ನಮಸ್ತೆ ಪ್ರಿಯ ಓದುಗರೇ, ರಿಟೈರ್ಡ್ ಆದ್ಮೇಲೆ ಬದುಕು ಹೇಗೆ ಅಂತ ಅದೆಷ್ಟೋ ಜನ ಯೋಚನೆ ಮಾಡ್ತಾರೆ, ಕೆಲವರಿಗೆ ನಿವೃತ್ತಿ ನಂತರ ಕೆಲವೊಂದಿಷ್ಟು ಹಣ ಸಂಸ್ಥೆ ಇಂದ ಬರುತ್ತೆ, ಆದ್ರೆ ಎಲ್ಲರ ಜೀವನ ರಿಟೈರ್ಡ್ ಆದ್ಮೇಲೆ ಎಲ್ಲರ ತರಹ ಸದೃಢವಾಗಿ ಇರುವುದಿಲ್ಲ. ಅಂಥವರಿಗೆ ಆರಂಭವಾದ ಯೋಜನೆಯೇ ಸಾರ್ವಜನಿಕರ ಭವಿಷ್ಯ ನಿಧಿ. ಅಂದ್ರೆ ಪಿಪಿಎಫ್. ಪಿಪಿಎಫ್ ಅಂದ್ರೆ ಪಬ್ಲಿಕ್ ಪ್ರವಿಡೆಂಟ್ ಫಂಡ್. ಹೆಸರೇ ಹೇಳುವಂತೆ ಪಬ್ಲಿಕ್, ಅಂದ್ರೆ ಸಾರ್ವಜನಿಕರಿಗೆ ಅನುಕೂಲವಾಗುವಂಥ ಯೋಜನೆ. ಪಿಪಿಎಫ್ ನಲ್ಲಿ 15 ವರ್ಷ 20 ವರ್ಷ 30 ವರ್ಷ 35 ವರ್ಷ ಹೀಗೆ ಬೇರೆ ಬೇರೆ ಸಮಯಗಳಲ್ಲಿ ಹಣವನ್ನು ಇನ್ವೆಸ್ಟ್ ಮಾಡಬಹುದು. ನೀವು ಕಟ್ಟೋ ಹಣಕ್ಕೆ 7.1 ರಷ್ಟು ಬಡ್ಡಿಯನ್ನು ಸೇರಿಸಿ ಕೊಡುತ್ತಾರೆ. ಪ್ರತಿ ವರ್ಷ 500 ರೂಗಳಿಂದ 1.50000 ಅಷ್ಟರಲ್ಲಿ ಎಷ್ಟು ಹಣ ಬೇಕಾದರೂ ಇನ್ವೆಸ್ಟ್ ಮಾಡಬಹುದು. ಒಂದು ಫೈನಾನ್ಸಿಯಲ್ ವರ್ಷದಲ್ಲಿ ನಿಮಗೆ 12 ಕಂತುಗಳಲ್ಲಿ ನಿಮಗೆ ಹಣ ಕಟ್ಟಲು ಅವಕಾಶ ಇರುತ್ತದೆ. ನೀವು 3 ರಿಂದ 6 ವರ್ಷದ ಮಧ್ಯದಲ್ಲಿ ಪಿಪಿಎಫ್ ಮೇಲೆ ಸಾಲವನ್ನು ಸಹ ಪಡೆಯಬಹುದು. ನೀವು 7 ವರ್ಷದ ನಂತರ ನಿಮಗೆ ಬೇಕಾದ ಸಮಯದಲ್ಲಿ ನಿಮ್ಮ ಪಿಪಿಎಫ್ ಹಣವನ್ನು ವಾಪಸ್ ಪಡೆಯಬಹುದು.
ಮೇಚುರೀಟಿ ಆದಮೇಲೆ ಮತ್ತೊಂದು ವರ್ಷ ಬೇಕು ಅಂದರೆ ಇನ್ವೆಸ್ಟ್ ಮೆಂಟ್ ನ ಹಾಗೆ ಇಟ್ಟು ಬಡ್ಡಿಯನ್ನು ಸಹ ತೆಗೆದುಕೊಳ್ಳಬಹುದು. ಒಟ್ಟಾಗಿ ಹೇಳುವುದಾದರೆ ಇದು ತುಂಬಾ ಉಪಯೋಗಕಾರಿ ಯೋಜನೆ. ಮನಸಲ್ಲಿ ಆಗಿದ್ದು ಆಗಲಿ ಒಂದಿಷ್ಟು ಉಳಿತಾಯ ಮಾಡ್ತೀನಿ, ಪಿಪಿಎಫ್ ನಲ್ಲಿ ಇನ್ವೆಸ್ಟ್ ಮಾಡ್ತಾ ಬರ್ತೀನಿ ಅಂತ ನಿಮ್ಮ ಮನಸಲ್ಲಿ ಇದ್ರೆ, ಹೇಗೆ ಮಾಡಬೇಕು, ಎಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೋಡೋಣ. ನೀವು ಪಿಪಿಎಫ್ ಅಕೌಂಟ್ ಅನ್ನು ನೀವು ಯಾವುದೇ ಬ್ಯಾಂಕ್ ಅಥವ ಪೋಸ್ಟ್ ಆಫೀಸ್ ನಲ್ಲಿ ಹಾಗೆ ಸಬ್ ಪೋಸ್ಟ್ ಆಫೀಸ್ ನಲ್ಲಿ ಅಂದ್ರೆ ಉಪ ಅಂಚೆ ಕಚೇರಿಯಲ್ಲಿ ನಿಮ್ಮ ಪಿಪಿಎಫ್ ಅಪ್ಲಿಕೇಷನ್ ತೊಗೊಂಡು ಎಲ್ಲಾ ಮಾಹಿತಿಯನ್ನು ತುಂಬಿ, ಅವರು ಕೇಳುವ ಎಲ್ಲ ವಿವರಗಳನ್ನು ಡಾಕ್ಯುಮೆಂಟ್ ಸಬ್ಮಿಟ್ ಮಾಡಿ. ಒಂದಿಷ್ಟು ಸಹಿಯನ್ನು ಕೇಳ್ತಾರೆ, ಮಾಡಿ. ಜೊತೆಗೆ ನಿಮ್ಮ ಮೊದಲ ಪಿಪಿಎಫ್ ಹಣವನ್ನು ಡೆಪಾಸಿಟ್ ಮಾಡಿದ್ರೆ ನಿಮ್ಮ ಪಿಪಿಎಫ್ ಅಕೌಂಟ್ ರೆಡಿ. ಇನ್ನೂ ಈಗ ಇದು ಡಿಜಿಟಲ್ ಯುಗ, ಎಲ್ಲರ ಮೊಬೈಲ್ ಅಲ್ಲಿಯೋ ಬ್ಯಾಂಕಿಂಗ್ ಅಪ್ಲಿಕೇಶನ್ ಇದ್ದೆ ಇರುತ್ತೆ, ಮುಂಚಿನ ಥರ ಬ್ಯಾಂಕ್ ಮುಂದೆ ದಿನಗಟ್ಟಲೆ ನಿಲ್ಲುವಂತಹ ಪರಿಸ್ಥಿತಿ ಈಗಿಲ.
ನಿಮ್ಮ ಹತ್ರ ಬ್ಯಾಂಕಿಂಗ್ ಅಪ್ಲಿಕೇಶನ್ ಇದ್ರೆ ಪಿಪಿಎಫ್ ಅಂತ ಸರ್ಚ್ ಮಾಡಿ, ಅದ್ರಲ್ಲಿ ಪಿಪಿಎಫ್ ಅಕೌಂಟ್ ಅಂತ ಒಂದು ಆಪ್ಷನ್ ಇರುತ್ತೆ. ಅಲ್ಲೇ ಒಂದೇ ಕ್ಲಿಕ್ ಅಲ್ಲಿ ಅಕೌಂಟ್ ರೆಡಿ. ನಿಮ್ಮ ಸೇವಿಂಗ್ಸ್ ಅಲ್ಲಿರುವ ಹಣ ಸುಮ್ಮನೆ ಕರ್ಚಾಗುತ್ತೆ ಅಂತ ಅನ್ನಿಸಿದರೆ, ಅಲ್ಲಿಂದ ಪಿಪಿಎಫ್ ಅಕೌಂಟ್ ಗೆ ಟ್ರಾನ್ಸಫರ್ ಮಾಡಿ. ನೀವು ವರ್ಷದಲ್ಲಿ 12 ಸಲ ಹೀಗೆ ಟ್ರಾನ್ಸಫರ್ ಮಾಡಿ 15 ವರ್ಷ ಹೀಗೆ ಮಾಡುತ್ತಾ ಬಂದರೆ. ನಿಮ್ಮ ಅಕೌಂಟ್ ಅಲ್ಲಿರುತ್ತೆ ಲಕ್ಷ ಲಕ್ಷ ಹಣ. ಎಷ್ಟು ಹಣ ಹಾಕಿದರೆ ಎಷ್ಟು ಹಣ ಬರುತ್ತೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ನೀವು 35 ವರ್ಷಕ್ಕೆ ಪ್ಲಾನ್ ಮಾಡಿದ್ದರೆ, ತಿಂಗಳಿಗೆ ಒಂದು ಸಾವಿರ ದಂತೆ 35 ವರ್ಷ ಹಣ ತುಂಬಿದರೆ, ಇನ್ನೂ 5 ವರ್ಷಕ್ಕೆ ಪ್ಲಾನ್ ಮುಂದುವರೆಸಿ 40 ವರ್ಷಕ್ಕೆ ನಿಮ್ಮ ಹಣ ವಾಪಸ್ ತೆಗೆದುಕೊಂಡರೆ ನಿಮಗೆ 26,32,000 ಹಣ ಸಿಗುತ್ತೆ. ನೀವು ಅದೇ 35 ವರ್ಷದ ಪ್ಲಾನ್ ಗೆ 2,000 ಕಟ್ಟುತ್ತಾ ಹೋದರೆ 52,64,000 ಸಿಗುತ್ತೆ. ನೀವು ಅದೇ ಪ್ಲಾನ್ ಗೆ 4,000 ಪ್ರತಿ ತಿಂಗಳು ಕಟ್ಟಿದರೆ 1,05,28,000 ಅಷ್ಟು ಹಣ ಸಿಗುತ್ತೆ. ನಂದಲ್ಲ ಅಂತ ಒಂದಿಷ್ಟು ಹಣವನ್ನು ತಿಂಗಳು ತಿಂಗಳಿಗೆ ಕಟ್ಟುತ್ತಾ ಹೋದರೆ ರಿಟೈರ್ಡ್ ಆದಮೇಲೆ ನಿಮ್ಮ ಹಣದಲ್ಲಿ ನೀವೇ ಆರಾಮಾಗಿ ಇರಬಹುದಲ್ಲ. ಮಕ್ಕಳ ಮೇಲೆ ಅವಲಂಬನೆ ಆಗೋದು ಬೇಡ, ಕೊನೆಯ ದಿನಗಳನ್ನು ವೃದಶ್ರಮ ದಲ್ಲು ಕಳೆಯುವುದು ಬೇಡ. ಏನಂತೀರಿ? ಇದಾಗಿತ್ತು ಇಂದಿನ ಲೇಖನ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.