ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ದೇಗುಲಗಳನ್ನು ವರ್ಷವಿಡೀ ಸಂದರ್ಷಿಸಬಹುದು. ಆದರೆ ಈ ದೇವಸ್ಥಾನವನ್ನು ಸಂದರ್ಷಿಸಬೇಕು ಎಂದರೆ ಅದಕ್ಕೆ ಅಶ್ವಯುಜ ಮಾಸವೆ ಬರಬೇಕು. ಅತ್ಯಂತ ಶಕ್ತಿಶಾಲಿಯಾದ ಈ ದೇವಿಯು ವರ್ಷದಲ್ಲಿ 10-12 ದಿನಗಳು ಮಾತ್ರ ಭಕ್ತರಿಗೆ ದರ್ಶನ ನೀಡ್ತಾಳಂತೆ. ಅಲ್ಲದೇ ಈ ಕ್ಷೇತ್ರದಲ್ಲಿರುವ ಪುಟ್ಟದಾದ ಕಲ್ಲು ಪ್ರತಿ ವರ್ಷ ಭತ್ತದ ಕಾಳಿನಷ್ಟು ಬೆಳೆಯುತ್ತಂತೆ. ಹೀಗೆ ಅನೇಕ ವಿಶೇಷತೆಗಳಿಂದ ಕೂಡಿದ ದೇವಸ್ಥಾನವಾದರೂ ಯಾವುದು, ಅದ್ರ ವಿಶೇಷತೆಗಳೇನು ಎಂದು ಇಂದಿನ ಲೇಖನದಲ್ಲಿ ತಿಳಿಸಿಕೊಡ್ತೀವಿ. ಶಿಲ್ಪ ಕಲೆಗಳ ತವರೂರಾದ ಹಾಸನ ಎಂಬ ಹೆಸರು ಬಂದಿದ್ದು ಈ ಊರಿನಲ್ಲಿ ನೆಲೆಸಿದ ಹಾಸನಾಂಬೆಯಿಂದಲೇ ಎನ್ನಲಾಗುತ್ತದೆ. ಹಾಸನಾಂಬೆ ದೇವಸ್ಥಾನವನ್ನು ಪ್ರತಿ ವರ್ಷ ಆಶ್ವಯುಜ ಮಾಸ ಕಳೆದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ಬಾಗಿಲು ತೆಗೆಯಲಾಗುತ್ತದೆ. ಈ ದೇವಿಯ ದರ್ಶನ ವರ್ಷದಲ್ಲಿ 10-12 ದಿನಗಳು ಮಾತ್ರ ಮಾಡಬಹುದು ಎನ್ನುವುದೇ ಈ ದೇವಸ್ಥಾನದ ವೈಶಿಷ್ಟ್ಯತೆ. ಈ ದೇವಸ್ಥಾನದ ಬಾಗಿಲು ತೆರೆದ ನಂತರ ಆ ಪ್ರದೇಶದ ಯಾರ ಮನೆಯಲ್ಲಿಯೂ ಅಡುಗೆಯ ಒಗ್ಗರಣೆ ಹಾಕುವಂತಿಲ್ಲ ಎಂಬ ಪ್ರತೀತಿ ಇದೆ. ಒಂದುವೇಳೆ ಒಗ್ಗರಣೆ ಹಾಕಿದರೆ ದೇವಿಗೆ ಕಣ್ಣು ತೆರೆಯಲು ಆಗುವುದಿಲ್ಲ ಎಂಬುದು ಈ ಊರಿನ ಜನರ ನಂಬಿಕೆ ಇದ್ದು ಈ ಪದ್ಧತಿ ತಲತಾಂತರದಿಂದಲೂ ನಡೆದುಕೊಂಡು ಬಂದಿದೆ. ಇನ್ನೂ ಹಾಸನಾಂಬೆಯು ಈ ಕ್ಷೇತ್ರದಲ್ಲಿ ನೆಲೆ ನಿಂತಿದ್ದಕ್ಕೆ ಪುರಾಣದ ಕಥೆಗಳು ಇವೆ.
ಬಳಹ ಹಿಂದೆ ಸಪ್ತಮಾತ್ರುಕೆಯರು ಕಾಶಿ ಇಂದ ದಕ್ಷಿಣದ ಕಡೆ ಆಕಾಶದ ಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ಈ ಸ್ಥಳದ ಪ್ರಶಾಂತ ವಾತಾವರಣಕ್ಕೆ ಮನಸೋತು ಇಲ್ಲಿಯೇ ನೆಲೆಸಿದರು ಎಂದು ಹೇಳಲಾಗುತ್ತದೆ. ಮಹೇಶ್ವರಿ, ಕೌಮಾರಿ, ಬ್ರಾಹ್ಮೀ ದೇವಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ಎಂಬ ಹೆಸರಿನ ಸಪ್ತಮಾತ್ರುಕೆಯರಲ್ಲಿ ಮಹೇಶ್ವರಿ, ಕೌಮಾರೀ, ವೈಷ್ಣವಿಯು ಹುತ್ತದ ರೂಪದಲ್ಲಿ ದೇಗುಲದಲ್ಲಿ ನೆಲೆಸಿದ್ರೆ, ವಾರಾಹಿ, ಇಂದ್ರಾಣಿ ಹಾಗೂ ಚಾಮುಂಡಿ ದೇವಿಯು ನಗರದ ಮಧ್ಯ ಭಾಗದಲ್ಲಿ ಕೆರೆಯಲ್ಲಿ ನೆಲೆಸಿದ್ದಾರೆ. ಇನ್ನೂ ಬ್ರಾಹ್ಮೀ ದೇವಿಯು ಹಾಸನದಿಂದ 35 ಕಿಮೀ ದೂರದಲ್ಲಿ ಕೆಂಚಮ್ಮಳಾಗಿ ನೆಲೆಸಿದಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಈ ದೇವಾಲಯವನ್ನು ವರ್ಷದಲ್ಲಿ ಒಂದು ಬಾರಿ ಅಷ್ಟೇ ಯಾಕೆ ತೆರೆಯಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಇಲ್ಲಿನ ಸ್ಥಳ ಐತಿಹ್ಯದಲ್ಲಿ ಕಾರಣ ಇದೆ. ಬಹಳ ಸಮಯದ ಹಿಂದೆ ದೇವಾಲಯದ ಸುತ್ತ ಮುತ್ತ ಇದ್ದ ಮನೆಗಳಲ್ಲಿ ಮಹಿಳೆಯರು ಒಣ ಮೆಣಸಿನಕಾಯಿ ಖಾರವನ್ನು ಕಟ್ಟುತ್ತಿದ್ದರಂತೆ. ಆಗ ದೇವಿಯ ಕಣ್ಣಲ್ಲಿ ಗಳಗಳನೆ ನೀರು ಬರುತ್ತಿತ್ತಂತೆ ಇದನ್ನು ನೋಡಿದ ಜನರು ತಾಯಿಯ ಕಣ್ಣಲ್ಲಿ ನೀರು ತರಿಸಬಾರದು ಎಂಬ ಕಾರಣದಿಂದ ಬಾಗಿಲು ಮುಚ್ಚಿದರು, ಹಾಗೂ ದೇವಾಲಯದ ಬಾಗಿಲನ್ನು ವರ್ಷದಲ್ಲಿ ಒಮ್ಮೆ ತೆರೆಯಲು ಶುರು ಮಾಡಿದ್ರು. ಇದು ಇಂದಿಗೂ ತಲತಾಂತರದಿಂದ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ವಿಶೇಷತೆ ಏನಂದ್ರೆ ಗರ್ಭಗುಡಿಯ ಎದಿರುಗೆ ಇಂದು ಪುಟ್ಟದಾದ ಕಲ್ಲು ಇದ್ದು, ಈ ಕಲ್ಲನ್ನು ಸೊಸೆ ಕಲ್ಲು ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ಭತ್ತದ ಕಾಲಿನಷ್ಟು ಬೆಳೆಯುವ ಈ ಕಲ್ಲು ದೇವಿಯನ್ನು ಸ್ಪರ್ಶಿಸಿದಾಗ ಕಲಿಯುಗ ಅಂತ್ಯವಾಗುವುದು ಎಂದು ಹೇಳುತ್ತಾರೆ. ಈ ಸೊಸೆ ಕಲ್ಲು ಹುಟ್ಟಿದ್ದರ ಹಿಂದೆ ಒಂದು ಜಾನಪದ ಕತೆ ಇದೆ.
ಬಹಳ ಹಿಂದೆ ದೈವೀ ಸೊಸೆಯು ಅತ್ತೆಯ ಕಾಟದಿಂದ ಮುಕ್ತಿ ಹೊಂದಲು ಈ ದೇವಿಯ ಹತ್ತಿರ ಬರುತ್ತಿದ್ದಳಂತೆ. ಒಂದು ದಿನ ಸೊಸೆಯನ್ನು ಹಿಂಬಾಲಿಸಿಕೊಂಡು ಬಂದ ಅತ್ತೆಯು ದೇವಿಯ ಧ್ಯಾನದಲ್ಲಿ ಮಗ್ನಳಗಿದ್ದ ಸೊಸೆಯನ್ನು ಕಂಡು ನಿಂಗೆ ಮನೆಯ ಕೆಲಸಕ್ಕಿಂತ ದೇವಿಯ ದರ್ಶನವೇ ಹೆಚ್ಚಾಯಿತಾ? ಎಂದು ಅಲ್ಲೇ ಇದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ಸೊಸೆಯ ತಲೆಗೆ ಕುಟ್ಟಿ ದಲಂತೆ ಸೊಸೆಯು ನೋವು ತಾಳಲಾಗದೆ ಅಮ್ಮ ಹಾಸನಾಂಬೆ ಕಾಪಾಡು ಎಂದು ಭಕ್ತಿಯಿಂದ ಕೂಗಿದಾಗ ಮಾತೃ ಹೃದಯಿ ಆದ ಹಾಸನಾಂಬೆಯು ಮಗಳೇ ನಿನ್ನ ಭಕ್ತಿಗೆ ಮೆಚ್ಚಿ ನಿನ್ನನ್ನು ಕಲ್ಲಾಗಿ ಮಾಡುತ್ತೇನೆ. ನೀನು ನನ್ನ ಮುಂದೆಯೇ ಕಲ್ಲಾಗಿ ಧ್ಯನಿಸು ಎಂದು ವರವನ್ನು ನೀಡಿದಲಂತೆ. ಇಷ್ಟೇ ಅಲ್ಲದೆ ತಾಯಿಯ ಆಭರಣಗಳನ್ನು ಕದಿಯಲು ಬಂದ ನಾಲ್ಕು ಕಳ್ಳರನ್ನು ತಾಯಿಯು ಶಾಪ ಕ್ಕೊಟ್ಟು ಕಲ್ಲು ಮಾಡಿದಳು ಎಂದು. ಇಂದಿಗೂ ಆ ನಾಲ್ಕು ಕಲ್ಲುಗಳನ್ನು ನೋಡಬಹುದು. ಈ ಕ್ಷೇತ್ರದ ಅಚ್ಚರಿ ಏನೆಂದರೆ,ಗರ್ಭ ಗುಡಿಯ ಬಾಗಿಲು ಹಾಕುವ ಮುನ್ನ ದೇವಿಗೆ ದೀಪ ಹಚ್ಚಿ, ತಾಯಿಗೆ ಬಳೆ,ಹೂವು ಹಾಗೂ ನೈವೇದ್ಯವನ್ನ ಅರ್ಪಿಸಿ ಬಾಗಿಲು ಮುಚ್ಚಲಾಗುತ್ತದೆ, ದೇವಿಯ ಪವಾಡ ಎನ್ನುವಂತೆ ಮುಂದಿನ ವರ್ಷ ಬಾಗಿಲು ತೆರೆಯುವ ವರೆಗೆ ಉರಿಸಿದ ದೀಪ ಆರೋದಿಲ್ಲ, ದೇವಿಗೆ ಮುಡಿಸಿದ ಹೂವು ಬಾಡೋದಿಲ್ಲ ಎನ್ನುವುದೇ ಈ ದೇವಿಯ ಕ್ಯಾತಿಗೆ ಕಾರಣವಾಗಿದೆ. ಯಾರು ಭಯ ಭಕ್ತಯಿಂದ ಈ ದೇವಿಯಲ್ಲಿ ನಂಬಿಕೆ ಇಟ್ಟು ಬೇಡಿಕೊಳ್ತಾರೋ ಅವರ ಮನದ ಆಕಾಂಕ್ಷೆ ಪೂರ್ಣ ಮಾಡ್ತಾಳೆ ಎಂಬುದು ಅನೇಕ ಜನರ ಮನದ ಮಾತಾಗಿದ್ದು, ದೇವಸ್ಥಾನದ ಬಾಗಿಲು ತೆಗೆದಾಗ ದೇವಾಲಯವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗುತ್ತದೆ. ಹಿಂದಿನ ವರ್ಷ ಹಾಸ್ನಂಬೆಯ ದೇವಾಲಯವನ್ನು ನವೆಂಬರ್ 5 ರಿಂದ ನವೆಂಬರ್ 16 ವರೆಗೆ ತೆರೆಯಲಾಗಿತ್ತು. ಅತ್ಯಂತ ಶಕ್ತಿಶಾಲಿಯಾದ ಈ ದೇವಿಯ ದರ್ಶನವನ್ನು ಜೀವಮಾನದಲ್ಲಿ ಒಮ್ಮೆಯಾದರೂ ನೀವೂ ಮಾಡಿ ಪುನೀತರಾ ಗಿ ಎಂದು ಹೇಳಬಹುದು. ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.