ನಮ್ಮ ಭಾರತ ದೇಶವನ್ನು ಸಾಂಬಾರು ಪದಾರ್ಥ ಗಳ ತವರೂರು ಎಂದು ಹೇಳಲಾಗುತ್ತದೆ. ಹಿಂದಿನಿಂದಲೂ ಭಾರತದಲ್ಲಿನ ಸಾಂಬಾರು ಪದಾರ್ಥಗಳು ವಿದೇಶಗಳಿಗೆ ರಫ್ತು ಆಗುತ್ತಿದ್ದವು. ಸಾಂಬಾರು ಪದಾರ್ಥಗಳಲ್ಲಿ ಇರುವ ಕೆಲವೊಂದು ಆರೋಗ್ಯಕರ ಗುಣಗಳು ನಮ್ಮ ಹಿರಿಯರ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ. ಪ್ರತಿಯೊಂದು ಸಾಂಬಾರಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳಿವೆ. ಇದರಲ್ಲಿ ಲವಂಗಗಳು ಕೂಡ ಒಂದು. ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಮತ್ತು ವ್ಯಾಪಕವಾಗಿ ಬಳಸಲಾಗುವ ಸಸ್ಯಗಳಲ್ಲಿ ಲವಂಗ ವು ಕೂಡ ಒಂದು.
ಅಡುಗೆ ಮನೆಯಲ್ಲಿ ಸಿಗುವ ಲವಂಗದಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆಯೆಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಲವಂಗ ದಲ್ಲಿ ಸೂಕ್ಷ್ಮಣು ವಿರುದ್ಧ ಗುಣಗಳಿವೆ. ಮತ್ತು ಇದು ಸೆಳೆತ ನಿಶ್ಯಕ್ತಿ ಮತ್ತು ಬೇದಿ ಉಂಟುಮಾಡುವ ಸೂಕ್ಷ್ಮ ನು ಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ. ಲವಂಗದಿಂದ ಬಾಯಿಯ ಆರೋಗ್ಯವೂ ಕೂಡ ಕಾಪಾಡಬಹುದು.
ಲವಂಗ ದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಗುಣಗಳು ಕೂಡ ಇವೆ. ಬಾಯಿ ಹುಣ್ಣು ಮತ್ತು ವಸಡುಗಲ ಹೂತವನ್ನು ನಿವಾರಿಸಲು ಇದು ಸೂಕ್ತವಾಗಿದೆ. ಲವಂಗದ ಎಣ್ಣೆಯನ್ನು ಹಲ್ಲು ನೋವಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಒಂದು ಸಣ್ಣ ತುಂಡು ಅತ್ತಿಗೆ ಮತ್ತು ಒಂದೆರಡು ಹನಿಗಳಷ್ಟು ಎಣ್ಣೆ ಹಾಕಿ ಹಲ್ಲುನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ಕೆಲವೇ ನಿಮಿಷಗಳಲ್ಲಿ ನೋವು ನಿವಾರಣೆಯಾಗುತ್ತದೆ.
ಮತ್ತು ಒಂದು ಹನಿ ಲವಂಗದ ಎಣ್ಣೆಯನ್ನು ನೇರವಾಗಿ ಟೂತ್ ಪೇಸ್ಟ್ ಹಾಕಿ ಹಲ್ಲುಜ್ಜುವುದರಿಂದ ಅಲ್ಲಿನ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಮತ್ತು ಸಕ್ಕರೆ ಕಾಯಿಲೆ ಇದ್ದವರಿಗೆ ಲವಂಗ ಒಳ್ಳೆಯದು. ಲವಂಗ ದಲ್ಲಿ ಇರುವಂತಹ ಕೆಲವೊಂದಿಷ್ಟು ಅಂಶಗಳು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಲವಂಗ ದಲ್ಲಿ ಇರುವಂತಹ ನೈಜೀರಿಯ ಎನ್ನುವ ಹಸ್ತವೂ ಮಧುಮೇಹಿಗಳಲ್ಲಿ ಇರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಯಾಕೆಂದರೆ ನೈಜೀರಿಯನ್ ಅಂಶವು ರಕ್ತದಲ್ಲಿನ ಸಕ್ಕರೆ ಯನ್ನು ಹೀರಿಕೊಳ್ಳುವ ಕೋಶಗಳ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ರಾತ್ರಿ ಮಲಗುವ ಮುನ್ನ ಲವಂಗವನ್ನು ತಿನ್ನುವುದು ಮತ್ತು ಬೆಚ್ಚಗಿನ ನೀರು ಕುಡಿಯುವುದು ಮಲಬದ್ಧತೆ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲವಂಗವನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ತಲೆನೋವು ನಿವಾರಣೆಗೆ ಸಹಾಯ ಮಾಡುತ್ತದೆ, ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೂ ಲವಂಗ ನಿಮಗೆ ಪ್ರಯೋಜನಕಾರಿಯಾಗುತ್ತದೆ.