ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಶಾಂತಿ ನೆಲೆಸಲು ನಾವು ಹಲವಾರು ಪೂಜೆ ಹಾಗೂ ಹೋಮಗಳನ್ನು ಮಾಡುತ್ತೇವೆ. ಒಳ್ಳೆಯದು ಆದರೆ ಅಷ್ಟೇ ಸಾಲದು ಅದರ ಜೊತೆ ವಾಸ್ತುಶಾಸ್ತ್ರದ ಕೆಲವು ಆಚರಣೆಗಳನ್ನು ಮಾಡಬೇಕಾಗುತ್ತದೆ ವಾಸ್ತುಶಾಸ್ತ್ರ ನಮ್ಮ ಭಾರತದ ಹೆಮ್ಮೆಯ ಶಾಸ್ತ್ರ. ಇದು ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಿ ದೈವ ಶಕ್ತಿಯನ್ನು ಬರಮಾಡಿಕೊಳ್ಳಲು ಸಹಾಯವಾಗುತ್ತದೆ. ವಾಸ್ತುಶಾಸ್ತ್ರವು ನಮ್ಮ ಮನೆಯಲ್ಲಿ ಒಂದು ಲಾಪಿಂಗ್ ಬುದ್ಧ ವನ್ನು ಇಡಲು ಹೇಳುತ್ತದೆ.
ಅದು ಏಕೆ ಎಂಬುದನ್ನು ಈ ಮಾಹಿತಿಯ ಮೂಲಕ ನಾವು ನಿಮಗೆ ತಿಳಿಸಿಕೊಡುತ್ತೇವೆ. ಶಾಂತಿ ಮತ್ತು ಸೌಹಾರ್ದತೆ ನಡೆಸಲು ಮನೆಯ ಪೂರ್ವದಿಕ್ಕಿನಲ್ಲಿ ಲಾಫಿಂಗ್ ಬುದ್ಧನನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ನಡೆಯುವ ಜಗಳಗಳು ಅಶಾಂತಿ ಮನಸ್ತಾಪಗಳು ನಿಂತು ಮನೆಯಲ್ಲಿ ಉತ್ತಮ ನಂಬಿಕೆ ಸೌಹಾರ್ದತೆ ಮೂಡುತ್ತದೆ. ಕೆಲಸ ಸಿಗದೆ ಪರದಾಡುತ್ತಿದ್ದಾರೆ ಇನ್ನು ಇದೆ ಲಾಫಿಂಗ್ ಬುದ್ಧನನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಎಷ್ಟೇ ಕಷ್ಟಪಟ್ಟರೂ ಕೆಲಸ ಸಿಗದೆ ಇರುವ ನಿಮ್ಮ ಮನೆಯ ಸದಸ್ಯರಿಗೆ ಉತ್ತಮ ಉದ್ಯೋಗ ಭಾಗ್ಯ ಸಿಗುತ್ತದೆ.
ವೃತ್ತಿ ಜೀವನ ಉತ್ತಮವಾಗಿರಲು ನಿಮ್ಮ ವೃತ್ತಿ ಜೀವನ ಅಂದರೆ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಅಪನಂಬಿಕೆ ಅಥವಾ ಅಶಾಂತಿಯ ಸಮಸ್ಯೆ ಕಾಡುತ್ತಿದ್ದರೆ ಅದನ್ನೆಲ್ಲ ಮೀರಿ ಜೀವನದಲ್ಲಿ ಯಶಸ್ಸನ್ನು ಕಾಣಲು ಲಾಫಿಂಗ್ ಬುದ್ಧನನ್ನು ನಿಮ್ಮ ಮನೆಗೆ ಬರುವ ಎಲ್ಲಾ ಅತಿಥಿಗಳಿಗೆ ಕಾಣುವಂತಿರಬೇಕು. ಇದರಿಂದ ನಿಮ್ಮ ಮನೆಯ ಕೆಟ್ಟ ಶಕ್ತಿ ಹೊರಹೋಗುತ್ತದೆ. ನೆನಪಿಡಿ ಕೈಯಿಟ್ಟಿರುವ ಲಾಫಿಂಗ್ ಬುದ್ಧನನ್ನು ಉಡುಗೊರೆಯಾಗಿ ಪಡೆಯತಕ್ಕದ್ದು. ಹಾಗೂ ಹಣ ಪಾವತಿ ಮಾಡಿ ತರುವುದಕ್ಕಿಂತ ಉಡುಗೊರೆ ರೂಪದಲ್ಲಿ ಬಂದರೆ ಒಳ್ಳೆಯದು. ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.