WhatsApp Group Join Now

ಹೌದು ಕಿರುತೆರೆ ನಟ ಹಾಗು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತೆ ತಮ್ಮ ಫುಡ್ ಟ್ರಕ್ ಪ್ರಾರಂಭ ಮಾಡಿದ್ದಾರೆ ಈ ಮೊದಲು ಸಹ ಅವರು ಫುಡ್ ಟ್ರಕ್ ಮಾಡುತಿದ್ದರು ಆದರೆ ಲಾಕ್ ಡೌನ್ ಆದುದ್ದರಿಂದ ತಮ್ಮ ಫುಡ್ ಟ್ರಕ್ ಕ್ಲೋಸ್ ಮಾಡಿದ್ದರು ಆದರೆ ಇದೀಗ ಮತ್ತೆ ಹೊಸದಾಗಿ ಮತ್ತು ವಿನೂತನವಾಗಿ ತಮ್ಮ ಫುಡ್ ಟ್ರಕ್ ಓಪನ್ ಮಾಡಿದ್ದಾರೆ.

ತಮ್ಮ ಹಳೆಯ ಗಲ್ಲಿ ಕಿಚನ್ ಗಿಂತ ಹೊಸ ರೂಪ ಕೊಟ್ಟು ಹೊಸ ಗಲ್ಲಿ ಕಿಚನ್ ಬಂದಿದೆ ಈ ಹೊಸ ಗಲ್ಲಿ ಕಿಚನ್ ಓಪನ್ ಮಾಡಿದ್ದು ನಿರ್ದೇಶಕ ರಿಷಬ್ ಶೆಟ್ಟಿ ಈ ಹೊಸ ಗಲ್ಲಿ ಕಿಚನ್ ಉದ್ಘಾಟನೆ ಮಾಡಿದ್ದಾರೆ ಇನ್ನು ಈ ವಿಚಾರವನ್ನು ಶೈನ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಇನ್ನು ಈ ಸಮಯದಲ್ಲಿ ಶೈನ್ ಶೆಟ್ಟಿ ಗೆಳೆಯರು ಹಾಗು ಬಿಗ್ ಬಾಸ್ ಸ್ಪರ್ದಿಗಳು ಭಾಗಿಯಾಗಿದ್ದರು, ಈ ಸಮಯದಲ್ಲಿ ಶೈನ್ ತುಂಬ ಖುಷಿಯಾಗಿದ್ದರು ಇನ್ನು ಇವರು ಮೊದಲಿನಿಂದಲೂ ತುಂಬ ಕಷ್ಟ ಪಟ್ಟು ತಮ್ಮ ಜೀವನ ನೆಡೆಸುತಿದ್ದರು ಆದರೆ ಬಿಗ್ ಬಾಸ್ ವಿನ್ನರ್ ಆದಮೇಲೆ ಅವರ ಜೀವನ ಬದಲಾಗಿದೆ ಮತ್ತು ಅವರ ಸಿನಿಮಾ ಮಾಡುವ ಕನಸು ಸಹ ಸಾಕಾರಗೊಳ್ಳಲಿದೆ. ಇನ್ನು ಸದ್ಯಕ್ಕೆ ಶೈನ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಬಹುನಿರೀಕ್ಷೆಯ ಚಿತ್ರ ರುದ್ರ ಪ್ರಯಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

WhatsApp Group Join Now

Leave a Reply

Your email address will not be published. Required fields are marked *