ಊಟದ ಬಳಿಕ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುವುದು ಎಲ್ಲರಿಗೆ ಗೊತ್ತಿರುವ ಅಂಶ. ಆದರೆ ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಈ ಬಗ್ಗೆ ಆಯುರ್ವೇದ ಏನು ಹೇಳಿದೆ ಗೊತ್ತಾ.

ಆಯುರ್ವೇದ ಡಿನ್ನರ್ ಬಳಿಕ ಬಾಳೆಹಣ್ಣುತಿನ್ನುವುದರಿಂದ ಕೆಲವರಿಗೆ ಕೆಮ್ಮು ಹಾಗೂ ಶೀತ ಉಂಟಾಗುವುದು. ಅಲ್ಲದೆ ರಾತ್ರಿ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ.

ನ್ಯೂಟ್ರಿಷಿಯನಿಸ್ಟ್‌ ಏನು ಹೇಳುತ್ತಾರೆ ಸಂಜೆ ಜಿಮ್ ವರ್ಕೌಟ್‌ ಬಳಿಕ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಅಸ್ತಮಾ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ತಿಂದರೆ ಶೀತ ಹೆಚ್ಚಾಗುವುದು.

ಡಿನ್ನರ್ ಬಳಿಕ ಬಾಳೆಹಣ್ಣು ತಿಂದರೆ ಯಾರಿಗೆ ಒಳ್ಳೆಯದು ಸ್ಟ್ರೀಟ್‌ ಫುಡ್‌ ತಿಂದಾಗ ಕೆಲವೊಮ್ಮೆ ಹೊಟ್ಟೆಯಲ್ಲಿ ಉರಿ ಕಂಡು ಬರುತ್ತದೆ. ಇದನ್ನು ತಡೆಯಲು ಸ್ಟ್ರೀಟ್‌ ಫುಡ್ ಬಳಿಕ ಬಾಳೆಹಣ್ಣು ತಿನ್ನವುದು ಒಳ್ಳೆಯದು.ರಾತ್ರಿ ಎರಡು ಬಾಳೆಹಣ್ಣು ತಂದರೆ ಸ್ವಲ್ಪ ಹೊತ್ತಿನಲ್ಲಿಯೇ ಕಣ್ಣಿಗೆ ನಿದ್ದೆ ಹತ್ತುವುದು.

ಬಾಳೆಹಣ್ಣು ತಿಂದರೆ ತೂಕ ಹೆಚ್ಚುವುದೇ ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಮತ್ತಷ್ಟು ಬಲ ತುಂಬುತ್ತದೆಯೇ ಹೊರತು ಮೈಕೊಬ್ಬು ಹೆಚ್ಚಿಸುವುದಿಲ್ಲ. ಡಯಟ್‌ ಮಾಡುವವರು ರಾತ್ರಿ ಒಂದು ಬಾಳೆಹಣ್ಣು ಹಾಗೂ ಒಂದು ಲೋಟ ಹಾಲು ಕುಡಿದು ಮಲಗಿದರೆ ಮೈ ತೂಕ ಹೆಚ್ಚುವುದಿಲ್ಲ.

Leave a Reply

Your email address will not be published. Required fields are marked *