ನಮಸ್ತೆ ಪ್ರಿಯ ಓದುಗರೇ, ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧ ನನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ಸಂತೋಷದ ಸಂಕೇತವಾಗಿದೆ ಮತ್ತು ಧನಾತ್ಮಕ ಕಂಪನಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಎಲ್ಲಾ ಒತ್ತಡಗಳನ್ನೂ ಕಡಿಮೆ ಮಾಡಬಹುದು. ಹಾಗಾಗಿ ಇಂದಿನ ಲೇಖನದಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಎಲ್ಲಿಡಬೇಕು? ಹೇಗಿಡಬೇಕು? ಎನ್ನುವುದನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಾವು ಲಾಫಿಂಗ್ ಬುದ್ಧನ ಮೂರ್ತಿ ನೋಡಿದ ತಕ್ಷಣ ನಗು ಒಂಥರಾ ಮನಸ್ಸಿಗೆ ಸಮಾಧಾನ, ಸಂತೋಷ ಆಗುತ್ತದೆ. ಯಾಕೆ ಈ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಡಬೇಕು? ಹಾಗೆ ಲಾಫಿಂಗ್ ಬುದ್ಧನ ಪ್ರತಿಮೆಗಳು ಹಲವಾರು ರೀತಿಯಲ್ಲಿ ವಿಧ ವಿಧ ವಾಗೀ ಇರುತ್ತವೆ. ಒಂದು ಲಾಫಿಂಗ್ ಬುದ್ಧ ತನ್ನ ಸುತ್ತ ಹಣದ ರಾಶಿ ಹಣದ ಚೀಲಗಳನ್ನು ಹೊಂದಿರುವ ಮೂರ್ತಿ ಆದರೆ, ಇನ್ನೊಂದು ಹಣದ ಚೀಲವನ್ನು ಹೊತ್ತು ತರುತ್ತಿರುವ ರೀತಿಯಲ್ಲಿ ಇರುತ್ತದೆ ಹಾಗೆ ಇನ್ನೊಂದು ಎಲ್ಲದಕ್ಕೂ ಅಸ್ತು ಅಸ್ತು ಎನ್ನುವ ನಗುತ್ತಿರುವ ಪ್ರತಿಮೆಯು ಒಂದು. ಹೀಗೆ ಹಲವಾರು ಪ್ರಕಾರಗಳಲ್ಲಿ ಸಿಗುವ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಹೇಗೆ ಯಾಕೆ ಯಾವ ಸ್ಥಳದಲ್ಲಿ ಇಟ್ಟರೆ ಐಶ್ವರ್ಯ ವೃದ್ಧಿ ಆಗುತ್ತದೆ ನೋಡೋಣ.
ನೀವು ಯಾರ ಮನೆಗೆ ಹೋದಾಗ ಬಾಗಿಲು ತೆಗೆದ ತಕ್ಷಣ ಯಾರೇ ಆಗಲಿ ನಗುತ್ತಾ ಬರ ಮಾಡಿಕೊಂಡರೆ ಎಷ್ಟು ಚಂದ ಅನಿಸುತ್ತದೆ. ಅದೇ ಗಂಟು ಮೂತಿ ಹಾಕಿ ಬಾಗಿಲು ತೆಗೆದರೆ ಯಾಕಾದ್ರೂ ಬಂದಿರುವೇನೋ ಅನ್ನಿಸುತ್ತದೆ. ಹಾಗಾಗಿ ಮನೆಯ ಬಾಗಿಲು ತೆಗೆದ ತಕ್ಷಣ ಎದುರಿಗೆ ಕಾಣುವ ಹಾಗೆ ನಗುತ್ತಿರುವ ಬುದ್ಧನನ್ನು ಇಟ್ಟರೆ ಮನೆಗೆ ಯಾರೇ ಬಂದರೂ ಅವರಿಂದ ಧನಾತ್ಮಕ ಕಂಪನಗಳು ಮೂಡುತ್ತವೆ. ಅವರು ಒಳ್ಳೆಯ ಮನೋಭಾವದಿಂದ ಬರುವ ಹಾಗೆ ಆಗುತ್ತದೆ. ಹಾಗೆಯೇ ಹಣದ ಚೀಲವನ್ನು ಹೊತ್ತು ತರುತ್ತಿರುವ ಬುದ್ಧನ ಪ್ರತಿಮೆಯನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ಹಣದ ಒಳ ಹರಿವು ಜಾಸ್ತಿ ಆಗುತ್ತದೆ. ಯಾಕಂದ್ರೆ ಕುಬೇರ ಮೂಲೆ ಅಂದ್ರೆ ಅದು ಉತ್ತರ ದಿಕ್ಕು. ಹಾಗಾಗಿ ಉತ್ತರ ದಿಕ್ಕಿನಲ್ಲಿ ಹಣ ಹೊತ್ತು ತರುತ್ತಿರುವ ಬುದ್ಧನ ಮೂರ್ತಿ ಇಟ್ಟರೆ ಕುಬೇರ ದೇವರು ಮನೆ ಒಳಗೆ ಹಣವನ್ನು ಹೊತ್ತು ತರುತ್ತಿರುವ ಭಾವನೆ ಮೂಡುತ್ತದೆ. ಹಾಗಾಗಿ ಮನೆಯ ಸಮೃದ್ಧಿ ಕೂಡ ಆಗುತ್ತದೆ. ಹಾಗೆಯೇ ಕುಬೇರ ಮೂಲೆ ಅಂತ ಹೇಳುವ ಉತ್ತರ ಹಾಗೂ ಈಶಾನ್ಯ ಮೂಲೆಯಲ್ಲಿ ನಿಮ್ಮ ಮನೆಯ ಸಂಪತ್ತು ಹಾಗೂ ಬೀರು, ಖಜಾನೆ ಇಟ್ಟರೆ ಒಳ್ಳೆಯದು ಹಾಗೆಯೇ ಹಣದ ರಾಶಿಯ ಮೇಲೆ ಕುಳಿತಿರುವ ಬುದ್ಧನ ಪ್ರತಿಮೆಯನ್ನು ಅಲ್ಲಿಟ್ಟರೆ ಸಂಪತ್ತು ಜಾಸ್ತಿ ಆಗುತ್ತದೆ. ಇದೆ ರೀತಿ ಬುದ್ಧ ಮಕ್ಕಳ ಜೊತೆ ಆಡುವ ಪ್ರತಿಮೆ ಕೂಡ ಇರುತ್ತದೆ, ಆ ಪ್ರತಿಮೆಯನ್ನು ಯಾರಿಗೆ ಮಕ್ಕಳು ಆಗಿಲ್ಲ ಅವರು ಅವರ ಮಲಗುವ ಕೊನೆಯಲ್ಲಿ ಇಟ್ಟುಕೊಂಡರೆ ನಿಮಗೆ ಉತ್ತಮ ಸಂತಾನ ಪ್ರಾಪ್ತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನೂ ಕೊನೆಯದಾಗಿ ಲಾಫಿಂಗ್ ಬುದ್ಧ ಅಸ್ತು ಅಸ್ತು ಎನ್ನುವ ಹಾಗೆ ಯಾವಾಗಲೂ ತಲೆ ಹಾಕುತ್ತಾ ಇರುವ ಬುದ್ಧನ ವಿಗ್ರಹ ಇದೆ. ಇದನ್ನು ಮನೆಯಲ್ಲಿ ನೀವು ಹೊರಡುವ ವೇಳೆ ಹೊರಗೆ ಹೋಗುವಾಗ ಕಾಣುವ ಹಾಗೆ ಇಟ್ಟು ನೀವು ಯಾವುದೋ ಒಳ್ಳೆಯ ಕೆಲಸಕ್ಕೆ ಹೋಗುವಾಗ ಈ ಬುದ್ಧನ ಮುಂದೆ ನಿಂತು ಅವತ್ತಿನ ದಿನ ಏನೆಲ್ಲಾ ಕೆಲಸಗಳು ಆಗಬೇಕು ಅವುಗಳನ್ನು ಬೇಡಿಕೊಂಡರೆ ಬುದ್ಧ ಅಸ್ತು ಅಸ್ತು ಎಂದು ಹೇಳಿ ನಿಮಗೆ ಶುಭ ಹಾರೈಸಿ ಕಳಿಸುತ್ತದೆ. ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಈಡೇರುತ್ತವೆ. ಆದರೆ ಇವೆಲ್ಲವುಗಳಿಗಿಂತ ಮುಖ್ಯವಾದದ್ದು ನಮ್ಮ ಮನಸ್ಸು ನಮ್ಮ ಸುಪ್ತ ಮನಸ್ಸು. ಏನೇ ಕೆಲಸ ಆಗಲು ಮಾಡಲು ನಮ್ಮ ಒಳ ಮನಸ್ಸು ಭದ್ರವಾಗಿ ಅತ್ಯಂತ ಶಕ್ತಿಯುತವಾದ ಧೃಢ ನಿರ್ಧಾರ ಮುಖ್ಯ. ಅದೊಂದು ನಿಮ್ಮ ಮನಸಲ್ಲಿ ಗಟ್ಟಿಯಾಗಿ ಅಂದುಕೊಂಡರೆ ಎಲ್ಲ್ಲಾ ಕೆಲಸಗಳು ಈಡೇರುತ್ತವೆ. ಲಾಫಿಂಗ್ ಬುದ್ಧ ಈ ದಿಕ್ಕುಗಳ ಪ್ರಭಾವ ಹೊರಗಿನಿಂದ ಆದರೆ ನಮ್ಮ ಧೃಢ ಮನಸ್ಸು ಮಾತ್ರ ಆ ಕೆಲಸಗಳು ಆಗೇ ಆಗುತ್ತದೆ. ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಂದು ಮನೆಯಲ್ಲಿ ಇಟ್ಟು ನೀವೇನೋ ಪ್ರಯತ್ನ ಮಾಡದೆ ಕುಳಿತು, ಹಣ ಬರುತ್ತಿಲ್ಲ ಎಂದರೆ ಅದು ತಪ್ಪು, ಇವೆಲ್ಲವುಗಳ ಜೊತೆ ನಿಮ್ಮ ನೀಯತ್ತಿನ ಪ್ರಯತ್ನ ಕೂಡ ಬಹಳ ಮುಖ್ಯ. ನೋಡಿದ್ರಲ್ವ ಸ್ನೇಹಿತರೆ ಯಾವ ರೀತಿಯ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಹೇಗೆ ಯಾವ ದಿಕ್ಕಿನಲ್ಲಿ ಇಟ್ಟರೆ ಹಣದ ಹರಿವು ಜಾಸ್ತಿ ಆಗುತ್ತದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.