ಶ್ರೀ ಕಬ್ಬಾಳಮ್ಮ ದೇವಿಯ ದೇವಸ್ಥಾನ. ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ.
ತಾಯಿ ಕಬ್ಬಾಳಮ್ಮ ಬೇಡುವ ಭಕ್ತರನ್ನು ನಿರಾಶೆ ಗೊಳಿಸದೆ ಅವರ ಕಷ್ಟಗಳನ್ನು ನಿವಾರಿಸಿ ಇಚ್ಛೆಗಳನ್ನು ಈಡೇರಿಸುವ ತಾಯಿ ಕಬ್ಬಾಳಮ್ಮನ ಶಕ್ತಿ ಅಪಾರ ಈಕೆ ಬಲಗಡೆ ಹೂ ನೀಡುವುದರ ಮೂಲಕ ಸೂಚನೆ ನೀಡಿದರೆ ಕೆಲಸ ಖಂಡಿತವಾಗಿಯೂ ನೆಡದೆ ತಿರುತ್ತದೆ.
ತಾಯಿ ಕಬ್ಬಾಳಮ್ಮನ ಪವಾಡ : ಮೊದಲಿಗೆ ಇಲ್ಲಿ ರಾಜರು ಹಾಗೂ ಬ್ರಿಟಿಷರು ಆಳ್ವಿಕೆ ಇದ್ದಾಗ ಈ ಬೆಟ್ಟ ಶಿಕ್ಷೆ ವಿಧಿಸುವ ತಾಣವಾಗಿತ್ತಂತೆ. ತಪಿತಸ್ಥರನ್ನು ಈ ಬೆಟ್ಟದ ಮೇಲಿಂದ ತಳ್ಳಿ ಸಯಿಸುವಂತಹ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತಂತೆ ಅಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಸಾಯಿಸಲೆಂದು ಕೆರೆದುಕೊಂಡು ಬಂದಾಗ ಆ ವ್ಯಕ್ತಿ ಉಳಿಸೆಂದು ತಾಯಿ ಕಬ್ಬಾಳಮ್ಮನಿಗೆ ಭಕ್ತಿಯಿಂದ ಕೋರಿಕೊಂಡನಂತೆ, ನಂತರ ಆತನನ್ನು ಬೆಟ್ಟದ ಮೇಲಿನದ ತಳ್ಳಿದರೂ ಸಹ ಈ ತಾಯಿಯಲ್ಲಿನ ಶಕ್ತಿಯಿಂದ ಬದುಕುಳಿಯುತ್ತಾನೆ ಹಾಗೆ ಬದುಕುಳಿದ ವ್ಯಕ್ತಿ ಈ ಕಬ್ಬಾಳಮ್ಮ ತಾಯಿಗೆ ಚಿನ್ನದ ಕಿರೀಟವನ್ನುಮತ್ತು ಚಿನ್ನದ ಹಾರವನ್ನು ನೀಡಿದ ಹಾಗೆ ನೀಡಿದ ಚಿನ್ನದ ಕಿರೀಟವೇ ಇದೀಗ ಶಿವ ರಾತ್ರಿಯ ದಿನದಂದು ನೆಡೆಯುವ ಜಾತ್ರೆಯಲ್ಲಿ ಧರಿಸುವ ಈ ಕಿರೀಟ.
ಹಿಂದಿನಿಂದ ಇಲ್ಲಿ ನಂದಿಯೊಂದು ಕೆಲ ವರ್ಷಗಳಿಂದ ವಾಸವಾಗಿದೆ ದೇವಿಯ ಕೃಪಾ ಕಟಾಕ್ಷ ಅದಕ್ಕಿದ್ದು, ಯಾರಾದರೂ ತಮ್ಮ ಇಷ್ಟಾರ್ಥ ಹರಕೆಯ ರೂಪದಲ್ಲಿ ಕೇಳಿಕೊಳ್ಳುವರಿದ್ದರೆ ಅವರು ನೆಲದ ಮೇಲೆ ಮಲಗಬೇಕು ಆ ನಂದಿಯು ನಿಧಾನವಾಗಿ ಅವರ ಮೇಲೆ ನಡೆದುಕೊಂಡು ಹೋಗುತ್ತದೆ ಹೀಗೆ ಮಾಡುವುದರಿಂದ ತಮ್ಮ ಬೇಡಿಕೆಗಳನ್ನು ನಿವೇದಿಸಿಕೊಂಡ ಭಕ್ತರ ಇಷ್ಟಾರ್ಥಗಳು ಬಹು ಬೇಗನೆ ಸಿದ್ಧಿಸುತ್ತವಂತೆ ಹೀಗಾಗಿ ಕಾಣಿಕೆಯ ರೂಪದಲ್ಲಿ ಬಸವನ ಕೋಡುಗಳಲ್ಲಿ ಭಕ್ತರು ಹಣದ ನೋಟುಗಳನ್ನು ಸಿಕ್ಕಿಸಿರುವುದನ್ನು ಕಾಣಬಹುದು.
ಅಷ್ಟೇ ಅಲ್ಲ ಇಲ್ಲಿ ತಾಯಿಗೆ ಹೊದಿಸಿದ ಸೀರೆಯನ್ನು ಭಕ್ತರಿಗೆ ಕೊಡುವ ವಾಡಿಕೆ ಇದೆ. ಅಂತಹ ಸೀರೆಯನ್ನು ಕೊಂಡೊಯ್ದು ಮನೆಯಲ್ಲಿ ಪೂಜಿಸಿ ಒಳಿತನ್ನು ಕಂಡಂತಹ ಹಾಗೂ ಕಾಣುತ್ತಿರುವಂತಹ ಜೀವಂತ ಸಾಕ್ಷಿಗಳಿವೆ.