ಇಂದಿನ ಲೇಖನದಲ್ಲಿ ನಿಮಗೆ ಲಕ್ಕಿ ಗಿಡದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಈ ಲಕ್ಕಿ ಗಿಡವನ್ನು ಯಾವ ಯಾವ ಔಷಧೀಯ ರೂಪದಲ್ಲಿ ಉಪಯೋಗ ಮಾಡುತ್ತಾರೆ. ಮತ್ತು ಇದು ಯಾವ ರೋಗಗಳಿಗೆ ಉತ್ತಮವಾದ ಗಿಡವಾಗಿದೆ ಎಂಬುದರ ಬಗ್ಗೆ ವಿವರಣೆಯನ್ನು ಹಂಚಿಕೊಳ್ಳುತ್ತೇವೆ. ಆದ ಕಾರಣವೇ ಸ್ನೇಹಿತರೇ ನಮ್ಮ ಈ ಚಿಕ್ಕ ಮತ್ತು ಆರೋಗ್ಯಕರ ಅದ್ಭುತವಾದ ಮಾಹಿತಿಯನ್ನು ಕೊನೆವರೆಗೂ ಓದುವುದನ್ನು ಮರೆಯಬೇಡಿ. ಲಕ್ಕಿ ಗಿಡ ಇದು ಆಯುರ್ವೇದ ಪದ್ಧತಿಯಲ್ಲಿ ಬಳಕೆ ಮಾಡುವಂತಹ ಸಸ್ಯ ಆಗಿದೆ. ಇದನ್ನು ಬಿಳಿ ಲಕ್ಕಿ ಎಂದು ಕೂಡ ಕರೆಯುತ್ತಾರೆ. ಈ ಗಿಡವೂ ಆರರಿಂದ ಹನ್ನೆರಡು ಅಡಿಗಳ ವರೆಗೆ ಬೆಳೆಯುತ್ತದೆ ಗಿಡದ ಕಾಂಡವೂ ಸದೃಢವಾಗಿ ಇರುತ್ತದೆ. ಐದು ಎಲೆಗಳ ಗುಚ್ಛವು ಒಂದೇ ಎಲೆಯಂತೆ ಕಾಣುತ್ತದೆ. ಹೂವು ಗುಚ್ಛವೂ ಎರಡು ಮೂರು ಇಂಚು ಉದ್ದವಾಗಿ ಇರುತ್ತದೆ. ಹಾಗೂ ಹೂವುಗಳು ನೀಲಿ ಬಣ್ಣದಲ್ಲಿ ಕಾಣಿಸಿ ಕೊಡುತ್ತದೆ. ಇದರಲ್ಲಿ ಎರಡು ಗಿಡಗಳು ಇವೆ. ಬಿಳಿ ಲಕ್ಕಿ ಗಿಡ ಮತ್ತು ಕರಿ ಲಕ್ಕಿ ಗಿಡ ಎಂಬ ಎರಡು ವಿಧಗಳನ್ನು ಈ ಸಸ್ಯ ಹೊಂದಿದೆ.
ಕರಿ ಲಕ್ಕಿ ಗಿಡದ ಕಾಂಡವು ಸ್ವಲ್ಪ ಕಡು ಬಣ್ಣವನ್ನು ಹೊಂದಿರುತ್ತದೆ. ಅಲ್ಲದೆ ಹೂವುಗಳು ಕೂಡ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ. ಈ ಗಿಡದ ಎಲೆಗಳು ಬೇರುಗಳು ಬೀಜಗಳು ಅತ್ಯಂತ ಔಷಧೀಯ ಗುಣಗಳನ್ನು ಹೊಂದಿದೆ. ಆದ ಕಾರಣವೇ ಇದನ್ನು ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತಿದೆ. ಹಾಗೂ ಮನೆಮದ್ದುಗಳನ್ನಾಗಿ ಉಪಯೋಗ ಮಾಡುತ್ತಾರೆ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಗಿಡದ ಬೇರು ಎಲೆ ಬೀಜಗಳಿಂದ ತಯಾರಿಸಿದ ಔಷಧಿಯನ್ನು ಕಫಾ ಅಸ್ತಮಾ ಕೆಮ್ಮು ಮುಂತಾದ ರೋಗಗಳಿಗೆ ಬಳಕೆ ಮಾಡುತ್ತಾರೆ. ಇದಲ್ಲದೆ ಈ ಗಿಡವೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅದರಲ್ಲೂ ಸ್ತ್ರೀಯರ ಋತುಚಕ್ರದ ದೋಷಗಳನ್ನು ನಿವಾರಣೆ ಮಾಡುವಲ್ಲಿ ಸಹಾಯಕಾರಿ ಆಗಿದೆ. ಋತು ಚಕ್ರದಲ್ಲಿ ಉಂಟಾಗುವ ಸಮಸ್ಯೆ ಗಳಾದ ಹೊಟ್ಟೆ ನೋವು ಕೈ ಕಾಲು ನೋವು ರಕ್ತಸ್ರಾವ ಎಲ್ಲವನ್ನು ಕ್ರಮೇಣ ಕಡಿಮೆ ಮಾಡುವ ಶಕ್ತಿ ಈ ಲಕ್ಕಿ ಗಿಡ ಹೊಂದಿದೆ ಉತ್ತಮ ಜೀರ್ಣಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಜೀರ್ಣ ಕ್ರಿಯೆಗೆ ತುಂಬಾನೇ ಅದ್ಭುತವಾದಮನೆಮದ್ದು ಅಂತ ಹೇಳಿದರೆ ತಪ್ಪಾಗಲಾರದು ಹಾಗೂ ಇದರ ಎಲೆಗಳನ್ನು ಬೇಯಿಸಿ ಬಿಸಿ ಇರುವಂತೆಯೇ ನೋವಿರುವ ಜಾಗದಲ್ಲಿ ಕಟ್ಟಿದರೆ ಜಾಯಿಂಟ್ ನೋವು ಕಡಿಮೆ ಮಾಡುತ್ತದೆ.
ಹಾಗೂ ಈ ಎಲೆಗಳನ್ನು ಬೇಯಿಸಿ ಹಬೆಯನ್ನು ತೆಗೆದು ಕೊಳ್ಳುವುದರಿಂದ ಶ್ವಾಸಕೋಶ ಕ್ಲಿಯರ್ ಆಗುತ್ತದೆ. ಉಸಿರಾಟದ ಸಮಸ್ಯೆಯನ್ನು ಕೂಡ ಪರಿಹರಿಸಲು ಸಹಾಯ ಮಾಡುತ್ತದೆ. ಮತ್ತು ಈ ಗಿಡದ ಎಲೆಗಳನ್ನು ಅರೆದು ಜೇನುತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ವನ್ನೂ ನಿವಾರಿಸುತ್ತದೆ. ಹಾಗೂ ಈ ಗಿಡದ ಒಣಗಿದ ಎಲೆಯನ್ನು ಬಳಕೆ ಮಾಡುವುದರಿಂದ ಕಾಮ ಉತ್ತೇಜನ ಔಷಧವಾಗಿ ಉಪಯೋಗಕ್ಕೆ ಬರುತ್ತದೆ. ಮತ್ತು ಸ್ತ್ರೀ ಪುರುಷರ ಗುಪ್ತಚರ ಆಸಕ್ತಿಗೆ ಈ ಗಿಡವೂ ಉತ್ತೇಜನ ಮಾಡುತ್ತದೆ ಹಾಗೂ ಸಂತಾನೋತ್ಪತ್ತಿ ಸಮಸ್ಯೆಯ ವಿಕಿರಣದಿಂದ ಉಂಟಾಗುವ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ನಾವು ತಿಳಿಸಿರುವ ಈ ಲಕ್ಕಿ ಗಿಡದ ಮಾಹಿತಿ ನಿಮ್ಮೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಇಷ್ಟವಾದರೆ ಶೇರ್ ಮಾಡಿ.