ನಮಸ್ತೆ ಪ್ರಿಯ ಓದುಗರೇ, ಯಾವುದೇ ವ್ಯಕ್ತಿ ತಮ್ಮ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಅಥವಾ ದೇಹ ದಂಡನೆ ಮಾಡುವಾಗ ಆ ವ್ಯಾಯಾಮದ ಭಂಗಿಯನ್ನು ಸರಿಯಾಗಿ ತಿಳಿದು ಮಾಡಬೇಕಾಗುತ್ತದೆ. ಸರಿಯಾದ ಪದ್ಧತಿಯಲ್ಲಿ ವ್ಯಾಯಾಮ ಮಾಡಿಲ್ಲ ಎಂದರೆ ಆ ವ್ಯಕ್ತಿಯ ದೇಹಕ್ಕೆ ಹಾನಿ ಅಥವಾ ಮೈ ಕೈ ನೋವು ಬರಬಹುದು. ಇದೇ ರೀತಿ ನಾವು ಮಲಗುವ ಭಂಗಿಯ ಪ್ರಭಾವ ನಮ್ಮ ಶರೀರದಲ್ಲಿ ಸಾಕಷ್ಟು ಒಳ್ಳೆಯದು ಕೆಟ್ಟದ್ದೋ ಆಗುತ್ತಾ ಇರುತ್ತದೆ. ಎರೆಡು ರೀತಿಯ ಪ್ರಭಾವಗಳನ್ನು ನೋಡಬಹುದು. ಒಂದು ಜೀರ್ಣಾಂಗ ವ್ಯವಸ್ಥೆ ಹಾಗೂ ಮೆದುಳಿನ ಮೇಲೆ ಇದು ಹೆಚ್ಚಾಗಿ ಪ್ರಭಾವ ಉಂಟಾಗುತ್ತದೆ. ಒಂದು ಒಳ್ಳೆಯ ನಿದ್ದೆ ಆದರೆ ನಮ್ಮ ಶರೀರಕ್ಕೆ ಒಂದು ಶಕ್ತಿ ಸಿಕ್ಕ ಹಾಗೆ ಆಗುತ್ತದೆ. ಹಾಗೆ ಒಂದು ಗಾಢವಾದ ನಿದ್ದೆಯಿಂದ ನಾವು ಇಡೀ ದಿನ ಆಸಕ್ತಿಯಿಂದ ಇರಬಹುದು. ನಮ್ಮ ದೇಹಕ್ಕೆ ನಿದ್ದೆ ಎಷ್ಟು ಮುಖ್ಯವೋ ಅದರ ಜೊತೆಗೆ ನಾವು ಯಾವ ಬಂಗಿಯಲ್ಲಿ ಮಲಗುತ್ತೇನೆ ಅನ್ನುವುದು ಮುಖ್ಯ ಆಗುತ್ತದೆ. ಈಗಿನ ದಿನಗಳಲ್ಲಿ ಸುಮಾರು 70 ಪ್ರತಿಶತ ವ್ಯಕ್ತಿಗಳಿಗೆ ನಿದ್ದೆ ಯಾವ ಭಂಗಿಯಲ್ಲಿ ಮಾಡಬೇಕು ಎನ್ನುವುದು ಗೊತ್ತಿಲ್ಲ. ತಪ್ಪಾದ ರೀತಿಯಲ್ಲಿ ಮಲಗುವುದರಿಂದ ಸಾಕಷ್ಟು ಜನರಿಗೆ ನಿದ್ದೆ ಸಹ ಸರಿಯಾಗಿ ಆಗುವುದಿಲ್ಲ ಅಂಥವರು ನಿದ್ದೆಯಲ್ಲಿ ಮಧ್ಯ ಮಧ್ಯ ಏಚ್ಚರ ಆಗ್ತಾ ಇರ್ತಾರೆ. ಇಂಥವರಿಗೆ ತಕ್ಷಣವೇ ಬೆನ್ನು ನೀವು, ಸೊಂಟ ನೋವು, ಕತ್ತು ನೋವು ಕಾಣಿಸಿಕೊಳ್ಳುತ್ತದೆ. ಈ ವಿಷ್ಯ ಹೇಳಿದ್ರೆ ನೀವು ಅಚ್ಚರಿ ಪಡ್ತೀರ ಅದೇನು ಅಂದ್ರೆ ನಮ್ಮ ಕೂದಲಿನಿಂದ ಹಿಡಿದು ಪಾದದ ವರೆಗೆ ನಾವು ಮಲಗುವ ಭಂಗಿಯ ಮೇಲೆ ಪ್ರಭಾವ ಬೀರುತ್ತದೆ. ನಾವು ಯಾವ ಭಂಗಿಯಲ್ಲಿ ಮಲಗಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಇವತ್ತಿನ ಲೇಖನದಲ್ಲಿ ನೋಡೋಣ ಸ್ನೇಹಿತರೆ. ಮೆಲಟೋನಿನ್ ಎಂಬುದು ನಾವು ಮಲಗಿದಾಗ ನಮ್ಮ ದೇಹದಲ್ಲಿ ಆಗುವ ಕಾರ್ಯಗಳನ್ನ ಸಮತೋಲನದಲ್ಲಿ ಇಡುತ್ತದೆ. ಇದರಿಂದ ನಮಗೆ ನಿದ್ದೆಯಲ್ಲಿ ಯಾವುದೇ ತೊಂದರೆ ಉಂಟಾಗದೆ ಒಳ್ಳೆಯ ಸುಖ ನಿದ್ರೆ ಬರುತ್ತದೆ.

ಸಾಧಾರಣವಾಗಿ ಈ ಮೆಲಟೋನಿನ್ ಅನ್ನುವುದು ನಮ್ಮ ದೇಹದಲ್ಲಿ ನೇ ತಯಾರಾಗುತ್ತದೆ. ಆದರೆ ಈಗಿನ ಆಹಾರ ಪದ್ಧತಿ, ಚಹಾ, ಕಾಫಿ ಸೇವನೆ ಮೆಲಟೋನಿನ್ ತಯಾರಾಗಲು ಹೊಡೆತವನ್ನು ನೀಡುತ್ತದೆ. ರಾತ್ರಿ ಕೆಲಸ ಮಾಡುವವರಿಗೆ ಈ ಸಮಸ್ಯೆ ತುಂಬಾ ಆಗುತ್ತದೆ ಹಾಗಾಗಿ ಇಂಥವರಿಗೆ ನಿದ್ದೆ ಬೇಗ ಬರುವುದಿಲ್ಲ. ನಿದ್ದೆ ಮಾಡುವಾಗ ಕೆಲವರು ಬಲಗಡೆ ಹಾಗೂ ಮತ್ತೆ ಕೆಲವರು ಎಡಗಡೆ ಮಲ್ಕೊತಾರೆ. ಇನ್ನು ಕೆಲವರು ನೇರವಾಗಿ ಅಂಗಾತ ಮಲಗುತ್ತಾರೆ. ಇನ್ನೂ ಕೆಲವರು ಬಾರಲಾಗಿ ಮಲಗುತ್ತಾರೆ. ಹೀಗೆಲ್ಲಾ ಮಲಗುವುದರಿಂದ ಏನೆಲ್ಲಾ ಬದಲಾವಣೆ ಪ್ರಭಾವ ಆಗುತ್ತದೆ ಎಂದು ನೋಡೋಣ. ಮೊದಲು ಬಾರಲಾಗಿ ಮಲಗುವುದು ತುಂಬಾ ಹಾನಿಕಾರಕ ಭಂಗಿ. ಅಸ್ತಮಾ ಇರುವವರಿಗೆ ಇದು ಅಪಾಯಕಾರಿ. ಹೀಗೆ ಮಲಗಿದರೆ ನಮ್ಮ ಹೊಟ್ಟೆ ಹಾಗೂ ಶ್ವಾಸಕೋಶದ ಮೇಲೆ ಭಾರ ಬೀಳುತ್ತದೆ. ಇದರಿಂದ ನಮಗೆ ನಿದ್ದೆ ಮಾಡುವಾಗ ಶ್ವಾಸ ತೆಗೆದುಕೊಳ್ಳುವುದು ಕಷ್ಟ ಆಗುತ್ತೆ. ಜೊತೆಗೆ ಇದರಿಂದ ನಿಮ್ಮ ಬೆನ್ನು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಕೆಲವು ವರ್ಷಗಳ ನಂತರ ಬ್ಯಾಕ್ ಪೇನ್ ಬರುತ್ತದೆ. ಹಾಗೆ ಇದು ಜೀರ್ಣಾಂಗಕ್ಕೊ ಒಳ್ಳೆಯದಲ್ಲ. ಇನ್ನೂ ಕೆಲವರು ಬಲಗಡೆಗೆ ತಿರುಗಿ ಮಲಗುತ್ತ ಇರುತ್ತಾರೆ. ಇದು ಕೂಡ ಅಷ್ಟು ಒಳ್ಳೆಯದಲ್ಲ, ನಾವು ನಮ್ಮ ಜೀರ್ಣಶಯದ ಆಕಾರ ಗಮನಿಸಿದರೆ ಅದು ನಮ್ಮ ದೇಹದ ಎಡ ಭಾಗಕ್ಕೆ ಕಾಣುತ್ತದೆ, ಹಾಗೂ ನಮ್ಮ ಹೃದಯ ಕೂಡ ಎಡ ಭಾಗಕ್ಕೆ ಇರುತ್ತದೆ ಇದು ಎಲ್ಲರಿಗೂ ಗೊತ್ತೇ ಇದೆ. ಹೀಗಿದ್ದಾಗ ನಾವು ಬಲಗಡೆ ತಿರುಗಿ ಮಲಗುವುದರಿಂದ ಇವೆರಡರ ಮೇಲೆ ತುಂಬಾ ಕೆಟ್ಟ ಪ್ರಭಾವ ಬೀರುತ್ತದೆ. ಹೀಗೆ ಮಲಗುವುದರಿಂದ ನಮ್ಮ ಜೀರ್ಣ ಕ್ರಿಯೆಗೆ ಬೇಕಾಗುವ ಜೀರ್ಣರಸಗಳು, ಆಸಿಡ್ ಗಳು ಸರಿಯಾದ ಪ್ರಮಾಣದಲ್ಲಿ ಬಿಡುಗಡೆ ಆಗದೆ ಜೀರ್ಣ ಕ್ರಿಯೆಗೆ ಅಡ್ಡಿ ಪಡಿಸುತ್ತದೆ. ಇದರ ಮೂಲವಾಗಿ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ.

ಹೇಗೆ ಮಲಗಿದರೆ ನಮ್ಮ ಶರೀರಕ್ಕೆ ಒಳ್ಳೆಯದು ಅಂತ ಯೋಚನೆ ಮಾಡ್ತಾ ಇದ್ದೀರಾ? ನಾವು ನೇರವಾಗಿ ಅಂದರೆ ಅಂಗಾತವಾಗಿ ಮಲಗುವುದರಿಂದ ನಮ್ಮ ಶರೀರಕ್ಕೆ ಯಾವ ಕೆಟ್ಟ ಪರಿಣಾಮ ಬೀಳುವುದಿಲ್ಲ. ಆದರೆ ಎಡಗಡೆ ತಿರುಗಿ ಮಲಗುವುದು ತುಂಬಾ ಒಳ್ಳೆಯದು. ಇದೊಂದು ಉತ್ತಮ ಭಂಗಿ. ಇದು ಎಲ್ಲದಕ್ಕೂ ಒಳ್ಳೆಯ ಭಂಗಿ. ಹೀಗೆ ಮಲಗುವುದರಿಂದ ನಮ್ಮ ಜೀರ್ಣಶಯಕ್ಕೆ ತುಂಬಾನೇ ಒಳ್ಳೆಯದು ಜೀರ್ಣ ಕ್ರಿಯೆ ಸೂಪರ್ ಆಗಿ ಕೆಲಸ ಮಾಡುತ್ತದೆ. ಹಾಗೆ ನಮ್ಮ ಹೃದಯ, ಮೆದುಳು, ಚರ್ಮ, ತಲೆ ಕೂದಲು ನೈಸರ್ಗಿಕವಾಗಿ ಕೆಟ್ಟ ಅಂಶಗಳಿಂದ ದೂರವಿರಲು ಕಾರಣವಾಗುತ್ತೆ. ಹೀಗೆ ಮಲಗುವುದರಿಂದ ಎಷ್ಟೋ ಆರೋಗ್ಯದ ಸಮಸ್ಯೆಗಳು ಪರಿಹಾರ ಸಿಗುತ್ತದೆ. ಎಡಗಡೆ ಮಲಗುವುದರಿಂದ ನಮ್ಮ ದೇಹದಲ್ಲಿನ ರಕ್ತದಲ್ಲಿನ ಕೆಟ್ಟ ಶಕ್ತಿಗಳು ದೂರ ಆಗುತ್ತವೆ. ಹೀಗೆ ಮಲಗಿದಾಗ ನಾವು ತಿಂದ ಆಹಾರ ದೊಡ್ಡ ಕರುಳಿಗೆ ಸರಾಗವಾಗಿ ಹೋಗಿ ಆ ಆಹಾರ ಜೀರ್ಣ ಆಗಲು ಬೇಕಾದ ಜೀರ್ಣ ರಸಗಳು ಉತ್ಪತ್ತಿ ಆಗಿ ಆಹಾರ ಬೇಗ ಜೀರ್ಣಗೊಂಡು ಬೆಳಿಗ್ಗೆ ನಿಮ್ಮ ಹೊಟ್ಟೆ ಬೇಗ ಶುಚಿ ಆಗಲು ಸಹಾಯ ಆಗುತ್ತೆ. ಹಾಗೂ ನಮ್ಮ ಮೇದೋಜೀರಕ ಗ್ರಂಥಿ ಕೂಡ ಅದರ ಕೆಲ್ಸ ಸರಿಯಾಗಿ ಮಾಡುತ್ತೆ. ನಮ್ಮ ಹೃದಯ ಎಡ ಗಡೆಗೆ ಇದ್ದು, ಎಡಗಡೆಗೆ ತಿರುಗಿ ಮಲಗಿದಾಗ ಹೃದಯಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗಿ, ಹೃದಯದ ಆರೋಗ್ಯ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು. ಹೃದಯ ಸ್ತಂಭನ ಆಗುವ ಸಮಸ್ಯೆ ಬರುವುದೇ ಇಲ್ಲ. ಇನ್ನೂ ಗರ್ಭವತಿ ಹೆಣ್ಣುಮಕ್ಕಳು ಕೂಡ ಎಡಗಡೆ ತಿರುಗಿ ಮಲಗಿದರೆ ನಮ್ಮ ದೇಹದಲ್ಲಿನ ನರಗಳಿಗೆ ರಕ್ತ ಸಂಚಾರ ಚೆನ್ನಾಗಿ ಆಗಿ ಕುತ್ತಿಗೆ ಬೆನ್ನು ಮೂಳೆಗಳ ಮೇಲೆ ಭಾರ ಬೀಳುವುದಿಲ್ಲ. ಬೆಳೆಯುತ್ತಿರುವ ಮಕ್ಕಳ ಬೆಳವಣಿಗೆಗೆ ಈ ಭಂಗಿ ತುಂಬಾ ಒಳ್ಳೆಯದು. ಎಡಗಡೆ ಮಲಗುವುದರಿಂದ ಸೊಂಟ ನೋವು, ಕತ್ತು ನೋವು, ಬೆನ್ನು ನೋವು, ಅಸಿಡಿಟಿ, ಆಸಿಡ್ ರೆಫ್ಲೇಕ್ಸ್ ಆಗುವುದಿಲ್ಲ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *