ಶೀತ ಕಾಲದಲ್ಲಿ ವೀಳೇದೆಲೆಯನ್ನು ಅಡಿಕೆ, ಸುಣ್ಣದೊಂದಿಗೆ ಬಳಸುವುದರಿಂದ ದೇಹವು ಶಾಖದಿಂದಿಡುವುದು. ಬಾಯಲ್ಲಿ ಬರುವ ದುರ್ಗಂಧವನ್ನು ದೂರ ಮಾಡುವುದು ಮತ್ತು ವೀಳೇದೆಲೆಯ ಸೇವನೆ ಯಿಂದ ರಕ್ತದ ಒತ್ತಡ ಮತ್ತು ಹೃದ್ರೋಗಗಳು ವಾಸಿ ಆಗುತ್ತವೆ.
ವೀಳೇದೆಲೆಯೊಂದಿಗೆ ಲವಂಗ ಹಾಗು ಪಚ್ಚಕರ್ಪುರವನು ಸೇರಿಸಿ ಬಳಸುವುದರಿಂದ ಕೆಮ್ಮು ದಮ್ಮು ರೋಗ ಕಡಿಮೆ ಆಗುವುದು. ವೀಳೇದೆಲೆಯೊಂದಿಗೆ ಕರಿಮೆಣಸು ಹಾಗು ಒಂದು ಹರಳಿನಷ್ಟು ಉಪ್ಪು ಸೇರಿಸಿಕೊಂಡು ತಿನ್ನುವುದರಿಂದ ಕಫಾ ದೋಷವು ನಿವಾರಣೆ ಆಗುವುದು.
ತಾಂಬೂಲ ರೂಪದಲ್ಲಿ ವೀಳೆಯದೆಯನ್ನು ಬಳಸುವುದರಿಂದ ಹಲ್ಲುಗಳು, ವಸಡುಗಳು ಗಟ್ಟಿ ಆಗುವವು. ಜೊತೆಗೆ ರೋಗಮುಕ್ತ ಅನಿಸುವವು ಚಾಕು, ಬ್ಲೇಡು ಇಂತಹ ಹರಿತವಾದ ಆಯುಧಗಳ ಅಲುಗು ತಗುಲಿ ಗಾಯ ಆಗಿದ್ದರೆ ವೀಳೆದೆಯನ್ನು ನಿಂಬೆರಸದೊಂದಿಗೆ ನುಣ್ಣಗೆ ಅರೆದು, ಲೇಪಿಸದರೆ ಬೇಗ ಗುಣವಾಗುವುದು.
ಮಗುವಿಗೆ ಹೊಟ್ಟೆಯಲ್ಲಿ ಉಬ್ಬರ ಆಗಿದ್ದರೆ ಹರಳೆಣ್ಣೆ ಸವರಿದ ವೀಳೇದೆಲೆಯನ್ನು ಬಿಸಿಮಾಡಿ ಬೆಚ್ಚಗೆ ಹೊಟ್ಟೆಯ ಮೇಲೆ ಶಾಖ ಕೊಡುವುದರಿಂದ ಉಬ್ಬರ ಇಳಿಯುವುದು.