ರಾತ್ರಿ ಸ್ನಾನ ಮಾಡಿ ಮಲಗುವುದರಿಂದ ಆ ದಿನದ ಎಲ್ಲ ಒತ್ತಡವೂ ಕಡಿಮೆಯಾಗಿ, ಸರಿಯಾಗಿ ನಿದ್ದೆ ಮಾಡಬಹುದು. ಆದರೆ ಬೆಳಗ್ಗೆ ಮಾಡುವುದರಿಂದ ನಿಮ್ಮ ದಿನವನ್ನು ಉಲ್ಲಾಸಿತವನ್ನಾಗಿಡಬಹುದು. ವಿಜ್ಞಾನಿಗಳು ಹೇಳುವ ಪ್ರಕಾರ ಬೆಳಗ್ಗೆ ಸ್ನಾನದಿಂದ ಹಲವು ಆರೋಗ್ಯ ಲಾಭಗಳಿವೆ.
ಎಲ್ಲ ಅಂಗಗಳಿಗೆ ದಿನಪೂರ್ತಿ ಸೂಕ್ತ ಪ್ರಮಾಣದಲ್ಲಿ ರಕ್ತ ಸಂಚಲನವಾಗುತ್ತದೆ. ಇದರಿಂದ ಹೈಪರ್ ಟೆನ್ಷನ್ ಕಡಿಮೆ ಆಗುತ್ತದೆ. ರಕ್ತ ಸಂಚಲನ ಸರಿಯಾಗಿದ್ದರೆ, ಚಟುವಟಿಕೆಯಿಂದ ದಿನ ಕಳೆಯುವುದು ಸಾಧ್ಯ.
ಒತ್ತಡ ಕಡಿಮೆ ಮಾಡುತ್ತದೆ. ಅದರಲ್ಲೂ ಕೆಲಸದ ಒತ್ತಡ ಕಡಿಮೆ ಮಾಡಲು ತಣ್ಣೀರು ಸ್ನಾನ ಮತ್ತೂ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬೆಳಗ್ಗೆ ಸ್ನಾನ ಮಾಡುವುದರಿಂದ ಬಿಳಿ ರಕ್ತ ಕಣಗಳು ಹೆಚ್ಚಿಸುತ್ತದೆ. ಇದು ಜ್ವರದಂಥ ರೋಗಗಳನ್ನು ತಡೆದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚರ್ಮ ಆರೋಗ್ಯ ಕಾಪಾಡುತ್ತದೆ. ಬೆಳಗ್ಗೆ ಸ್ನಾನ ಮಾಡುವುದರಿಂದ ಮುಖದಲ್ಲಿ ಜಿಡ್ಡಿನಾಂಶ ಸೂಕ್ತ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಮೊಡವೆ ಮಾಯವಾಗುತ್ತದೆ ಹಾಗೂ ಕಾಂತಿ ಹೆಚ್ಚಿಸುತ್ತದೆ.
ಕೆಮ್ಮು ನೆಗಡಿಗೆ ಸರಿಯಾದ ಮದ್ದು. ರಾತ್ರಿ ಮೂಗು ಕಟ್ಟುವುದು ಹಾಗೂ ಉಸಿರಾಟದಲ್ಲಿ ಏರುಪೇರಾಗಿರುತ್ತದೆ. ಬೆಳಗ್ಗೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹ ರಿಲ್ಯಾಕ್ಸ್ ಆಗಿ, ಉಸಿರಾಟ ಸುಗಮವಾಗುತ್ತದೆ.
ಫಲವತ್ತತೆಗೂ ಮದ್ದು. ಫ್ಯಾಮಿಲಿ ಪ್ಲ್ಯಾನ್ ಮಾಡುವಾಗ ಇಂಥ ಕೆಲವು ಅಭ್ಯಾಸಗಳನ್ನು ಪಾಲಿಸಬೇಕು. ಏಕೆಂದರೆ ದಿನ ಬೆಳಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ವೀರ್ಯ ಕೌಂಟ್ ಹೆಚ್ಚಾಗುತ್ತದೆ.