ಇರುವಂಥದ್ದು. ಇದು ದೇಹದ ಉಷ್ಣಾಂಶ ಹೆಚ್ಚಿಸುತ್ತದೆ. ಯಾರಿಗೆ ಬೇಗ ಶೀತ, ನೆಗಡಿ ಆಗುತ್ತೆ ಅಂಥವರು ಇದನ್ನು ನಿಯಮಿತವಾಗಿ ಬಳಸುವುದರಿಂದ ತಕ್ಷಣ ದೇಹದ ಉಷ್ಣಾಂಶ ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಡಿ ಇದ್ದು ಇದರಿಂದಾಗಿ ಮೂಳೆಗಳು ಗಟ್ಟಿಯಾಗಿರಲೂ ಸಹಕಾರಿ. ಈ ಸೊಪ್ಪನ್ನು ಬೆಳೆಯುವ ಮಕ್ಕಳಿಗೆ ಆಹಾರದ ರೂಪದಲ್ಲಿ ಕೊಡುತ್ತಾ ಬಂದ್ರೆ ಅವರ ಮೂಳೆಗಳ ಬೆಳವಣಿಗೆ ಚೆನ್ನಾಗಿ ಇರುತ್ತೆ. ಹಾಗಾಗಿ ಈ ಸೊಪ್ಪು ತುಂಬಾ ಬೇಡಿಕೆಯಲ್ಲಿರುವ ಅಗ್ಗದ ಸೊಪ್ಪು. ಇದನ್ನು ಬಳಸಿ ನಿಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗಾದರೆ ಸಬ್ಬಸಿಗೆ ಸೊಪ್ಪಿನ ಉಪ್ಪಿಟ್ಟು ಮಾಡುವ ವಿಧಾನ ನೋಡೋಣ – ಮೊದಲು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಸೊಪ್ಪು, ಕಡ್ಲೆ ಬೇಳೆ, ಉದ್ದಿನ ಬೇಳೆ, ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ ನಂತರ ಸಬ್ಬಸಿಗೆ ಸೊಪ್ಪು ಹಾಕಿ ಫ್ರೈ ಮಾಡಿ ಆಮೇಲೆ ಕ್ಯಾರೆಟ್ ತುರಿ,ಟೊಮೆಟೊ ಹಾಕಿ ಬೇಯಿಸಿ ನೀರು ಹಾಕಿ ಕುದಿಯಲು ಬಿಡಿ. ಈಗ ಉಪ್ಪು ಹಾಕಿ ರವೆ ಹಾಕಿ ಕಾಯಿತುರಿ, ಕೊತ್ತಂಬರಿ ಸೊಪ್ಪು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಕೊಟ್ಟರೆ. ಘಮ ಘಮಿಸುವ ಆರೋಗ್ಯಕರ ಸಬ್ಬಸಿಗೆ ಸೊಪ್ಪಿನ ಉಪ್ಪಿಟ್ಟು ಸವಿಯಲು ಸಿದ್ಧ. ಶುಭದಿನ.