ಶೃಂಗೇರಿ ಶಾರದಾಂಬೆಯ ಸನ್ನಿಧಾನದಲ್ಲಿರುವ ಮೂಗುತಿ ಮೀನು ನೀವು ನೋಡಿದ್ದೀರಾ. ಇದನ್ನು ನೋಡಿದವರು ಅದೃಷ್ಟವಂತರು ಅಂತೆ. ಹೌದು ಇನ್ನೇನು ದಸರಾ ಹಬ್ಬ ಶುರುವಾಗಲಿದೆ ಎಲ್ಲಾ ಕಡೆ ಶ್ರದ್ಧಾ ಭಕ್ತಿಯಿಂದ ನವ ದುರ್ಗೆಯರನ್ನು ಪೂಜಿಸಲಾಗುತ್ತದೆ. ಈ ನವರಾತ್ರಿ ಎಂದು ದರ್ಶನ ಮಾಡಿದರೆ ಸಂಕಷ್ಟಗಳು ನಿವಾರಣೆಯಾಗುತ್ತದೆ ಅಂತ ಹೇಳುತ್ತಾರೆ. ಇವತ್ತು ನಾವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆ ನಿಂತಿರುವ ಶೃಂಗೇರಿ ಶಾರದ ಮಾತೆಯ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ. ಶೃಂಗೇರಿಯ ಈ ಶಾರದ ಪೀಠವನ್ನು ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು.
ಒಮ್ಮೆ ಶಂಕರಾಚಾರ್ಯರು ತುಂಗಾ ನದಿಯ ತೀರದಲ್ಲಿ ಚಲಿಸುತ್ತಿರುವಾಗ ಒಂದು ಘಟ ಸರ್ಪ ತನ್ನ ಹೆಡೆಯನ್ನು ಬಿಚ್ಚಿ ಒಂದು ಗರ್ಭಿಣಿ ಕಪ್ಪಿಯನ್ನು ಸೂರ್ಯನ ಬಿಸಿಲಿನಿಂದ ಕಾಪಾಡುವುದನ್ನು ಕಂಡರು ತನ್ನ ನೈಸರ್ಗಿಕ ವೈರಿಯಾದ ಕಪ್ಪೆಗೆ ಅದು ತೋರಿಸುತ್ತಿರುವ ಅವಧಾರಿಯವನ್ನು ಕಂಡು ಶಂಕರಾಚಾರ್ಯರಿಗೆ ಶೃಂಗೇರಿ ನಿಜವಾಗಲೂ ಒಂದು. ವೈಶಿಷ್ಟ ಸ್ಥಳ ಎನಿಸಿತು ಅಲ್ಲಿ ಶಾರದ ಮಾತಿಯನ್ನು ಪ್ರತಿಷ್ಠಾಪಿಸಿದರು ಅಂತ ಹೇಳಲಾಗುತ್ತದೆ ಶಂಕರಾಚಾರ್ಯರು ಸ್ಥಾಪಿಸಿದಂತಹ ಈ ಪುಣ್ಯ ಕ್ಷೇತ್ರ ಯಜುರ್ವೇದ ಪೀಠ 17 ವರ್ಷ ಶಂಕರಾಚಾರ್ಯರು ಇಲ್ಲೇ ಕಳೆದಿದ್ದರು.
ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿದರೆ ಜ್ಞಾನಾರ್ಜನೆ ಹೆಚ್ಚುತ್ತದೆ ಅಂತ ಹೇಳುತ್ತಾರೆ ಹಾಗಾಗಿ ಹೆಚ್ಚಿನ ಜನರು ತಮ್ಮ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಇಲ್ಲಿನ ತುಂಗಾ ನದಿಯ ನೀರಿನಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಅಂತೆ. ಶಂಕರಾಚಾರ್ಯರು ಒಂದು ಮೀನನ್ನು ತಂದು ಆಮಿೀನಿಗೆ ಮೂಗುತಿಯನ್ನು ಹಾಕಿದ್ದಾರಂತೆ ಆ ಮೀನನ್ನು ಯಾರು ಹಿಡಿಯುವುದಿಲ್ಲ. ಇಲ್ಲಿನ 1000 ಮೀನುಗಳ ನಡುವೆ ಇರುವ ಆ ಮೂಗುತಿ ಮೀನನ್ನು ನೋಡಿದರೆ ಅದೃಷ್ಟ ಅಂತ ಹೇಳುತ್ತಾರೆ. ನವರಾತ್ರಿ ಉತ್ಸವವನ್ನು ಇಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ.
ಶಾರದೆಗೆ ವಿಶೇಷ ಆಭರಣಗಳನ್ನು ತೊಡಿಸುತ್ತಾರೆ ವಿಶೇಷ ಪೂಜೆ ಕೂಡ ನಡೆಯುತ್ತದೆ. ಆಭರಣಗಳಿಗೆ ಅಲಂಕೃತವಾದ ದೇವಿಯನ್ನು ಮೆರವಣಿಗೆಗೆ ಕರೆದುಕೊಂಡು ಹೋಗುತ್ತಾರೆ. ಇನ್ನು ಈ ದೇವಸ್ಥಾನಗಳಲ್ಲಿ ಆನೆಗಳು ಕೂಡ ಇವೆ. ನೀವು ಭಕ್ತರನ್ನು ತನ್ನ ಹತ್ತಿರ ಆಕರ್ಷಿಸುತ್ತೇವೆ. ಇನ್ನು ಈ ಆನೆಗಳಿಂದ ಆಶೀರ್ವಾದ ಪಡೆದರೆ ಒಳ್ಳೆಯದು ಅಂತ ಹೇಳುತ್ತಾರೆ. ಹಾಗಾಗಿ ಭಕ್ತರು ಆನೆಗಳನ್ನು ಮುಟ್ಟಿ ಆಶೀರ್ವಾದವನ್ನು ಪಡೆಯುತ್ತಾರೆ. ಈ ಚಿನ್ನದ ಮೂಗುತ್ತಿ ಇರುವ ಮೀನು ಭಕ್ತರಿಗೆ ದರ್ಶನ ನೀಡುತ್ತದೆ.
ಆ ಮೀನಿನ ದರ್ಶನ ಪಡೆದ ಹಲವಾರು ಭಕ್ತಾದಿಗಳು ತಮ್ಮ ಅದೃಷ್ಟವನ್ನು ಜೀವನದಲ್ಲಿ ಸಫಲತೆಯನ್ನು ಪಡೆದುಕೊಂಡಿದ್ದರೆ ಇದು ನೂರಕ್ಕೆ ನೂರರಷ್ಟು ನಿಜ ಶೃಂಗ ಗಿರಿ ಕ್ಷೇತ್ರದ ಶಾರದಾ ದೇವಿ ನಿಂತಿದ್ದು ಅತ್ಯಂತ ರೋಚಕ ಘಟನೆ. ಇಲ್ಲಿ ಅಕ್ಷರ ಅಭ್ಯಾಸ ಮಾಡಿದವರು ಸಾಕ್ಷಾತ್ ಶಾರದೇಯ ವರದಾನದ ಪುತ್ರರು ಆಗಿರುತ್ತಾರೆ ಇಲ್ಲಿ ಹರಿಯವ ನದಿಯಲ್ಲಿರುವ ಮೂಗುತ್ತಿ ಧರಿಸಿರುವ ಮೀನು ಕಂಡರೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಎಲ್ಲಾರ ನಂಬಿಕೆಯಾಗಿದೆ.