ಚಳಿಗಾಲದಲ್ಲಿ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ ನೆಗಡಿ ಕೆಮ್ಮು ಚಳಿಗಾಲದಲ್ಲಿ ಬರುವ ಸಾಮಾನ್ಯ ಸಮಸ್ಯೆ. ಹಾಗಂತ ನಿರ್ಲಕ್ಷ್ಯ ಸರಿಯಲ್ಲ. ಪದೇಪದೇ ವೈದ್ಯರು ಕೊಡುವ ಔಷಧಿ ಮಾತ್ರೆಗಳನ್ನು ಸೇವಿಸಿದರೆ ಮಕ್ಕಳ ರೋಗನಿರೋಧಕ ಶಕ್ತಿ ಕ್ರಮೇಣ ಕಡಿಮೆಯಾಗುತ್ತದೆ. ನಮ್ಮ ಅಡುಗೆ ಮನೆಯ ವಸ್ತುಗಳನ್ನು ಬಳಸಿ ಕಫ ಕೆಮ್ಮು ಶೀತ ನೆಗಡಿ ಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ರಾಸಾಯನಿಕ ಔಷಧಿಗಳಿಂದ ಉಂಟಾಗುವ ಹಾನಿಗಳನ್ನು ತಪ್ಪಿಸಬಹುದು. ಅದು ಹೇಗೆ ಎಂದು ಇವತ್ತಿನ ಮಾಹಿತಿಯನ್ನು ನೋಡೋಣ ಬನ್ನಿ. ಅರ್ಧ ಲೋಟ ನೀರಿಗೆ ಮೂರರಿಂದ ನಾಲ್ಕು ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಹರಿದ ನಂತರ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ
ಅದನ್ನು ಮಗುವಿಗೆ ಕುಡಿಸಿ ಇದರಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ದಾಲ್ಚಿನ್ನಿ ಶೀತಕ್ಕೆ ತುಂಬಾ ಔಷಧ. ಅರ್ಧ ಕಪ್ಪು ನೀರಿಗೆ ಜೇಷ್ಠ ಮತ್ತು ದಾಲ್ಚಿನ್ನಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ದಾಲ್ಚಿನಿ ಪೌಡರ್ ಅನ್ನು ಹಾಕಿ. ಬೆಚ್ಚಗಿನ ಈ ಕಷಾಯವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಮಗುವಿಗೆ ಕುಡಿಯಲು ಕೊಡಿ ಇದು ಶೀತಕ್ಕೆ ರಾಮಬಾಣ. ಪ್ರತಿರೋಧಕ ಶಕ್ತಿ ಹೆಚ್ಚಿಸಲು ಕಾಳುಮೆಣಸು ಮತ್ತು ನೆಲ್ಲಿಕಾಯನ್ನು ಬಳಸಿ. ಇವೆರಡನ್ನು ಮಿಕ್ಸ್ ಮಾಡಿ ಮಗುವಿಗೆ ಒಂದು ಚಮಚ ನೀಡಿ. ಇದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
ಪ್ರತಿದಿನ ಮಗು ಕುಡಿಯುವ ಹಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಸಿದರೆ ಒಳ್ಳೆಯದು. ಇದು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ಹೇಳು ಎಣ್ಣೆಗೆ 1 ಬೆಳ್ಳುಳ್ಳಿ ಅನ್ನು ಹಾಕಿ ಅದನ್ನು ಮಿಕ್ಸ್ ಮಾಡಿ. ಎಣ್ಣೆ ಬೆಚ್ಚಗೆ ಇರುವಾಗ ಮಗುವಿನ ಬೆನ್ನಿನ ಮೇಲೆ ಮಸಾಜ್ ಮಾಡಿ. ಹೀಗೆ ಮಾಡಿದರೆ ಶೀತ ಹಾಗೂ ಕೆಮ್ಮಿನ ಸಮಸ್ಯೆಯನ್ನು ನೀವು ನಿವಾರಣೆ ಮಾಡಬಹುದು.