ನೈರ್ಮಲ್ಯದ ದೃಷ್ಟಿಯಿಂದ ಒಂದಲ್ಲ ಆರೋಗ್ಯದ ದೃಷ್ಟಿಯಿಂದಲೂ ಸಹ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡಬೇಕು. ಇನ್ನು ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆಬೇರೆಯಾಗಿವೆ. ಕೆಲವರು ಬೆಳಿಗ್ಗೆ ಸ್ಥಾನ ಮಾಡಿದರೆ ಇನ್ನು ಕೆಲವರು ರಾತ್ರಿಯ ಸಮಯದಲ್ಲಿ ಸ್ನಾನವನ್ನು ಮಾಡಿ ಮಲಗುತ್ತಾರೆ. ಬೆಳಗ್ಗೆ ಸಮಯದ ಅಭಾವದಿಂದಾಗಿ ರಾತ್ರಿ ಸ್ನಾನ ಮಾಡಿ ಮಲಗು ಅವರ ಸಂಖ್ಯೆ ಹೆಚ್ಚಾಗಿದೆ. ಇನ್ನು ರಾತ್ರಿ ಸ್ನಾನ ಮಾಡಿದರೆ ಒಳ್ಳೆಯದು. ಇನ್ನು ಬೆಳಿಗ್ಗೆ ಸ್ನಾನ ಮಾಡಿದರೆ ಒಳ್ಳೆಯದು ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಣುತ್ತದೆ.
ಇನ್ನು ಧರ್ಮದ ಪ್ರಕಾರ ಬೆಳಗಿನ ಸಮಯದಲ್ಲಿ ಸ್ನಾನ ಮಾಡುವುದು ಬಹಳ ಒಳ್ಳೆಯದು. ಆದರೆ ಹಾರ್ವರ್ಡ್ ವಿಶ್ವವಿದ್ಯಾಲಯ ಸೈಕಾಲಜಿ ಆಫ್ ಪ್ರೊಫೆಸರ್ ಪ್ರಕಾರ ಬೆಳಗ್ಗೆ ಎದ್ದು ಸ್ನಾನ ಮಾಡಿದರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ ಅಂತೆ. ಇನ್ನು ರಾತ್ರಿ ವೇಳೆ ಸ್ನಾನಮಾಡುವುದು ಕೆಟ್ಟದು ಏನು ಅಲ್ಲ. ಆದರೆ ಬೆಳಗಿನಿಂದ ಕೆಲಸ ಮಾಡಿ ಸುಸ್ತಾದವರಿಗೆ ರಾತ್ರಿ ಸ್ನಾನ ಮಾಡಿದರೆ ಹಿತವೆನಿಸುತ್ತದೆ. ಸ್ನಾನ ಮಾಡುವುದರಿಂದ ಬೇವರು ತುರಿಕೆ ಕಿರಿಕಿರಿ ಕಡಿಮೆಯಾಗಿ ಸುಖಕರ ನಿದ್ರೆ ನಿಮ್ಮದಾಗುತ್ತದೆ. ರಾತ್ರಿ ಯಾವಾಗಲೂ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಉತ್ತಮ.
ಆರೋಗ್ಯ ಮತ್ತು ನಿದ್ರೆಯು ಚೆನ್ನಾಗಿ ಬರುತ್ತದೆ. ಇನ್ನು ಭಾರತದ ದೇಶದಲ್ಲಿ ಬೆಳಗ್ಗೆ ಹಾಗೂ ರಾತ್ರಿ ಎರಡು ಸಲ ಸ್ನಾನ ಮಾಡಿದರೆ ಒಳ್ಳೆಯದು. ಬೆಳಗ್ಗೆ ಸ್ನಾನ ಮಾಡಿದರೆ ಮನಸ್ಸು ದೇಹವನ್ನು ಪ್ರೆ ಶ್ ಮಾಡಿದರೆ ರಾತ್ರಿಯ ಸ್ನಾನ ಸುಖಕರ ನಿದ್ರೆಗೆ ಕಾರಣವಾಗುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ ಧನ್ಯವಾದಗಳು.