ಬದನೇಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿಯೊಬ್ಬರಿಗೂ ಗೊತ್ತು ಸಾಮಾನ್ಯವಾಗಿ ಅಡುಗೆ ಮಾಡುವ ಹಲವಾರು ಬಗೆಯ ಅಡುಗೆ ಮಾಡುವಾಗ ಬದನೇಕಾಯಿ ಬಳಕೆ ಮಾಡುತ್ತಾರೆ ಆದರೆ ಈ ಬದನೇಕಾಯಿ ಕೇವಲ ಅಡುಗೆ ಮಾಡಲು ಮಾತ್ರ ಬಳಸುವುದಿಲ್ಲ ಹಲವು ರೋಗಗಳನ್ನು ಹೋಗಲಾಡಿಸಲು ಬಳಸುತ್ತಾರೆ ಯಾವೆಲ್ಲ ರೀತಿಯಾದ ರೋಗಗಳನ್ನು ಹೋಗಲಾಡಿಸುತ್ತೆ ಮತ್ತೆ ಯಾವ ರೀತಿಯಾಗಿ ಬಳಕೆ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ. ಈ ಬದನೇಕಾಯಿ ನೀವು ಬಳಸುವುದರಿಂದ ನಿಮ್ಮ
ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗು ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ, ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಹಾಗೆ ಇನ್ನು ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ.

ನಿಮ್ಮ ಅಂಗೈ ಮತ್ತು ನಿಮ್ಮ ಅಂಗಾಲು ಹೆಚ್ಚು ಬೆವರುತಿದ್ದರೆ ಈ ಬದನೆ ಕಾಯಿ ಬಳಕೆಯಿಂದ ಹೋಗಲಾಡಿಸಬಹುದು ಬದನೆಕಾಯಿಯನ್ನು ಸಣ್ಣಗೆ ಹೆಚ್ಚಿ ನೀರಿಗೆ ಬದನೇಕಾಯಿ ಹಾಕಿ, ಸ್ವಲ್ಪ ಸಮಯದ ನಂತರ ಬದನೆಕಾಯಿಯನ್ನು ತೆಗೆದು ಆ ನೀರಿನಲ್ಲಿ ದಿನವೂ ಕೈ-ಕಾಲುಗಳನ್ನು 30 ನಿಮಿಷಗಳು ನೆನಸಬೇಕು ಇದರಿಂದ ನಿಮ್ಮ ಹೆಚ್ಚು ಬೆವರು ನಿಲ್ಲುತ್ತದೆ.

ಇನ್ನು ಮೂಲವ್ಯಾಧಿ ಅನ್ನೋದು ಇತ್ತೀಚಿಗೆ ಎಲ್ಲರಿಗು ಕಾಡುವ ಸಮಸ್ಯೆ ಆಗಿದೆ ಹಾಗಾಗಿ ಮೂಲವ್ಯಾಧಿ ಹೋಗಲಾಡಿಸಲು ಹಲವು ರೀತಿಯ ಮನೆಮದ್ದುಗಳು ಇವೆ ಅದರಲ್ಲಿ ಇದು ಸಹ ಒಂದು ಬದನೇಕಾಯಿ ಮದ್ದು ಹೇಗೆ ಬಳಸಬೇಕು ಗೊತ್ತಾ ಇಲ್ಲಿದೆ ನೋಡಿ ನೇರಳೆ ಬಣ್ಣದ ಬದನೆಕಾಯಿನ್ನು ಬೇಯಿಸಿ ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿಕೊಂಡು ಪ್ರತಿದಿನ ಬೆಳಗಿನ ಸಮಯದಲ್ಲಿ ಸೇವಿಸುತ್ತಾ ಬಂದರೆ ಆದೊಷ್ಟು ಬೇಗ ಮೂಲವ್ಯಾಧಿ ಕಡಿಮೆಯಾಗುತ್ತದೆ.

ಇನ್ನು ಕಣ್ಣಿನ ತೊಂದರೆ ಇದ್ದಾರೆ ಅಂದರೆ ನಿಮ್ಮ ದೃಷ್ಟಿ ಸಾಮರ್ಥ್ಯ ಕಡಿಮೆ ಇದ್ದಾರೆ ಬದನೇಕಾಯಿ ಉತ್ತಮ ಮದ್ದು ಹೇಗೆ ಬಳಸಬೇಕು ಗೊತ್ತಾ ಎಳೆಯ ಬದನೆಕಾಯಿಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ನಿಮ್ಮ ದೃಷ್ಟಿ ಸಾಮರ್ಥ್ಯ ಹೆಚ್ಚಾಗುತ್ತದೆ.

ಇನ್ನು ಬದನೆ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಆಗುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ನಿಮಗೆ ಯಾವುದೇ ತರಹದ ತುರಿಕೆ ಇದ್ದರು ಹೋಗಲಾಡಿಸಬಹುದು ಮತ್ತು ಗಾಯದ ಜಾಗಕ್ಕೆ ಬದನೇಕಾಯಿ ಎಲೆಗಳನ್ನು ಕೆಂಡದಲ್ಲಿ ಸುಟ್ಟು ಏಟು ಬಿದ್ದ ಜಗದಲ್ಲಿ ಕಟ್ಟಿದರೆ ನೋವು ಬೇಗ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *