ಮನೆಯ ಮುಂದಿನ ಸೌಂದರ್ಯಕ್ಕಾಗಿ ಅಥವಾ ಹಿಂಪಾದ ಸಂಗೀತಕ್ಕಾಗಿ ಅದನ್ನು ಮನೆಯ ಮುಂದೆ ಕಟ್ಟುತ್ತಾರೆ ಅನ್ನೋದು ಸಾಮಾನ್ಯವಾಗಿ ಯಲ್ಲರು ತಿಳಿದಿರುವ ವಿಷಯ ಆದರೆ ನಾವು ಈಗ ನಿಮ ವಿಂಡ್ ಬೆಲ್ ಬಗ್ಗೆ ತಿಳಿಸುವ ಉಪಯೋಗಗಳು ಬಹುಷಃ ತಿಳಿಯದೆ ಇರಬಹುದು ಒಮ್ಮೆ ಓದಿ.
ವಿಂಡ್ ಬೆಲ್ ನಲ್ಲಿ ತುಂಬಾ ವಿಧಗಳಿವೆ ಅದರಲ್ಲಿ ನೀವು ಯಾವುದನ್ನು ಮನೆಯ ಮುಂದೆ ಕಟ್ಟಿದರು ಮನೆಯೊಳಗೆ ಕೆಟ್ಟ ಅಥವಾ ದುಷ್ಟ ಶಕ್ತಿಗಳು ಬರುವುದಿಲ್ಲ.
ಗಾಳಿ ಘಂಟೆಯನ್ನು ಮನೆಯ ಪಶ್ಚಿಮದಲ್ಲಿ ಕಟ್ಟಿದರೆ ಮನೆಯಲ್ಲಿ ಶುಭವಾಗುತ್ತದೆ ಹಾಗು ಉತ್ತರದಲ್ಲಿ ಕಟ್ಟಿದರೆ ಉದ್ಯಗಾವಕಾಶ ಸಿಗುತ್ತದೆ ಎಂದು ನಂಬಲಾಗಿದೆ.ಗಾಳಿ ಗಂಟೆ ಪ್ರತಿಸಲಿ ಶಬ್ದ ಮಾಡಿದಾಗಲೂ ನಿಮ್ಮ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚುತ್ತದೆ.
ಯಾವಕಾರಣಕ್ಕೂ ಐದು ರಾಡ್ ಇರುವ ಗಾಳಿ ಘಂಟೆಯನು ಮಾತ್ರ ಮನೆಗೆ ತರಬೇಡಿ ಇದರ ಶಬ್ದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ.ಮುಖ್ಯವಾಗಿ ನೀವು ಕೆಲಸ ಮಾಡುವ ಅಥವಾ ಊಟ ಮಾಡುವ ಅಥವಾ ಮಲಗುವ ಸ್ಥಳದಲ್ಲಿ ಕಟ್ಟಬಾರದು.
ಗಾಳಿ ಬಂದಾಗ ಮೆಲ್ಲಗೆ, ಮಧುರ ಶಬ್ಧ ಕೇಳಿಸೋ ವಿಂಡ್ ಬೆಲ್ ಮನೆಯಲ್ಲಿದ್ದರೆ, ಮನಸ್ಸಿಗೇನೋ ನೆಮ್ಮದಿ. ಫೆಂಗ್ಶ್ಯೂ ಪ್ರಕಾರ ಇಂಥದ್ದೊಂದು ಬೆಲ್ ಮನೆನಲ್ಲಿದ್ದರೆ ಶುಭವೂ ಹೌದು. ದುಷ್ಟ ಶಕ್ತಿಯನ್ನೂ ಓಡಿಸುವ ಇಂಥದ್ದೊಂದು ಬೆಲ್ ಮನೆಯಲ್ಲಿ ಏಕಿರಬೇಕು?
ಫೆಂಗ್ಶ್ಯೂ ಪ್ರಕಾರ 6,7,8 ಮತ್ತು 9 ರಾಡ್ ಜೊತೆ ಗಂಟೆಯಿರುವ ಗಾಳಿ ಗಂಟೆಯನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ.7 ಮತ್ತು 8 ರಾಡ್ ಇರುವ ಗಾಳಿಗಂಟೆ ಹಾಕುವುದರಿಂದ ಮನೆಗೆ ಸಂಪತ್ತು ಬರಲಿದೆ.2 ರಿಂದ 9 ರಾಡ್ ಇರುವ ಚೈಮ್ನ್ನು ಲೀವಿಂಗ್ ರೂಮ್ನ ದಕ್ಷಿಣ ಪಶ್ಚಿಮ ಭಾಗದಲ್ಲಿಟ್ಟರೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ.
ಐದು ರಾಡ್ ಇರುವ ಗಾಳಿಗಂಟೆ ಮನೆಗೆ ನಕರಾತ್ಮಕ ಶಕ್ತಿ ಪ್ರವೇಶವಾಗುವ ಸಾಧ್ಯತೆ ಇದೆ. ಬಾಗಿಲಿಗೆ ತಾಗುವಂತೆ ವಿಂಡ್ಚೈಮ್ ಯಾವತ್ತೂ ಇಡಬೇಡಿ. ಅಲ್ಲದೆ ನೀವು ಕುಳಿತುಕೊಳ್ಳುವ, ಮಲಗುವ ಹಾಗೂ ಕೆಲಸ ಮಾಡುವ ಜಾಗದಲ್ಲೂ ತೂಗಿಸಬೇಡಿ.