ಒಂದೊಂದು ವಸ್ತುಗಳ ಮೇಲೆ ಒಂದೊಂದು ನಂಬರ್ ಅಥವಾ ಕೋಡ್ ಇರುತ್ತದೆ. ಅದು ಯಾಕೆ ಇರುತ್ತದೆ ಅದು ಏನನ್ನು ಸೂಚಿಸುತ್ತದೆ. ಅನ್ನುವುದು ನಮಗೆ ತಿಳಿದಿರುವುದಿಲ್ಲ, ಆದರೆ ಅದನ್ನು ತಿಳಿದುಕೊಳ್ಳಬೇಕು ಅನ್ನೋ ಕುತೂಹಲ ಕೆಲವರಿಗೆ ಇರುತ್ತದೆ. ಆದರೆ ಅದನ್ನು ನಮಗೆ ಯಾರು ತಿಳಿಸುವುದಿಲ್ಲ ಕಾರಣ ಅದರ ಬಗ್ಗೆ ಅವರಿಗೂ ಕೂಡ ತಿಳಿಯುವುದಿಲ್ಲ. ಆದ್ದರಿಂದ ಅದು ಏನನ್ನು ಸೂಚಿಸುತ್ತದೆ. ಅದನ್ನು ರೈಲ್ವೆ ಬೋಗಿ ಮೇಲೆ ಯಾಕೆ ನಮೂದಿಸಿರುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.
ರೈಲಿನ ಪ್ರತಿ ಬೋಗಿಗಳ ಮೇಲೆ ಐದು ಸಂಖ್ಯೆಗಳ ನಂಬರ್ ಇರುತ್ತದೆ. ಆದರೆ ಅದು ಯಾಕೆ ಇರುತ್ತದೆ ಅನ್ನೋದರ ಬಗ್ಗೆ ತಿಳಿಸುತ್ತೇವೆ ನೋಡಿ.
ಪ್ರತಿ ರೈಲಿನ ಬೋಗಿಗಳ ಮೇಲೆ ಪ್ರತಿ ನಂಬರ್ ಗಳು ಬೇರೆ ಬೇರೆ ರೀತಿಯಾಗಿರುತ್ತವೆ ಈ ಐದು ನಂಬರ್‌ಗಳಲ್ಲಿ ಮೊದಲ ಎರಡು ನಂಬರ್ ಆ ಕಂಪಾರ್ಟ್‌ಮೆಂಟ್ ಅಥವಾ ಬೋಗಿ ತಯಾರಾದ ವರ್ಷವನ್ನು ಸೂಚಿಸಿದರೆ, ನಂತರದ ಮೂರು ನಂಬರ್‌ಗಳು ಆ ವರ್ಷ ಎಷ್ಟು ಕಂಪಾರ್ಟ್‌ಮೆಂಟ್‌ಗಳು ತಯಾರಾಗಿವೆ ಎಂಬುದನ್ನು ಸೂಚಿಸುತ್ತವೆ.
ಉದಾಹರಣೆ ಮೇಲಿನ ಚಿತ್ರದಲ್ಲಿ ಕಾಣಿಸುವ ರೈಲಿನ ಬೋಗಿಯ ನಂಬರ್ 00. ಇದರಲ್ಲಿ 00 ಎಂದರೆ ಈ ರೈಲು ಬೋಗಿ 2000ನೇ ಇಸವಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದರ್ಥ. ಅದೇ ರೀತಿ ಉಳಿದ ಮೂರು ಡಿಜಿಟ್ ಅಂದರೆ 710 ಎಂದರೆ ಆ ವರ್ಷದಲ್ಲಿ ತಯಾರಾದ 00710ನೇ ಕಂಪಾರ್ಟ್‌ಮೆಂಟ್ ಇದಾಗಿದೆ ಎಂಬುದನ್ನು ತಿಳಿಸುತ್ತದೆ.