ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ರಾಮಫಲ ಎಂಬ ಹಣ್ಣು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ ಹಾಗೂ ಇದರ ರುಚಿ ಈಗಿನ ಮಕ್ಕಳಿಗೆ ಅಂತೂ ಪರಿಚಯವೇ ಇಲ್ಲ ಮಿತ್ರರೇ. ಮೊದಲಿನ ಕಾಲದ ಹಿರಿಯರಿಗೆ ಖಂಡಿತವಾಗಿ ಈ ಹಣ್ಣಿನ ಬಗ್ಗೆ ಕೇಳಿದರೆ ಅವರು ಖಂಡಿತವಾಗಿ ಉತ್ತರಿಸುತ್ತಾರೆ. ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪೌಷ್ಟಿಕತೆ ದೊರೆಯುವುದು ತುಂಬಾನೇ ಮುಖ್ಯ ಗೆಳೆಯರೇ. ನಾವು ದಷ್ಟ ಪುಷ್ಟವಾಗಿ ಇದ್ದರೆ ನಮ್ಮ ಹತ್ತಿರ ಯಾವುದೇ ಅನಾರೋಗ್ಯಗಳು ಹತ್ತಿರ ಕೂಡ ಸುಳಿಯುವುದಿಲ್ಲ. ಹಾಗಾದರೆ ಅಧಿಕ ಪ್ರಮಾಣದ ಪೌಷ್ಟಿಕತೆ ಹಾಗೂ ಖನಿಜಗಳು ಲವಣಗಳು ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಅಂಶಗಳನ್ನು ಹೊಂದಿರುವ ಹಣ್ಣುಗಳಿಂದ ಮತ್ತು ತರಕಾರಿಗಳಿಂದ ನಮಗೆ ಸಿಗುವುದು. ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ದೊರೆಯುವ ಈ ರಾಮಫಲ ಹಣ್ಣು ಸವಿಯಲು ಸಿಗುತ್ತದೆ. ಈ ಹಣ್ಣು ಕಾಲಕ್ಕೆ ತಕ್ಕಂತೆ ಸಿಗುತ್ತದೆ. ಮುಖ್ಯವಾಗಿ ಇದು ಹಳ್ಳಿಗಳಲ್ಲಿ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗೂ ಮಾರುಕಟ್ಟೆಯಲ್ಲಿ ಕೂಡ ಸಿಗುತ್ತದೆ. ಸಿಕ್ಕರೆ ಖಂಡಿತವಾಗಿ ಬಿಡಬೇಡಿ. ಸೇವನೆ ಮಾಡಿ.
ರುಚಿಯಲ್ಲಿ ಅದ್ಭುತ ಹಾಗೂ ಪೋಷಣೆಯಲ್ಲಿಯೂ ವಿಶೇಷ ಆರೈಕೆ ಮಾಡುವುದು. ರಾಮ ಫಲ ಹಣ್ಣನ್ನು ಸವಿಯುವುದರಿಂದ ಯಾವೆಲ್ಲಾ ಪ್ರಯೋಜನ ಪಡೆಯಬಹುದು ಎನ್ನುವುದನ್ನು ಪರಿಚಯ ಮಾಡಿ ಕೊಡುತ್ತೇವೆ ಬನ್ನಿ. ಮೊದಲನೆಯದು, ಇದು ಮಧುಮೇಹ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ರಾಮ ಫಲ ಹಣ್ಣಿನಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಮಧುಮೇಹಿಗಳಿಗೆ ಇದೊಂದು ಅದ್ಭುತವಾದ ಹಣ್ಣಾಗಿದೆ. ಜೊತೆಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಹೆಚ್ಚು ಮಾಡುತ್ತದೆ. ಎರಡನೇಯ ಪ್ರಯೋಜನ ಏನೆಂದರೆ ಈ ರಾಮಫಲ ಹಣ್ಣು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮುಖ್ಯವಾಗಿ ಹೇಳಬೇಕೆಂದರೆ ವಾತಾವರಣ ಬದಲಾದಂತೆ ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಇದು ದಿವ್ಯ ಔಷಧವಾಗಿದೆ.
ಈ ರಾಮಫಲ ಹಣ್ಣಿನಲ್ಲಿ ವಿಟಮಿನ್ ಎ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರ ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ಉರಿ ಊತವನ್ನು ಕಡಿಮೆ ಮಾಡುತ್ತದೆ. ಮೂರನೆಯದಾಗಿ ಕೂದಲು ಮತ್ತು ಮುಖದ ಆರೋಗ್ಯಕ್ಕೆ ಮತ್ತು ಅಂದಕ್ಕೆ ಬಹಳ ಉತ್ತಮ ಈ ರಾಮ ಫಲ ಹಣ್ಣು. ಈ ಹಣ್ಣು ತಿನ್ನುವುದರಿಂದ ಇದು ಆಂತರಿಕವಾಗಿ ಕೂದಲಿನ ಆರೈಕೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ಸಂಧಿ ನೋವು ನಿವಾರಕ ಆಗಿ ಈ ರಾಮ ಫಲ ಹಣ್ಣು ಸಹಾಯ ಮಾಡುತ್ತದೆ. ನಾಲ್ಕನೆಯದು ರಾಮ ಫಲ ಹಣ್ಣು ಪೋಷಕಾಂಶಗಳ ಆಗರ ಅಂತ ಹೇಳಿದರೆ ತಪ್ಪಾಗಲಾರದು. ಮೂವತ್ತು ವರ್ಷ ಮೇಲ್ಪಟ್ಟ ನಂತ್ರ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಬೇಕಾಗುತ್ತವೆ. ಅದನ್ನು ನಮ್ಮ ದೇಹಕ್ಕೆ ಪೂರೈಸುವ ಶಕ್ತಿಯನ್ನು ಹೊಂದಿದೆ ಈ ಹಣ್ಣು. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನೂ ಈ ಹಣ್ಣು ಮಕ್ಕಳಿಗೆ ಕೂಡ ಕೊಡಬಹುದು. ಬೀಜವನ್ನು ತಿಂದರೂ ಕೂಡ ಯಾವುದು ಸಮಸ್ಯೆ ಆಗುವುದಿಲ್ಲ. ಹೌದು ಈ ಹಣ್ಣು ಎಲ್ಲಿ ಸಿಕ್ಕಿದರೂ ಬಿಡಬೇಡಿ. ಈ ಹಣ್ಣು ತಂದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಜೊತೆಗೆ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣುಗಳನ್ನು ತಿನ್ನುತ್ತಾ ಅವುಗಳಿಂದ ದೊರೆಯುವ ಎಲ್ಲ ಬಗೆಯ ಪ್ರಯೋಜನಗಳನ್ನು ಪಡೆದು ನಿಮ್ಮ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳಿ ಶುಭದಿನ.