WhatsApp Group Join Now

ನಮಸ್ತೆ ಪ್ರಿಯ ಓದುಗರೇ, ನಾವು ನಮ್ಮ ಆರೋಗ್ಯವನ್ನು ಸೌಂದರ್ಯವನ್ನು ಸುಂದರವಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಲು ತುಂಬಾನೇ ಕಾಳಜಿಯನ್ನು ವಹಿಸುತ್ತೇವೆ ಹಾಗೆಯೇ ಕೂದಲಿನ ಬಗ್ಗೆ ಕಾಳಜಿ ವಹಿಸುವುದು ಕೂಡ ಅಷ್ಟೇ ಅತ್ಯವಶ್ಯಕವಾಗಿದೆ. ಸಾಮಾನ್ಯವಾಗಿ ವಯಸ್ಸಾದ ಮೇಲೆ ಎಲ್ಲರ ಕೂದಲು ಬೆಳ್ಳಗೆ ಆಗುವುದು ಸಹಜವಾದ ಸಂಗತಿಯಾದರೂ ಕೂಡ ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗೆ ಆದ್ರೆ ಇದು ತುಂಬಾನೇ ಇರ್ರಿಟೇಶನ್ ಮಾಡಿಸುತ್ತದೆ, ಮುಜುಗರ ತರಿಸುತ್ತದೆ. ಹಾಗೆಯೇ ಸಾಮಾನ್ಯವಾಗಿ ಸುಂದರವಾದ ಕೂದಲು ಉದ್ದವಾದ ದಟ್ಟವಾದ ಕೂದಲು ಇರಬೇಕು ಅಂತ ಯಾರೂ ಇಷ್ಟ ಪಡುವುದಿಲ್ಲ ಹೇಳಿ ಎಲ್ಲರಿಗೂ ಇಷ್ಟವೇ ಆಗುತ್ತದೆ ಆದರೆ ಈಗಿನ ಆಧುನಿಕ ಯುವಕ ಯುವತಿಯರಲ್ಲಿ ಬಿಳಿ ಕೂದಲು ಇಲ್ಲ ಅಂತ ನೀವೇನಾದರೂ ಷರತ್ತು ಕಟ್ಟಿದರೆ ಸೋಲು ನಿಮ್ಮದಾಗುತ್ತದೆ. ತಾತ್ಪರ್ಯ ಬಾಲ್ಯದಲ್ಲಿಯೇ ಬಿಳಿ ಕೂದಲು ಬರಲು ಶುರು ಆಗುತ್ತಿದೆ. ಇದು ವ್ಯಕ್ತಿಯ ಅಂದವನ್ನು ಹಾಳು ಮಾಡುವುದರ ಜೊತೆಗೆ ಸಮಾಜದಲ್ಲಿ ನಮಗೆ ತುಂಬಾನೇ ಮುಜುಗರ ಆಗುತ್ತದೆ. ಜೊತೆಗೆ ಬಿಳಿ ಕೂದಲು ಆಗುವುದಕ್ಕೆ ಇಂತಿಷ್ಟು ವಯಸ್ಸು ಅಂತ ಏನು ಇರುವುದಿಲ್ಲ.

ಕೆಲವರಿಗೆ ಹದಿಹರೆಯ ವಯಸ್ಸಿನಲ್ಲಿ ಕೂದಲು ಬೆಳ್ಳಗಾದರೆ ಇನ್ನೂ ಕೆಲವರಿಗೆ ನಲವತ್ತು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತದೆ. ಕೇಶ ವಿನ್ಯಾಸ ಮತ್ತು ಫ್ಯಾಷನ್ ಯುಗಕ್ಕೆ ಹೊಂದಿಕೊಂಡ ಯುವಜನತೆ ಕೆಮಿಕಲ್ ಯುಕ್ತ ಪ್ರೊಡಕ್ಟ್ ಗಳ ಬಳಕೆಯನ್ನು ಹೆಚ್ಚಾಗಿ ಮಾಡಿ ಮತ್ತಷ್ಟು ಕೂದಲು ಬೆಳ್ಳಗೆ ಆಗುವಂತೆ ಮಾಡಿಕೊಳ್ಳುತ್ತಿದ್ದಾರೆ.ಹಾಗಾಗಿ ನಾವು ಸಾಧ್ಯವಾದಷ್ಟು ನೈಸರ್ಗಿಕವಾದ ಮನೆಮದ್ದುಗಳು ಉಪಯೋಗ ಮಾಡುವುದು ಒಳಿತು. ಮೊದಲಿಗೆ ಆ ಮನೆಮದ್ದು ಯಾವುದು ಅಂತ ತಿಳಿಯೋಣ. ನಾವು ತಿಳಿಸುವ ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮ್ಮ ಕೂದಲು ಬುಡದಿಂದ ಕಪ್ಪಗೆ ಆಗುತ್ತದೆ ಮುಖ್ಯವಾಗಿ ನಿಮ್ಮ ಕೂದಲು ಉದುರುವುದು ಸಾಧ್ಯವಾದಷ್ಟು ನಿಲ್ಲುತ್ತದೆ. ಅದುವೇ ಟೀ ಪೌಡರ್. ಸಾಮಾನ್ಯವಾಗಿ ಚಹಾ ಕಾಫಿ ಟೀ ಮಾಡಲು ಟೀ ಪುಡಿಯನ್ನು ಬಳಕೆ ಮಾಡುತ್ತೇವೆ. ಈ ಟೀ ಪುಡಿ ಕೂದಲಿನ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮುಖದ ಸೌಂದರ್ಯವನ್ನು ಕೂಡ ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಕೆಲವರಿಗೆ ಕೂದಲು ಬುಡದಿಂದ ಬೆಳ್ಳಗೆ ಆಗುತ್ತಿರುತ್ತದೆ. ಈ ಟೀ ಪುಡಿ ಕೂದಲು ಕಪ್ಪಗೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಟೀ ಪುಡಿಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತ್ರ ಕಾಫೀ ಪುಡಿ ತೆಗೆದುಕೊಳ್ಳಿ. ಇದು ಕೂದಲಿಗೆ ಒಳ್ಳೆಯ ಬಣ್ಣವನ್ನು ನೀಡುತ್ತದೆ. ಅಲ್ಲದೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ತಲೆಯಲ್ಲಿ ಹೇನು ಆದರೆ ಹೊಟ್ಟು ಆದರೆ ಅದೆಲ್ಲವನ್ನೂ ನಿವಾರಣೆ ಮಾಡುತ್ತದೆ. ಕೂದಲು ವೇಗವಾಗಿ ಬೆಳೆಯುವಂತೆ ಮಾಡುತ್ತದೆ.

ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಈ ಕಾಫೀ ಪೌಡರ್. ನಂತ್ರ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ನಂತ್ರ ಅದರಲ್ಲಿ ನಿಂಬೆರಸವನ್ನು ಹಿಂಡಿ ಚೆನ್ನಾಗಿ ಕಲಕಿ ತದ ನಂತರ ಟೀ ಪುಡಿ ಮತ್ತು ಕಾಫೀ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಬಿಸಿ ನೀರಿನ ಪಾತ್ರೆಯಲ್ಲಿ ಈ ಬಟ್ಟಲನ್ನು ಇಟ್ಟು ಸ್ವಲ್ಪ ಬಿಸಿ ಮಾಡಿ. ಏಕೆಂದರೆ ಇದರಲ್ಲಿ ಇರುವ ಎಲ್ಲ ಸಾಮಗ್ರಿಗಳು ಚೆನ್ನಾಗಿ ಮಿಕ್ಸ್ ಮಾಡುತ್ತದೆ. ನಂತ್ರ ಇದನ್ನು ನೀವು ಸೋಸಿಕೊಳ್ಳಿ. ನಂತರ ನೀವು ಕೂದಲನ್ನು ಚೆನ್ನಾಗಿ ಬಾಚಿಕೊಂಡು ಈ ಎಣ್ಣೆಯನ್ನು ಬುಡದಿಂದ ತುದಿಯವರೆಗೂ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಕೂದಲು ಬುಡದಿಂದ ಕಪ್ಪಗೆ ಆಗಲು ಶುರು ಆಗುತ್ತದೆ. ವಾರದಲ್ಲಿ ಎರಡು ಬಾರಿ ಪ್ರಯತ್ನ ಮಾಡಿ ನೋಡಿ. ಖಂಡಿತವಾಗಿ ಪರಿಹಾರ ಸಿಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *