ವಾಸ್ತುಶಾಸ್ತ್ರವನ್ನು ಭಾರತದಲ್ಲಿ ತುಂಬಾ ನಂಬಲಾಗುತ್ತದೆ. ಇಂದು ನಾವು ವಾಸ್ತು ಶಾಸ್ತ್ರದ ಪ್ರಕಾರ ಸಂಜೆ ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ. ಸಂಜೆ ಈ ಕೆಲಸವನ್ನು ಮಾಡಿದರೇ, ಬಡತನದ ನೆರಳು ನಿಮ್ಮ ಮನೆಯಲ್ಲಿ ಮೊಳಗಲು ಪ್ರಾರಂಭಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಅನುಗ್ರಹವಿದೆ. ಅದಕ್ಕಾಗಿಯೇ ಮನೆಯ ಬಾಗಿಲುಗಳು ಸಂಜೆ ತೆರೆದಿರಬೇಕು, ಸೂರ್ಯ ಮುಳುಗುವ ಹೊತ್ತಿಲಿನಲ್ಲಿ ಯಾವುದೇ ಕಾರಣಕ್ಕೂ ಬಾಗಿಲು ಮುಚ್ಚಬಾರದು. ಈ ಸಮಯದಲ್ಲಿ ಮನೆಯ ಬಾಗಿಲು ಮುಚ್ಚಿದಾಗ ತಾಯಿ ಲಕ್ಷ್ಮಿಗೆ ಕೋಪ ಬರುತ್ತದೆ.
ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೇ ತುಳಸಿ ಎಲೆಗಳನ್ನು ಯಾವುದೇ ಕಾರಣಕ್ಕೂ ಸಂಜೆ ಮುರಿಯ ಬಾರದು. ಹಾಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲಾ ಸಂಜೆ ದೀಪ ಬೆಳಗುವ ಸಮಯದಲ್ಲಿ, ನಿಮ್ಮ ಮನೆಯ ಯಾರೊಬ್ಬರೂ ಯಾವುದೇ ಕಾರಣಕ್ಕೂ ಆಹಾರವನ್ನು ಸೇವಿಸಬಾರದು. ಈ ಸಮಯದಲ್ಲಿ ತಿನ್ನುವುದು ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ಹೇಳಲಾಗುತ್ತದೆ. ಇದು ವ್ಯಕ್ತಿಯ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಹಸಿವು ಹೆಚ್ಚಾಗಿ ಇದ್ದರೇ ಹಣ್ಣುಗಳನ್ನು ಸೇವಿಸಿ, ಆದರೆ ಊಟ ಮಾಡಬೇಡಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.